ಮುಂಬೈ: ಅಪ್ರಾಪ್ತ ಮಗಳ (Minor Daughter Rape Case) ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯ ಪೋಸ್ಕೋ ಕಾಯ್ದೆಯಡಿಯಲ್ಲಿ ಪಾಪಿ ತಂದೆಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಕೌಟುಂಬಿಕ ಕಾರಣದ ಹಿನ್ನೆಲೆಯಲ್ಲಿ ಸುಮಾರು ಏಳು ವರ್ಷದ ಹಿಂದೆ ಬಾಲಕಿಯ ತಾಯಿ ತಂದೆಯನ್ನು ತೊರೆದಿದ್ದಳು. ಹೀಗಾಗಿ ಸಂತ್ರಸ್ತ ಬಾಲಕಿ ತಂದೆ, ಚಿಕ್ಕಪ್ಪ ಹಾಗೂ ಅಜ್ಜಿಯ ಜೊತೆಯಲ್ಲಿ ವಾಸವಾಗಿದ್ದಳು. ಮಗಳು ಯಾರೊಂದಿಗೆ ಬೆರೆಯಲು ತಂದೆ ಬಿಡುತ್ತಿರಲಿಲ್ಲ. ಆದರೆ ಪಾಪಿ ತಂದೆಯೇ ಅಪ್ರಾಪ್ತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ (Daughter Rape )ಎಸಗಿದ್ದಾನೆ. ಇದೇ ವಿಚಾರಕ್ಕೆ ತಂದೆ ಹಾಗೂ ಮಗಳ ಮೇಲೆ ಪದೇ ಪದೇ ಜಗಳ ನಡೆಯುತ್ತಿದ್ದು, ಅಂತಿಮವಾಗಿ ಸಂತ್ರಸ್ತೆಯ ಅಜ್ಜಿ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದ್ದರು.

ವಿಶೇಷ ನ್ಯಾಯಾಧೀಶರಾದ ಭಾರ್ತಿ ಕಾಳೆ ಕಳೆದ ವಾರ ಆರೋಪಿಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಾಮುಕ ತಂದೆಯನ್ನು ಆರೋಪಿ ಎಂದು ಘೋಷಿಸಿದ್ದಾರೆ. ಅಲ್ಲದೇ ಮೊಮ್ಮಗಳ ನೆರವಿಗೆ ನಿಂತ ಅಜ್ಜಿಯ ಕಾರ್ಯವನ್ನು ನ್ಯಾಯಾಲಯ ಪ್ರಶಂಸಿದೆ. ಅಲ್ಲದೇ ಕಾಮುಕ ತಂದೆಗೆ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಕೋಟ ಮಣೂರು ಬಳಿ ಭೀಕರ ಅಪಘಾತ : ಓರ್ವ ಸಾವು, ಇಬ್ಬರು ಗಂಭೀರ
ಕೋಟ : ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿಯಾಗಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪದ ಮಣೂರಿನಲ್ಲಿ ನಡೆದಿದೆ. ಪ್ರಸನ್ನ ಮೃತ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಮೂವರು ಯುವಕರು ಬೈಕಿನಲ್ಲಿ ಕುಂದಾಪುರದ ಕಡೆಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಮಣೂರು ಬೊಬ್ಬರ್ಯ ಕಟ್ಟೆಯ ಬಳಿಯಲ್ಲಿ ಲಾರಿಯೊಂದು ಪಂಚರ್ ಆಗಿ ನಿಂತಿತ್ತು. ಬಸ್ ಹಿಂಬಾಲಿಸಿಕೊಂಡು ಬಂದಿದ್ದ ಬೈಕ್ ಸವಾರನಿಗೆ ನಿಂತಿದ್ದ ಲಾರಿ ಗೋಚರಿಸದೆ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಪೋಸ್ಟ್ ವೆಡ್ಡಿಂಗ್ ಪೋಟೋ ಶೂಟ್ ವೇಳೆ ದುರಂತ : ಮದುಮಗ ಸಾವು
ಇದನ್ನೂ ಓದಿ : ಪ್ರೀತಿಸಿ ಮದುವೆಯಾದ 4 ತಿಂಗಳಲ್ಲೇ ಪತ್ನಿಯ ಕೊಂದ ಪತಿ
Minor Daughter Rape Case : Man Gets 25 Years Jail Maharashtra