Murder Case : ಪ್ರೀತಿಸಿದ ಹುಡುಗಿಯನ್ನು ಕೊಂದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಪ್ರಿಯತಮ

ನವದೆಹಲಿ : ತನ್ನ ಜೀವನ ಸಂಗಾತಿಯನ್ನು ಕೊಲೆ(Murder Case) ಮಾಡಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಎಸೆದ ಘಟನೆ ರಾಷ್ಟ್ರದ ರಾಜಧಾನಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶ್ರದ್ಧಾ ಅಫ್ತಾಭ್‌ ಅಮೀನ್‌ ಜೊತೆ ಅನೇಕ ವರ್ಷದಿಂದ ಲಿವಿಂಗ್‌ ವಿತ್‌ ರಿಲೇಶನ್ಸ್‌ನಲ್ಲಿ ಇರುತ್ತಾಳೆ. ಕಳೆದ ಮೇ 18 ರಂದು ಶ್ರದ್ಧಾ ಆರೋಪಿಯನ್ನು ಮದುವೆ ಆಗುವಂತೆ ಕೇಳುತ್ತಾಳೆ. ಇದೇ ವಿಷಯಕ್ಕೆ ಜಗಳವಾಡಿದ ನಂತರ ಅಫ್ತಾಬ್ ಅಮೀನ್ ಪೂನಾವಾಲಾ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದ್ದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿರುತ್ತಾನೆ. ನಂತರ ಆಕೆಯ 35 ತುಂಡುಗಳಾಗಿ ಕತ್ತರಿಸಿ ದೇಹವನ್ನು ಇಡಲು ಫ್ರಿಡ್ಜ್ ಖರೀದಿಸಿರುತ್ತಾನೆ. 18 ದಿನಗಳ ನಂತರ ತುಂಡರಿಸಿದ ಆಕೆಯ ದೇಹವನ್ನು ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಒಂದೊಂದಾಗಿ ತುಂಡುಗಳನ್ನು ಪ್ರಾಣಿಗಳು ತಿನ್ನಲಿ ಎಂದು ಎಸೆಯುತ್ತಿದ್ದಾನೆ ಎಂದು ಪೊಲೀಸ್‌ ತಿಳಿಸಿದ್ದಾರೆ.

26 ವರ್ಷದ ಶ್ರದ್ಧಾ ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆ ಅಫ್ತಾಬ್‌ ಅಮೀನ್ ಪೂನಾವಲಾನ್ನು ಭೇಟಿಯಾಗುತ್ತಾಳೆ. ಭೇಟಿಯ ನಂತರ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿ, ಒಟ್ಟಿಗೆ ಇರುತ್ತಿದ್ದರು. ಆಕೆಯ ಕುಟುಂಬವು ಅವರ ಸಂಬಂಧವನ್ನು ಒಪ್ಪದ ನಂತರ, ಇಬ್ಬರು ದೆಹಲಿ ಮೆಹ್ರೌಲಿಯ ಫ್ಲಾಟ್‌ನಲ್ಲೊ ಬಂದು ವಾಸಿಸಲು ಪ್ರಾರಂಭಿಸಿದರು. ಶ್ರದ್ಧಾ ತನ್ನ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಳು. ಇದರಿಂದ ಆಕೆಯ ಕುಟುಂಬ ಸದಸ್ಯರಿಗೆ ಅವಳು ಎಲ್ಲಿದ್ದಾಳೆಂದು ತಿಳಿಯುತ್ತದೆ. ಕೆಲ ದಿನಗಳಿಂದ ಶ್ರದ್ಧಾ ಫೇಸ್‌ಬುಕ್‌ನಲ್ಲಿ ಏನನ್ನೂ ಹಾಕದೇ ಇದ್ದಾಗ ಆಕೆಯ ಮನೆಯವರಿಗೆ ಅನುಮಾನ ಬಂದಿರುತ್ತದೆ.

ಇದನ್ನೂ ಓದಿ : Rape College Student : ಎನರ್ಜಿ ಮಾತ್ರೆ ನೀಡಿ ಅತ್ಯಾಚಾರ : ಕಾಲೇಜು ವಿದ್ಯಾರ್ಥಿನಿ ಸಾವು, ಆರೋಪಿ ಅರೆಸ್ಟ್

ಇದನ್ನೂ ಓದಿ : Human Sacrifice: ಸತ್ತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸನ್ನೇ ಬಲಿ ಕೊಡಲು ಮುಂದಾದ ಮಹಿಳೆ.. ಆಮೇಲೆ ನಡೆದಿದ್ದೇ ಬೇರೆ..

ಇದನ್ನೂ ಓದಿ : Crime News: ಎರಡನೇ ಪತ್ನಿಯನ್ನು ಜೈಲಿಗಟ್ಟಲು ತನ್ನ ಮಗಳನ್ನೇ ಬಲಿ ಕೊಟ್ಟ ಪಾಪಿ ತಂದೆ

ಸ್ವಲ್ಪ ಸಮಯದ ನಂತರ ಶ್ರದ್ಧಾ ತನ್ನ ಕುಟುಂಬದ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರು. ನವೆಂಬರ್ 8 ರಂದು ಆಕೆಯ ತಂದೆ ವಿಕಾಸ್ ಮದನ್ ಮಗಳನ್ನು ಪರೀಕ್ಷಿಸಲು ದೆಹಲಿಗೆ ಬಂದಿದ್ದರು. ಅವರು ಫ್ಲಾಟ್ ತಲುಪಿದಾಗ ಬಾಗಿಲು ಹಾಕಿತ್ತು. ಆಕೆಯ ಇಲ್ಲದಿರುವುದನ್ನು ಗಮನಿಸಿದ ತಂದೆ ಮೆಹ್ರೌಲಿ ಪೊಲೀಸರನ್ನು ಕೂಡಲೇ ಸಂಪರ್ಕಿಸಿದ್ದಾರೆ. ಮೊದಲಿಗೆ ಅಪಹರಣದ ಆರೋಪದ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಪೂನಾವಾಲಾ ಅವರನ್ನು ಶನಿವಾರ ಬಂಧಿಸಿದ್ದಾರೆ. ಶ್ರದ್ಧಾ ತನ್ನನ್ನು ಮದುವೆಯಾಗಲು ಬಯಸಿದ್ದರಿಂದ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತನಿಖೆಯ ವೇಳೆ ಆರೋಪಿ ಹೇಳಿರುತ್ತಾನೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

Murder Case: Beloved killed the girl he loved and cut her body into 35 pieces

Comments are closed.