ದ.ಕ ಜಿಲ್ಲಾಧಿಕಾರಿಗಳ ಕಚೇರಿ ವಾಹನ ಚಾಲಕ ಬಾಲಕೃಷ್ಣ ಆತ್ಮಹತ್ಯೆ

ಮಂಗಳೂರು (Mangalore) : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕೃಷ್ಣ (58 ವರ್ಷ) (Balakrishna committed suicide) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಮಂಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಲಕೃಷ್ಣ ಹಲವು ವರ್ಷಗಳಿಂದಲೂ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರಿನ ಬಂಗ್ರಕೂಳೂರು ಮಾಲಾಡಿ ಕೋರ್ಟ್‌ ಬಳಿಯಲ್ಲಿರುವ ರಾಘವೇಂದ್ರ ನಿಲಯ ಎಂಬಲ್ಲಿ ವಾಸಿಸುತ್ತಿದ್ದರು. ಮನೆಯ ಮಹಡಿಗೆ ತೆರಳಿದ್ದ ಬಾಲಕೃಷ್ಣ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಕೃಷ್ಣ ಅವರು ಈ ಹಿಂದೆ ಆರೋಗ್ಯ ಇಲಾಖೆಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಹಲವು ವರ್ಷಗಳಿಂದಲೂ ಹೃದಯ ಹಾಗೂ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೇ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಬಾಲಕೃಷ್ಣ ಅವರ ಪುತ್ರ ಕಾವೂರು ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಇನ್ನು ಉಡುಪಿಯಲ್ಲಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೇಹಳ್ಳಿ ಗ್ರಾಮದ ಉದ್ದಲಗುಡ್ಡೆಯ ದುರ್ಗಾ ಎಂಬಲ್ಲಿ ನಡೆದಿದೆ. ಪೂಜಾ ಪಿ ಶೆಟ್ಟಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಹ;ವು ವರ್ಷಗಳಿಂದಲೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತನ್ನ ತಂದೆಯೊಂದಿಗೆ ವಾಸವಾಗಿದ್ದರು. ಮುಂಜಾನೆಯ ವೇಳೆಯಲ್ಲಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ತಂದೆ ಕರುಣಾಕರ ಹೆಗ್ಡೆ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Gang rape Bangalore : ಬೆಂಗಳೂರಲ್ಲಿ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಪ್ರಿಯಕರನಿಂದಲೇ ಗ್ಯಾಂಗ್‌ ರೇಪ್‌

ಇದನ್ನೂ ಓದಿ : ಉಚಿತ.. ಉಚಿತ.. ಉಚಿತ ಎನ್ನುತ್ತಲೇ ಗ್ರಾಹಕರಿಗೆ ವಿದ್ಯುತ್‌ ಶಾಕ್‌ ಕೊಟ್ಟ ರಾಜ್ಯ ಸರಕಾರ

Mangalore : Dakshina kannada District collector office driver Balakrishna committed suicide

Comments are closed.