Mangalore Bike Accident : ಮಂಗಳೂರು : ಬೈಕ್ ಅಪಘಾತ ಇಬ್ಬರ ಬಾಲಕರ ಸಾವು

ಮಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಅಪ್ರಾಪ್ತ ವಯಸ್ಕರ ಬೈಕ್‌ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Mangalore Bike Accident) ಇಬ್ಬರು ಅಪ್ರಾಪ್ತ ಬಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಮೃತ ಪಟ್ಟವರು ಪಚ್ಚನಾಡಿ ಮೂಲದ ಪವನ್‌ (16 ವರ್ಷ) ಮತ್ತು ಚಿರಾಗ್‌ (15 ವರ್ಷ) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರಿಬ್ಬರು ಅಪ್ರಾಪ್ತ ವಯಸ್ಸಿನವಾರಾಗಿದ್ದಾರೆ. ಇತ್ತೀನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಅಜಾಗ್ರತೆಯಿಂದ ಇಂತಹ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದ್ದರಿಂದ ಪೋಷಕರು ನೋವವನ್ನು ಅನುಭವಿಸುವಂತೆ ಆಗಿದೆ.

ಇದನ್ನೂ ಓದಿ : Uttara Kannada suicide case‌ : ಉತ್ತರಕನ್ನಡ : ಮದುವೆಯಾಗಲು ಹೆಣ್ಣು ಸಿಗದ ಕಾರಣ ಮನನೊಂದ ಯುವಕ ಆತ್ಮಹತ್ಯೆಗೆ ಶರಣು

ಅಪಘಾತದ ವೇಳೆ ಸ್ಕೂಟರ್‌ ರಸ್ತೆ ಬದಿಯ ತಡೆಗೋಡೆಗೆ ಢಿಕಿ ಹೊಡೆದ ಪರಿಣಾಮವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಈ ಅಪಘಾತಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಕನ್ನಡ : ಮದುವೆಯಾಗಲು ಹೆಣ್ಣು ಸಿಗದ ಕಾರಣ ಮನನೊಂದ ಯುವಕ ಆತ್ಮಹತ್ಯೆಗೆ ಶರಣು

ಉತ್ತರಕನ್ನಡ : ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಇಚ್ಛಿಸಿರುವ ಯುವಕರಿಗೆ ಸೂಕ್ತ ಹೆಣ್ಣು ಸಿಗುತ್ತಿಲ್ಲ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕನೊಬ್ಬ ಈ ವಿಚಾರಕ್ಕೆ ಮನನೊಂದು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾನೆ.

ಸದ್ಯ ಈ ದುರಂತ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಮೃತ ದುರ್ದೈವಿ ನಾಗರಾಜ ಗಣಪತಿ ಗಾಂವ್ಕರ್‌ (35 ವರ್ಷ) ಯಲ್ಲಾಪುರದ ತೇಲಂಗಾರ ಕಿರಗಾರಿಮನೆ ನಿವಾಸಿ ಎಂದು ಗುರುತ್ತಿಸಲಾಗಿದೆ.

ಮೃತ ನಾಗರಾಜ್‌ ಅವರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಎಲ್ಲರಂತೆಯೇ ತಾನು ಮದುವೆಯಾಗಬೇಕೆಂದು ಕನಸು ಕಟ್ಟಿಕೊಂಡಿದ್ದರು. ಅಂತಯೇ ಹಲವು ಸಮಯದಿಂದ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇನ್ನು ಹತ್ತಿರದ ಸಂಬಂಧೀಕರು, ಬ್ರೋಕರ್‌ಗಳ ಬಳಿ ಹೆಣ್ಣು ಹುಡುಕಿಕೊಡುವಂತೆ ಹೇಳಿದ್ದರೂ ಕೂಡ ಎಲ್ಲಿಯೂ ಮೃತ ನಾಗರಾಜ್‌ ಮದುವೆ ಆಗಲೂ ಹೆಣ್ಣು ಸಿಗದೇ ಆತ್ಮಹತ್ಯೆಗೆ ಶರಣಾರಾಗಿದ್ದಾರೆ.

ಪ್ರತಿನಿತ್ಯ ಯಾಕೆ ನನಗೆ ಹೆಣ್ಣು ಸಿಗುತ್ತಿಲ್ಲ ಎಂದು ಚಿಂತೆಗೊಳ್ಳದ ನಾಗರಾಜ್‌ ತೀವ್ರ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ತನ್ನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Mangalore Bike Accident: Mangalore: Bike accident kills two boys

Comments are closed.