ಮಂಗಳೂರು : Bike horn Murder : ಬೈಕ್ ಹಾರನ್ ವಿಚಾರಕ್ಕೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯಕಂಡ ದಾರುಣ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಪೊನ್ನೊಡಿಯ ಲಗೂನ್ ಕೊಕೊನಟ್ ಹೋಟೆಲ್ ಸಮೀಪದಲ್ಲಿ ಸಂಭವಿಸಿದೆ. ಕೊಲೆಯಾದ ಯುವಕನನ್ನು ಮೊಹಮ್ಮದ್ ಆಸಿಫ್ ಎಂದು ಗುರುತಿಸಲಾಗಿದೆ.
ದೂರುದಾರ ಮೊಹಮ್ಮದ್ ನೌಫಲ್ ಕೊಲೆಯಾದ ಮೊಹಮ್ಮದ್ ಆಸಿಫ್ನ ಗೆಳೆಯನಾಗಿದ್ದಾನೆ. ಸೋಮವಾರ ತಡರಾತ್ರಿ ಮೊಹಮ್ಮದ್ ನೌಫಲ್ಗೆ ಕರೆ ಮಾಡಿದ ಮೊಹಮ್ಮದ್ ಆಸಿಫ್ ಶಾಂತಿಯಂಗಡಿ ಸ್ಟೋರ್ ಬಳಿಯಲ್ಲಿ ಮಾರಿಪಳ್ಳ ಮಹಮ್ಮದ್ ನೌಫೆಲ್ ಹಾಗೂ ಮಹಮ್ಮದ್ ನೌಸಿರ್ ನನ್ನ ಸ್ಕೂಟಿಯನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ನನಗೆ ಧಮ್ಕಿ ಹಾಕುತ್ತಿದ್ದಾರೆ. ಹೀಗಾಗಿ ನೀನು ಈ ಕೂಡಲೇ ಇಲ್ಲಿಗೆ ಬಾ ಎಂದು ಕೊಲೆಯಾದ ಆಸಿಫ್ ಸ್ನೇಹಿತ ಮೊಹಮ್ಮದ್ ನೌಫಲ್ಗೆ ಕರೆ ಮಾಡಿ ತಿಳಿಸಿದ್ದ ಎನ್ನಲಾಗಿದೆ.
ಸ್ನೇಹಿತ ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಪಡೆದ ನೌಫಲ್ ಕೊಲೆಯಾದ ಆಸಿಫ್ನ ತಮ್ಮ ಅನ್ಸಾರ್, ಗೆಳೆಯರಾದ ಕೌಶಿಕ್ ಹಾಗೂ ನಿಜಾಮುದ್ದೀನ್ ಜೊತೆಯಲ್ಲಿ ಶಾಂತಿಯಂಗಡಿ ಸ್ಟೋರ್ ಬಳಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಮೊಹಮ್ಮದ್ ಆಸಿಫ್ಗೆ ಆರೋಪಿಗಳಾದ ಮೊಹಮ್ಮದ್ ನೌಫೆಲ್ ಮಾರಿಪಳ್ಳ ಹಾಗೂ ಮೊಹಮ್ಮದ್ ನೌಸಿರ್ ಕೊಲೆ ಧಮ್ಕಿ ಹಾಕಿದ್ದರು. ಅಲ್ಲದೇ ಲಗೂನ್ ಕೊಕನಟ್ ಹೋಟೆಲ್ ಕಡೆಗೆ ಬಂದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಆವಾಜ್ ಹಾಕಿ ಆರೋಪಿಗಳು ತೆರಳಿದ್ದರು ಎನ್ನಲಾಗಿದೆ.
ಲಗೂನ್ ಕೊಕನಟ್ ಹೋಟೆಲ್ ಬಳಿಗೆ ಆಸಿಫ್ನ ಜೊತೆಗೆ ತೆರಳಿದ ಸ್ನೇಹಿತರು ಆರೋಪಿಗಳ ಬಳಿಯಲ್ಲಿ ನೀವೇಕೆ ನಮ್ಮ ಸ್ನೇಹಿತನಿಗೆ ಕೊಲೆ ಬೆದರಿಕೆ ಹಾಕಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ನೌಫಲ್ ಅವಾಚ್ಯ ಶಬ್ದಗಳಲ್ಲಿ ಆಸಿಫ್ಗೆ ನಿಂದಿಸುತ್ತಾ ಆತನ ಹೊಟ್ಟೆ ಹಾಗೂ ಎದೆಗೆ ಚೂರಿ ಹಾಕಿದ್ದಾನೆ . ನೋವಿನಿಂದ ಆಸಿಫ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆಸಿಫ್ನನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಗೆಳೆಯರು ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಂದು ಆಸಿಫ್ನನ್ನು ಮಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತಾದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಏನಿದು ದ್ವೇಷ..? : ಈ ಸಂಪೂರ್ಣ ಘಟನೆ ನಡೆಯಲು ಕಾರಣ ಆರೋಪಿಗಳು ಹಾಗೂ ಕೊಲೆಯಾದ ವ್ಯಕ್ತಿಯ ನಡುವೆ ಇದ್ದ ಹಾರನ್ ದ್ವೇಷ. ಪ್ರತಿ ದಿನ ಲಗೂನ್ ಕೊಕೊನಟ್ ಹೋಟೆಲ್ ಬಳಿಯಲ್ಲಿ ಆಸಿಫ್ ಈ ಆರೋಪಿಗಳು ಕಂಡಾಗಲೆಲ್ಲ ತನ್ನ ಡಿಯೋ ಸ್ಕೂಟಿಯಿಂದ ಹಾರನ್ ಮಾಡುತ್ತಿದ್ದನಂತೆ. ತಮ್ಮನ್ನು ನೋಡಿ ಸುಖಾ ಸುಮ್ಮನೇ ಹಾರನ್ ಹಾಕುತ್ತಾನೆಂದು ಕೆರಳಿದ್ದ ಮೊಹಮ್ಮದ್ ನೌಸಿರ್ ಹಾಗೂ ಮೊಹಮ್ಮದ್ ನೌಫೆಲ್ ಆಸಿಫ್ಗೆ ಕೊಲೆ ಬೆದರಿಕೆ ಹಾಕಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನು ಓದಿ : Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ
ಇದನ್ನೂ ಓದಿ : Electricity Bill Scam : ಎಚ್ಚರ ! ವಿದ್ಯುತ್ತ ಬಿಲ್ ಕಟ್ಟಿ ಎಂದೂ ನಿಮ್ಮ ಹಣ ದೋಚಬಹುದು!!
Murder due to hate over bike horn Bike horn Murder