Grammy Award : ನನಗೆ ಡಬಲ್ ಪ್ರಶಸ್ತಿ ಬಂದಂತಾಯಿತು! ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಮಾತು

ಸಂಗೀತ ನಿರ್ದೇಶಕ ರಿಕ್ಕಿ ಕೇಜ್( Music Director Ricky Kej) ಬಹಳ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಅವರ ಡಿವೈನ್ಸ್ ಟೈಡ್ಸ್ (Devine Tides) ಎಂಬ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ (Grammy Award )ದೊರೆತಿರುವುದು. ಈ ಬಾರಿ ಅವರು ಕಲಾವಿದ ಸ್ಟೀವರ್ಟ್ ಕೋಪ್ ಲ್ಯಾಂಡ್ ಜೊತೆಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ರಿಕ್ಕಿ ಕೇಜ್ ಅವರಿಗೆ ಎರಡನೆ ಬಾರಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಎನ್ನುವ ಆಲ್ಬಂಗೆ 57ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಆಗ ರಿಕ್ಕಿ ಅವರ ವಯಸ್ಸು 32 ವರ್ಷ. ಅತಿ ಕಿರಿಯ ವಯಸ್ಸಿಗೆ ಗ್ರ್ಯಾಮಿ(Grammy Award) ಪಡೆದ ಹೆಗ್ಗಳಿಕೆ ಹೊಂದಿದ್ದ ಇವರು ಮತ್ತೊಮ್ಮೆ ಖುಷಿಪಡಲು ಇದೇ ಗ್ರ್ಯಾಮಿ ಕೂಡ ಕಾರಣವಾಗಿದೆ.

‘ಈ ಸಲ ನನಗೆ ಡಬಲ್ ಪ್ರಶಸ್ತಿ. ಗ್ರ್ಯಾಮಿ ಜೊತೆಗೆ ನನ್ನ ನೆಚ್ಚಿನ ಸಂಗೀತಗಾರ ಸ್ಟೀವರ್ಟ್ ಕೋಪ್ ಲ್ಯಾಂಡ್ ಜೊತೆ ವೇದಿಕೆ ಹಂಚಿಕೊಂಡದ್ದು ಕೂಡ ನನ್ನ ಪಾಲಿಗೆ ಪ್ರಶಸ್ತಿ. ಇದೊಂದು ಮರೆಯಲಾಗದ ಕ್ಷಣ’ ಎಂದು ರಿಕ್ಕಿ ಸಂತೋಷದಿಂದ ಹೇಳಿಕೊಳ್ಳುತ್ತಾರೆ.

ರಿಕ್ಕಿಗೆ ಪ್ರಶಸ್ತಿ ದೊರೆತ ನಂತರ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆಯಂತೆ. ‘ನನಗೆ ಬಹಳ ಖುಷಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿರುವುದು. ಪರಿಸರ ಆಧಾರಿತವಾಗಿ ಸಂಗೀತ ಮಾಡಬೇಕು ಅಂತ ಅನಿಸಿದ್ದು ಅವರ ಜೊತೆ ಮಾತನಾಡಿದ ಮೇಲೆಯೇ. ಅವರನ್ನು ಮೊದಲು ಭೇಟಿಯಾಗಿದ್ದು 2015ರ ಗ್ರ್ಯಾಮಿ ಪ್ರಶಸ್ತಿ ಸ್ವೀಕರಿಸಿದ ನಂತರ. ಅವರೇ ನನಗೆ ಆಹ್ವಾನ ನೀಡಿದ್ದರು. ಸುಮಾರು ಒಂದು ತಾಸು ಇಬ್ಬರು ಮಾತಕತೆ ನಡೆಸಿದ್ದೆವು. ಪರಿಸರ, ಕ್ಲೈಮ್ಯಾಟ್ ಚೇಂಜ್ ನಂಥ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೆವು. ಏಳು ವರ್ಷಗಳ ನಂತರ ಮತ್ತೊಮ್ಮೆ ಗ್ರ್ಯಾಮಿ (Grammy Award) ಪ್ರಶಸ್ತಿ ದೊರೆತಿದೆ. ಈಗ ಪ್ರಧಾನಿಗಳು ಮತ್ತೊಮ್ಮೆ ನನ್ನನ್ನು ಅಭಿನಂದಿಸಿರುವುದು ಇನ್ನೊಂದು ಪ್ರಶಸ್ತಿ ಸಿಕ್ಕ ಸಂತೋಷ ನೀಡಿದೆ’ ಎಂದು ರಿಕ್ಕಿ ಹೇಳಿದ್ದಾರೆ.

ಇದನ್ನೂ ಓದಿ: Poonam Pandey : ನಾನು ನಿಮಗಾಗಿ ಬೆತ್ತಲಾಗ್ತೇನೆ : ಅಭಿಮಾನಿಗಳಿಗೆ ಬಾಲಿವುಡ್ ನಟಿ ಪೂನಂಪಾಂಡೆ ಆಫರ್

ರಿಕ್ಕಿ ಕೇಜ್ ಅವರನ್ನು ಅಭಿನಂದಿಸಿದವರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಇದ್ದಾರೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ನಟಿ ರವೀನಾ ಟಂಡನ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ರಿಕ್ಕಿಕೇಜ್ ಅವರನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದಾರೆ. ರಿಕ್ಕಿಕೇಜ್ ಎಲ್ಲರಿಗೂ ಅಭಿನಂದಿಸಿ, ‘ನನ್ನ ಸಾಧನೆಗೆ ಇವರ ಹಾರೈಕೆ, ಹರಕೆಗಳೆಲ್ಲವೂ ಸ್ಫೂರ್ತಿಯಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rajamouli And Mahesh Babu : ಮಹೇಶ್ ಬಾಬು ಸಿನಿಮಾಗೆ ಕಥೆ ಮಾಡಲು ಒಂದು ವರ್ಷಬೇಕು! ಗಾಳಿಸುದ್ದಿಗೆ ಬ್ರೆಕ್‌ ಹಾಕಿದ ರಾಜಮೌಳಿ

(Grammy Award Ricky Kej happy to get Grammy Award for the second time)

Comments are closed.