Mumbai Cyber Crime: ಬ್ಯಾಂಕ್ KYC ಅಪ್‌ಡೇಟ್ ಹೆಸರಲ್ಲಿ ನಿವೃತ್ತ ರೈಲ್ವೆ ಉದ್ಯೋಗಿಗೆ ವಂಚನೆ

ಥಾಣೆ: (Mumbai Cyber Crime) 72ರ ಹರೆಯದ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರಿಗೆ ವಂಚಕರು ಬ್ಯಾಂಕ್‌ ಕೆವೈಸಿ ನೆಪದಲ್ಲಿ ಕರೆ ಮಾಡಿದ್ದು, ಗೌಪ್ಯ ವಿವರಗಳನ್ನು ಪಡೆದುಕೊಂಡು ನಿವೃತ್ತ ಉದ್ಯೋಗಿಯ ಬ್ಯಾಂಕ್‌ ಖಾತೆಯಿಂದ ತಲಾ 7.38 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ. ವಿಷಯ ತಿಳಿದ ನಿವೃತ್ತ ಅಧಿಕಾರಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ವಂಚಕರ ವಿರುದ್ದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರಿಗೆ ಒಂದು ಕರೆ ಬಂದಿದ್ದು, ಕಡ್ಡಾಯ ಕೆವೈಸಿ ದಾಖಲೆಗಳನ್ನು ನವೀಕರಿಸದ ಕಾರಣ ನಿಮ್ಮ ಬ್ಯಾಂಕ್‌ ಖಾತೆಯನ್ನು ಮುಚ್ಚಲಾಗಿದೆ ಎಂದಿದ್ದಾರೆ. ಇದಾದ ಬಳಿಕ ಕಂಗಾಲಾದ ವ್ಯಕ್ತಿ ಮುಂದಕ್ಕೆ ಏನು ಮಾಡಬೇಕು ಎಂಬುದಾಗಿ ಕೇಳಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡ ವಂಚಕರು ಅವರಿಂದ ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ಪಾಸ್‌ ವರ್ಡ್‌, ಒಟಿಪಿ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ದಾಖಲೆಗಳನ್ನು ಪಡೆದ ವಂಚಕರು ಮಾಸಿಕ ಪಿಂಚಣಿ ಮತ್ತು ನಿವೃತ್ತಿ ಉಳಿತಾಯ ಸೇರಿದಂತೆ ವ್ಯಕ್ತಿ ಮತ್ತು ಅವರ ಪತ್ನಿಯ ಬ್ಯಾಂಕ್ ಖಾತೆಗಳಿಂದ ಹಣವನ್ನು ಡೆಬಿಟ್ ಮಾಡಿದ್ದಾರೆ. ಡೆಬಿಟ್‌ ಮಾಡಿದ ನಂತರ ಫಿಕ್ಸೆಡ್‌ ಡೆಪಾಸಿಟ್‌ ನಲ್ಲಿ ಈ ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಹೇಳಿ ವ್ಯಕ್ತಿಯನ್ನು ನಂಬಿಸಿದ್ದಾರೆ. ವಂಚನೆಗೊಳಗಾದ ವ್ಯಕ್ತಿ ತಲಾ ಬ್ಯಾಂಕ್‌ ಖಾತೆಯಿಂದ ತಲಾ 7.38 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದು, ನಂತರ ಇದನ್ನು ವಂಚನೆ ಬಗ್ಗೆ ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ.

“ಸಂತ್ರಸ್ತರಿಗೆ ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿರಲಿಲ್ಲ ಮತ್ತು ಅವರ ಫೋನ್‌ನಲ್ಲಿ ರಹಸ್ಯ ಎಟಿಎಂ ಪಾಸ್‌ವರ್ಡ್‌ಗಳು ಮತ್ತು ಉಳಿತಾಯ ಖಾತೆಗಳ ವಿವರಗಳಂತಹ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳಲು ಕರೆ ಮಾಡಿದವರ ಸೂಚನೆಗಳನ್ನು ಅನುಸರಿಸಿದರು. ವಂಚಕರು ಮಾಸಿಕ ಪಿಂಚಣಿ ಮತ್ತು ನಿವೃತ್ತಿ ಉಳಿತಾಯ ಸೇರಿದಂತೆ ವ್ಯಕ್ತಿ ಮತ್ತು ಅವರ ಪತ್ನಿಯ ಬ್ಯಾಂಕ್ ಖಾತೆಗಳಿಂದ ಹಣವನ್ನು ಡೆಬಿಟ್ ಮಾಡಿದ್ದಾರೆ. ಡೆಬಿಟ್ ಮಾಡಿದ ಮೊತ್ತವನ್ನು ನಂತರ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಲಾಯಿತು ಎಂದಿದ್ದಾರೆ” ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ : Rape and threat: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬೆದರಿಕೆ: ಆರೋಪಿ ಅರೆಸ್ಟ್‌

ಇದನ್ನೂ ಓದಿ : Dhruv helicopter crash: ಭಾರತೀಯ ನೌಕಾಪಡೆಯ ಧ್ರುವ್‌ ಹೆಲಿಕಾಪ್ಟರ್‌ ಪತನ: ಮೂವರು ಸಿಬ್ಬಂದಿಗಳ ರಕ್ಷಣೆ

ಇದೀಗ ವಂಚನೆಗೊಳಗಾದ ವ್ಯಕ್ತಿಯ ದೂರಿನ ಆಧಾರದ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ ಮತ್ತು 66 ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಮುಂದಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Drugs in Iranian boat: ಇರಾನ್ ದೋಣಿ ವಶಕ್ಕೆ ಪಡೆದ ಐಸಿಜಿ: 425 ಕೋಟಿ ರೂ ಮೌಲ್ಯದ ಡ್ರಗ್ಸ್ ಪತ್ತೆ

Mumbai Cyber Crime: Retired Railway Employee Fraud in the Name of Bank KYC Update

Comments are closed.