Sanitary Pad : “ಸ್ಯಾನಿಟರಿ ಪ್ಯಾಡ್‌” ಬಳಸುವ ಹದಿಯರೆಯದ ಹೆಣ್ಣುಮಕ್ಕಳೇ ಹುಷಾರ್ ! ನಿಮ್ಮನ್ನು ಕಾಡಲಿದೆ ಕ್ಯಾನ್ಸರ್‌, ಬಂಜೆತನ

ನವದೆಹಲಿ : ಹೆಣ್ಣು ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟಾಗ ಮುಟ್ಟು ಅಥವಾ ಋತುಸ್ರಾವ ಎನ್ನುವುದು ದೇಹದಲ್ಲಿ ಉಂಟಾಗುವ ಒಂದು ನೈಸರ್ಗಿಕ ಪ್ರಕ್ರಿಯೆ. (Sanitary Pad) ಹೆಣ್ಣು ಹದಿಹರೆಯದ ವಯಸ್ಸಿಗೆ ಬಂದಾಗ ಮೈನೆರೆಯುತ್ತಾಳೆ ನಂತರ ಮೆನೋಪಾಸ್‌ ಹಂತಕ್ಕೆ ಬರುವವರೆಗೆ ಪ್ರತಿ ತಿಂಗಳು ಋತುಸ್ರಾವ ಸಹಜವಾದ ಪ್ರಕ್ರಿಯೆ. ಹದಿಹರೆಯಕ್ಕೆ ಕಾಲಿಡುವ ಹೆಚ್ಚಿನ ಹುಡುಗಿಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಹುಡುಗಿಯರು ತಮ್ಮ ತಿಂಗಳ ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಸ್ಯಾನಿಟರಿ ಪ್ಯಾಡ್‌ಗಳಿಗೆ ಸಂಬಂಧಿಸಿದ ಹೊಸ ಅಧ್ಯಯನವೊಂದು, ಈ ಪ್ಯಾಡ್‌ಗಳ ಬಳಕೆಯಿಂದ ಬಂಜೆತನ ಹಾಗೂ ಕ್ಯಾನ್ಸರ್‌ನಂತಹ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಈ ಅಧ್ಯಯನದಲ್ಲಿ ತೊಡಗಿರುವ ಎನ್‌ಜಿಒ ಟಾಕ್ಸಿಕ್ಸ್‌ ಲಿಂಕ್‌ನ ಕಾರ್ಯಕ್ರಮದ ಸಂಯೋಜಕ ಡಾ.ಅಮಿತ್‌, ಎಲ್ಲಾ ಕಡೆಗಳಲ್ಲಿ ಸುಲಭವಾಗಿ ಸಿಗುವ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಹಲವು ರಾಸಾಯನಿಕಗಳು ಪತ್ತೆಯಾಗಿದ್ದು, ಇವು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ತಿಳಿಸಿದರು. ಸ್ಯಾನಿಟರಿ ಪ್ಯಾಡ್‌ ಉತ್ಪನ್ನಗಳಲ್ಲಿ ಕ್ಯಾನ್ಸರ್‌ ಜನಕಗಳು, ಸಂತಾನೋತ್ಪತ್ತಿ ವಿಷಗಳು, ಎಂಡೋಕ್ರೈನ್‌ ಅಡ್ಡಿಪಡಿಸುವವರು ಮತ್ತು ಆಲರ್ಜಿಗಳಂತಹ ಅನೇಕ ಗಂಭೀರ ರಾಸಾಯನಿಕಗಳು ಕಂಡು ಬಂದಿವೆ ಎಂದು ಡಾ. ಅಮಿತ್‌ ಹೇಳಿದ್ದಾರೆ.

ಎನ್‌ಜಿಒ ಟಾಕ್ಸಿಕ್ಸ್‌ ಲಿಂಕ್‌ ನಡೆಸಿದ ಅಧ್ಯಯನವು ಇಂಟರ್ನ್ಯಾಷನನಲ್‌ ಪೊಲ್ಯೂಟಂಟ್‌ ಎಲಿಮಿನೇಷನ್‌ ನೆಟ್‌ವರ್ಕ್‌ನ ಪರೀಕ್ಷೆಯ ಒಂದು ಭಾಗವಾಗಿದೆ. ಈ ಪರೀಕ್ಷೆಯಲ್ಲಿ ಭಾರತದಲ್ಲಿ ಮಾರಾಟವಾಗುವ ೧೦ ಸ್ಯಾನಿಟರಿ ನ್ಯಾಪ್‌ಕಿನ್‌ ಬ್ರಾಂಡ್‌ಗಳ ಉತ್ಪನ್ನವನ್ನು ಒಳಗೊಂಡಿದೆ. ಅಧ್ಯಯನದ ಸಮಯದಲ್ಲಿ, ಸಂಶೋಧಕರು ಎಲ್ಲಾ ಮಾದರಿಗಳಲ್ಲಿ ಥಾಲೇಟ್‌ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳ ಕುರುಹಗಳನ್ನು ಕಂಡುಕೊಂಡರು. ಈ ಎರಡು ಮಾಲಿನ್ಯಕಾರಕಗಳು ಕ್ಯಾನ್ಸರ್‌ ಕೋಸಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನುವುದು ಆತಂಕಾರಿ ವಿಷಯವಾಗಿದೆ.

ಈ ಅಧ್ಯಯನದಲ್ಲಿ ತೊಡಗಿರುವ ಎನ್‌ಜಿಒದ ಮತ್ತೊಬ್ಬ ಕಾರ್ಯಕ್ರಮ ಸಂಯೋಜಕಿ ಆಕಾಂಕ್ಷಾ ಮೆಹ್ರೋತ್ರಾ ಪ್ರಕಾರ, ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯಿಂದ ರೋಗ ರುಜಿನಗಳು ಹೆಚ್ಚಾಗಿರುವುದು ಆತಂಕಕಾರಿ ಸಂಗತಿ. ವಾಸ್ತವವಾಗಿ, ಈ ಗಂಭೀರ ರಾಸಾಯನಿಕಗಳು ಮಹಿಳೆಯ ಚರ್ಮಕ್ಕಿಂತ ಯೋನಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಈ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ. ಎಂದಿದ್ದಾರೆ.

ಇದನ್ನೂ ಓದಿ : Ginger Health Tips:ಶುಂಠಿರಸದಿಂದ ಸೈನಸ್‌, ಮೈಗ್ರೇನ್‌ ನಿವಾರಣೆ

ಇದನ್ನೂ ಓದಿ : Chemical Free Shampoo:ರಾಸಾಯನಿಕ ಮುಕ್ತ ಶಾಂಪೂ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಇದನ್ನೂ ಓದಿ : Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

ಭಾರತದದ್ಯಾಂತ ಹದಿಯರೆಯಕ್ಕೆ ಕಾಲಿಟ್ಟ ಹೆಣ್ಣು ಮಕ್ಕಳು ಸ್ಯಾನಿಟರಿ ಪ್ಯಾಡ್‌ನ್ನು ಬಳಸುತ್ತಿದ್ದು, ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, 15 ರಿಂದ 24 ವರ್ಷದೊಳಗಿನ ಶೇಕಡಾ 64ರಷ್ಟು ಭಾರತೀಯ ಹುಡುಗೀಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ. ಋತುಸ್ರಾವ ಸಂದರ್ಭದಲ್ಲಿ ಬಟ್ಟೆಯ ಬದಲು ಸ್ಯಾನಿಟರಿ ಪ್ಯಾಡ್‌ ಉತ್ತಮ ಎನ್ನುವ ಹಿನ್ನಲೆಯಲ್ಲಿ ಇದರ ಬಳಕೆ ಹೆಚ್ಚಳವಾಗಿದೆ. IMARC ಗ್ರೂಪ್‌ ಪ್ರಕಾರ, ಭಾರತವು ನೈರ್ಮಲ್ಯ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. 2021ರಲ್ಲಿಯೇ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ವಹಿವಾಟು 618 ಮಿಲಿಯನ್‌ ಡಾಲರ್‌ ಆಗಿತ್ತು. ಅಲ್ಲದೇ ಇದು 2022ರ ಹೊತ್ತಿಗೆ ಈ ಮಾರುಕಟ್ಟೆಯು 1.2 ಬಿಲಿಯನ್‌ ಡಾಲರ್‌ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

Teenage girls who use “sanitary pads” beware! Cancer, infertility will trouble you

Comments are closed.