Mangaluru blast update: ಹಿಂದೂ ವೇಷ ಧರಿಸಿ ಮಂಗಳೂರಿಗೆ ಬಂದಿದ್ದ ಶಾರೀಖ್‌ : ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ

ಮಂಗಳೂರು: (Mangaluru blast update) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಒಂದು ಸಿಕ್ಕಿದ್ದು, ಶಾರೀಖ್‌ ವೇಷ ಮರೆಸಿಕೊಂಡು ಕರಾವಳಿಗೆ ಈ ಹಿಂದೆ ಬಂದಿರುವುದಾಗಿ ತಿಳಿದು ಬಂದಿದೆ.

ಹೌದು.. ಉಗ್ರ ಶಾರೀಖ್‌ ಮಂಗಳೂರಿನಲ್ಲಿ ಬಾಂಬ್‌ ಸ್ಫೋಟ(Mangaluru blast update)ವಾಗುವ ಮುಂಚೆಯೇ ಮಂಗಳೂರಿಗೆ ಬಂದಿದ್ದ ಎನ್ನುವ ಮಾಹಿತಿ ತನಿಖೆಯ ನಂತರ ಬಯಲಾಗಿದೆ. ಈ ಹಿಂದೆಯೇ ಶಾರೀಖ್‌ ಬಾಂಬ್‌ ಸ್ಫೋಟಕ್ಕೆ ಮಾಸ್ಟರ್‌ ಪ್ಲಾನ್‌ ಮಾಡಿದ್ದ ಎನ್ನುವುದಕ್ಕೆ ತನಿಖೆಯ ನಂತರ ಸಿಕ್ಕ ಮಾಹಿತಿಯೇ ಸಾಕ್ಷಿ.

ಬಾಂಬ್‌ ಸ್ಫೋಟ ನಡೆಸುವ ಒಂದು ತಿಂಗಳ ಮೊದಲೇ ಉಗ್ರ ಶಾರೀಖ್‌ ಯಾರಿಗೂ ಅನುಮಾನ ಬಾರದಂತೇ ವೇಷ ಮರೆಸಿಕೊಂಡು ಕರಾವಳಿಗೆ ಬಂದಿದ್ದ ಎನ್ನುವುದು ತಿಳಿದು ಬಂದಿದೆ. ಹಿಂದೂಗಳ ವೇಷವನ್ನು ತೊಟ್ಟು, ಕೇಸರಿ ಶಾಲನ್ನು ಹಾಕಿಕೊಂಡು ಕರಾವಳಿಯಲ್ಲಿ ಓಡಾಡಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಹಿಂದೂಗಳ ರೀತಿಯೇ ನಡೆದುಕೊಳ್ಳುತ್ತಿದ್ದ. ಬಾಂಬ್‌ ಸ್ಫೋಟ ನಡೆಸುವ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಸಂಚನ್ನು ನಡೆಸುತ್ತಿದ್ದ. ಹಿಂದೂಗಳ ಹೆಸರಿನಲ್ಲೇ ದಾಖಲೆಗಳನ್ನು ಬಳಸಿ ಮಂಗಳೂರನ್ನು ರಕ್ತದ ಮಡುವಿನಲ್ಲಿ ಮಲಗಿಸಲು ದೊಡ್ಡ ಸಂಚನ್ನೇ ನಡೆಸಿದ್ದ ಎನ್ನಲಾಗುತ್ತಿದೆ.

ಹಿಂದೂಗಳ ಹೆಸರಿನಲ್ಲೇ ಹಲವು ಸಿಮ್‌ ಕಾರ್ಡ್‌ ಗಳನ್ನು ತೆಗೆದುಕೊಳ್ಳುತ್ತಿದ್ದ ಶಾರೀಖ್‌, ಅನುಮಾನ ಬರದಂತೆ ತನ್ನ ವಾಟ್ಸ್‌ ಆಪ್‌ ನಲ್ಲಿ ಶಿವನ ಪ್ರೊಫೈಲ್‌ ಫೋಟೋವನ್ನ ಕೂಡ ಹಾಕಿಕೊಂಡಿದ್ದ. ಅಲ್ಲದೇ ಪ್ರೇಮ್‌ ರಾಜ್‌ ಎನ್ನುವ ಹೆಸರಿನಲ್ಲೇ ಮೊಬೈಲ್‌ ರಿಪೇರಿ ಟ್ರೈನಿಂಗ್‌ ಗೆ ಸೇರಿಕೊಂಡಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ಯಾರಿಗೂ ತನ್ನ ಬಗ್ಗೆ ಅನುಮಾನ ಬರದಂತೇ ಬಾಂಬ್‌ ಬ್ಲಾಸ್ಟ್‌ ನಡೆಸಲು ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಸಂಚು ರೂಪಿಸಿದ್ದ.

ಇದನ್ನೂ ಓದಿ : Mangaluru bomb Blast case: ಕರಾವಳಿಯಲ್ಲಿ ಎನ್‍ಐಎ ಕೇಂದ್ರ: ಸಂಸದ ತೇಜಸ್ವಿ ಸೂರ್ಯ

ಇದನ್ನೂ ಓದಿ : Shraddha Walkar murder case : ನ್ಯಾಯಾಲಯಕ್ಕೆ ಅಫ್ತಾಬ್‌ನ ವಿಭಿನ್ನ ಹೇಳಿಕೆ : 4 ದಿನ ಪೊಲೀಸ್‌ ಕಸ್ಟಡಿ ವಿಸ್ತರಣೆ

ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಹೇಳಿಕೆಯ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಏನೋ ಬೆಂಕಿ ಕಾಣಿಸಿಕೊಂಡು ನಂತರ ವಾಹನಕ್ಕೆ ವ್ಯಾಪಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

(Mangaluru blast update) Regarding the Mangaluru bomb blast case, the case has got a big twist, it has come to know that Shareekh had come to the coast earlier in disguise.

Comments are closed.