Massive Heart attack death: ಹೃದಯಾಘಾತಕ್ಕೆ ಬಲಿಯಾದ 18 ವರ್ಷದ ವಿದ್ಯಾರ್ಥಿ

ತೆಲಂಗಾಣ: (Massive Heart attack death) ಇತ್ತೀಚೆಗೆ ಯುವ ವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, ತೆಲಂಗಾಣದಲ್ಲೂ ಕೂಡ 18 ವರ್ಷದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯು ಮುಸ್ತಾಬಾದ್ ಮಂಡಲದ ಪೋತ್ಗಲ್ ಮೂಲದವನಾಗಿದ್ದು, ಬಾಲಕೃಷ್ಣ, ಖಾಸಗಿ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಪ್ರಥಮ ವರ್ಷ ಓದುತ್ತಿದ್ದನು.

18 ವರ್ಷದ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೃದಯಾಘಾತಕ್ಕೂ ಮೊದಲು ಆತ ಕೆಲವು ಹೃದಯಾಘಾತದ ಲಕ್ಷಣಗಳನ್ನು ಅನುಭವಿಸಿದ್ದು, ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ದೆಹಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ (Massive Heart attack death).

ಈಗಿನ ಹವಾಮಾನ ಹಾಗೂ ಆಹಾರ ವ್ಯವಸ್ಥೆಯ ಕಾರಣದಿಂದಾಗಿ ವಯಸ್ಸನ್ನು ಲೆಕ್ಕಿಸದೇ ಹೃದಯಾಘಾತ (Massive Heart attack death) ಎಲ್ಲರ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ಹೃದಯಾಘಾತದ ಬಗ್ಗೆ, ಮತ್ತು ಹೃದಯಾಘಾತವಾಗದಂತೆ ಆರೋಗ್ಯವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದರ ಕುರಿತು ಕೆಲವಷ್ಟು ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳಿ.

ಹೃದಯಾಘಾತ ಎಂದರೇನು?
ರಕ್ತದ ಹರಿವಿನ ಅಲಭ್ಯತೆಯಿಂದಾಗಿ ಹೃದಯವು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುವ ಸ್ಥಿತಿಯನ್ನು ಹೃದಯಾಘಾತ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಪ್ರಾಥಮಿಕವಾಗಿ ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಮುಂತಾದ ಅಪಾಯಕಾರಿ ಅಂಶಗಳಿಂದ ಪ್ರಚೋದಿಸಲ್ಪಡುತ್ತದೆ.

ಹೃದಯಾಘಾತದ ಲಕ್ಷಣಗಳು
ಹೃದಯಾಘಾತವು ಸಾರ್ವಕಾಲಿಕ ರೋಗಲಕ್ಷಣಗಳೊಂದಿಗೆ ಬರುವುದಿಲ್ಲ, ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳಿಲ್ಲದೇ ಹಠಾತ್ತನೇ ಹೃದಯಾಘಾತವಾಗಬಹುದು. ಆದರೂ ಮುಂಬರುವ ಹೃದಯಾಘಾತದ ಕೆಲವು ಸಾಮಾನ್ಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಪಟ್ಟಿ ಇಲ್ಲಿದೆ:

ವಿಪರೀತ ಬೆವರುವುದು
ಅಸ್ವಸ್ಥತೆ
ಎದೆ ನೋವು
ದೇಹದ ಮೇಲ್ಭಾಗದಲ್ಲಿ ಮರಗಟ್ಟುವಿಕೆ(ವಿಶೇಷವಾಗಿ ಕುತ್ತಿಗೆ, ದವಡೆಗಳು, ಇತ್ಯಾದಿ.)
ಉಸಿರಾಟದ ಸಮಸ್ಯೆಗಳು
ತಲೆತಿರುಗುವಿಕೆ
ಆಯಾಸ
ದೇಹದಲ್ಲಿನ ಅಸಮತೋಲನ

ಹೃದಯ ಸಂಬಂಧಿ ಕಾಯಿಲೆಯಿದ್ದಲ್ಲಿ ಮೇಲೆ ತಿಳಿಸಿದ ಚಿಹ್ನೆಗಳು ಸಾಮಾನ್ಯವಾಗಿ ಜನರಲ್ಲಿ ಕಂಡುಬರುತ್ತವೆ. ಇದರ ಹೊರತಾಗಿ ಈ ರೋಗಲಕ್ಷಣಗಳು ಕಾಣಿಸಿಕೊಂಡಾಗ, ತಕ್ಷಣವೇ ಅವರ ಆರೋಗ್ಯವನ್ನು ಪರೀಕ್ಷಿಸಬೇಕು. ಇನ್ನೂ ಹೃದಯವನ್ನು ಆರೋಗ್ಯಕರವಾಗಿಡಲು ಅನುಸರಿಸಬೇಕಾದ ಹಲವಾರು ಸಲಹೆಗಳಿವೆ.

ಇದನ್ನೂ ಓದಿ : Sugar free food Benefits : ಒಂದು ತಿಂಗಳ ಕಾಲ ಸಕ್ಕರೆ ರಹಿತ ಆಹಾರದಿಂದ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾ ?

ಇದನ್ನೂ ಓದಿ : Post workout nutrition: ವರ್ಕೌಟ್‌ನಿಂದ ಸ್ನಾಯುಗಳು ಬಲಗೊಳ್ಳುತ್ತಿಲ್ಲವೇ? ಹಾಗಿದ್ದರೆ ವ್ಯಾಯಾಮದ ನಂತರ ಈ ಆಹಾರಗಳನ್ನು ಸೇವಿಸಿ

ಇದನ್ನೂ ಓದಿ : Obesity: ಒಬೆಸಿಟಿಯಿಂದ ಕ್ಯಾನ್ಸರ್‌ ಬರತ್ತಾ; ದೇಹದ ತೂಕ ಹೆಚ್ಚಾದರೆ ಆಗುವುದಾದರೂ ಏನು…

ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲವು ಜೀವನಶೈಲಿ ಅಭ್ಯಾಸಗಳು:
ಆರೋಗ್ಯಕರ ಆಹಾರಗಳನ್ನು ತಿನ್ನುವುದು
ನಿಯಮಿತವಾಗಿ ವ್ಯಾಯಾಮ ಮಾಡುವುದು
ಧೂಮಪಾನ ಮಾಡದೇ ಇರುವುದು
ಮದ್ಯಪಾನ ತಪ್ಪಿಸುವುದು

Massive Heart attack death: An 18-year-old student succumbed to a heart attack

Comments are closed.