ಛತ್ತೀಸ್‌ಗಢ: (Mine collapse) ಗಣಿ ಕುಸಿತದಿಂದ ಕನಿಷ್ಠ 7 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಮಲ್ಗಾಂವ್‌ನಲ್ಲಿ ಶುಕ್ರವಾರ ನಡೆದಿದೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೃತ ದೇಹಗಳನ್ನು ಹೊರತೆಗೆಯಲು ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತಿದೆ.
ಛತ್ತೀಸ್‌ಗಢದಲ್ಲಿ ಗಣಿ ಕಾರ್ಯಾಚರಣೆಯ ವೇಳೆ ಗಣಿ ಕುಸಿತವಾಗಿದ್ದು, ಅವಶೇಷದಡಿಗೆ ಸಿಲುಕಿ ಏಳು ಜನರು ಸಾವನ್ನಪ್ಪಿದ್ದಾರೆ. ಹಲವರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ. ಜಿಲ್ಲಾ ಕೇಂದ್ರವಾದ ಜಗದಲ್‌ಪುರದಿಂದ ಸುಮಾರು 12 ಕಿಮೀ ದೂರದಲ್ಲಿರುವ ನಗರನಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಂತ್ರಸ್ತರು ಗಣಿಯಲ್ಲಿ ಮಣ್ಣನ್ನು ಅಗೆಯುತ್ತಿದ್ದಾಗ ಅದರ ಒಂದು ಭಾಗವು ಒಳಕ್ಕೆ ಬಿದ್ದಿತು.ಇದರಿಂದಾಗಿ ಅವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು, ”ಎಂದು ಅವರು ಹೇಳಿದರು.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಮೂಲಗಳ ಪ್ರಕಾರ, ಸತ್ತ ಏಳು ಜನರಲ್ಲಿ ಆರು ಮಹಿಳೆಯರು ಎಂದು ಹೇಳಲಾಗಿದೆ.
ಇದನ್ನೂ ಓದಿ : Rape and Murder Case: ಅಪ್ಪನ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಂದ ಆರೋಪಿ
ಇದನ್ನೂ ಓದಿ : Zubin Nautiyal Injured:ಮೆಟ್ಟಿಲಿನಿಂದ ಬಿದ್ದ ಬಾಲಿವುಡ್ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಆಸ್ಪತ್ರೆಗೆ ದಾಖಲು
ಇದನ್ನೂ ಓದಿ : Rape and Murder Case: ಅಪ್ಪನ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಂದ ಆರೋಪಿ
(Mine collapse) At least 4 people were killed and many injured due to mine collapse in Malgaon, Chhattisgarh on Friday. Police and SDRF teams have rushed to the spot and rescue operations are underway. JCB machines are being used to exhume the dead bodies.