Don’t throw Garbage Beware : ಎಲ್ಲೆಂದರಲ್ಲಿ ಕಸ ಎಸಿತೀರಾ ? ನಿಮ್ಮ ಮೇಲೆ FIR ದಾಖಲಾಗಬಹುದು ಹುಷಾರ್

ಸಿಲಿಕಾನ್ ಸಿಟಿ ಬೆಂಗಳೂರು ಎದುರಿಸುತ್ತಿರೋ ನೊರೆಂಟು ಸವಾಲುಗಳಲ್ಲಿ ಕಸದ ಸಮಸ್ಯೆ ಪ್ರಮುಖವಾದದ್ದು. ಬೆಂಗಳೂರಿನಲ್ಲಿ ಸೃಷ್ಟಿಯಾಗೋ ಲಕ್ಷಾಂತರ ಟನ್ ಕಸದ ನಿರ್ವಹಣೆಯೇ ಬಿಬಿಎಂಪಿ ಗೆ ಒಂದು ಸಮಸ್ಯೆಯಾದರೇ, ಇನ್ನೊಂದೆಡೆ ನಗರದಲ್ಲಿ ಎಲ್ಲೆಂದರಲ್ಲಿ ಬೀಳೋ ಕಸಗಳನ್ನು ಸ್ವಚ್ಚಗೊಳಿಸೋದು ಇನ್ನೊಂದು ಸವಾಲು. ಜನರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಿ ಸೋತಿರೋ ಬಿಬಿಎಂಪಿ ಈಗ ಕಠಿಣ ಕ್ರಮಕ್ಕೆ (Don’t throw Garbage Beware) ಮುಂದಾಗಿದ್ದು, ಇನ್ಮುಂದೇ ಕಂಡ ಕಂಡಲ್ಲಿ ಕಸ ಎಸೆದರೇ ಅಂತಹವರ ವಿರುದ್ದ FIR ದಾಖಲಾಗಲಿದೆ.

ಹೌದು ಇನ್ಮುಂದೇ ನಿಮ್ಮ ಮನೆಯ ಕಸವನ್ನು ಎಲ್ಲೋ ಒಂದು ಕಡೆ ಎಸೆದು ಕೈ ತೊಳೆದುಕೊಳ್ಳೋಣ ಅಂತ ನೀವಂದ್ರುಕೊಂಡಿದ್ರೇ ಹುಶಾರಾಗಿರಿ. ಯಾಕಂದ್ರೇ ಇನ್ಮುಂದೇ ಸಿಲಿಕಾನ್ ಸಿಟಿಯಲ್ಲಿ ಕಂಡ ಕಂಡಲ್ಲಿ ಕಸ ಎಸೆದರೆ ಬೀಳುತ್ತೆ ಕ್ರಿಮಿನಲ್ ಕೇಸ್. ನಗರವನ್ನು ಕಸ ಮುಕ್ತ ಮಾಡೋಕೆ ಬಿಬಿಎಂಪಿಯಿಂದ ಕ್ರಿಮಿನಲ್ ಮೊಕದ್ದಮೆ ಹೂಡುವ ನಿರ್ಧಾರಕ್ಕೆ ಬಂದಿದೆ. ‌ ದಿನದಿಂದ ದಿನಕ್ಕೆ ನಗರದಲ್ಲಿ GVP ಹೆಚ್ಚುತ್ತಿರುವ ಹಿನ್ನೆಲೆ ಈ ತೀರ್ಮಾನ ಕೈಗೊಂಡಿದೆ. GVP ಅಂದ್ರೇ Garbage Vulnerable Point. ಅಂದ್ರೇ ಜನರು ಕಸದ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಇನ್ಮುಂದೇ ನೀವು ಅಲ್ಲಲ್ಲಿ ಕಸ ತಂದು ಎಸೆಯುವವರ ಬಗ್ಗೆ ಮಾಹಿತಿ ಕೊಟ್ಟರೆ ಅವರ ವಿರುದ್ಧ ಪೊಲೀಸ್‌ ಕಂಪ್ಲೀಟ್ ದಾಖಲಾಗುತ್ತದೆ.

ಬಿಬಿಎಂಪಿ ನೇಚರ್ ಆ್ಯಕ್ಟ್ ಆಡಿಯಲ್ಲಿ ದೂರು ದಾಖಲಿಸಲು ಪಾಲಿಕೆ ನಿರ್ಧಾರಿಸಿದ್ದು, ಸಾರ್ವಜನಿಕರು ಸಿಸಿಟಿವಿ ಅಥವಾ ಮೊಬೈಲ್ ಫೂಟೇಜ್ ತಂದು ಕೊಟ್ಟರೆ ಅದನ್ನು ಪರಿಶೀಲಿಸಿ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ. ಈಗಾಗಲೇ ನಗರದ ಬಹುತೇಕ ಆಯಕಟ್ಟಿನ ಸ್ಥಳಗಳಲ್ಲಿ ಸ್ವತಃ ಬಿಬಿಎಂಪಿಯಿಂದಲೇ ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ. ಆದರೂ ಕೆಲವರು ರಾತ್ರೋರಾತ್ರಿ ಕಸ ತಂದು ಸುರಿದು ವಾತಾವರಣ ಕಲುಷಿತಗೊಳಿಸುವ ಪ್ರವೃತ್ತಿ ಮುಂದುವರೆಸಿದ್ದಾರೆ. ಇದರ ವಿಲೇವಾರಿಯೂ ಬಿಬಿಎಂಪಿ ಪಾಲಿಗೆ ತಲೆನೋವಾಗಿದೆ. ಹೀಗಾಗಿ ಇದನ್ನು ತಡೆಗಟ್ಟಲು ಬಿಬಿಎಂಪಿಯಿಂದ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧಾರ ಮಾಡಿದೆ.

ಈ ಬಗ್ಗೆ ಬಿಬಿಎಂಪಿಯ SWM ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾಹಿತಿ ನೀಡಿದ್ದು, ನಗರದಲ್ಲಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇದೆ. ಆದರೂ ಜನರು ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ತಂದು ಎಸೆಯುವ ಪ್ರವೃತ್ತಿ ಮುಂದುವರೆಸಿದ್ದಾರೆ. ಇದರಿಂದ ಕಸದ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ನಾವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : EXCLUSIVE : ಶಾಸಕ ಜಮೀರ್‌ ಖಾನ್‌ ಗೆ ಐಎಂಎ ಉರುಳು : ಇತಿಹಾಸದಲ್ಲೇ ಎಂಎಲ್‌ಎ ಮನೆ ಕದ ತಟ್ಟಿದ ಎಸಿಬಿ

ಇದನ್ನೂ ಓದಿ : Uttar Pradesh : ಹಿಂದೂ ದೇವರ ಫೋಟೋ ಇರುವ ಕಾಗದದ ಮೇಲೆ ಮಾಂಸ ಮಾರಾಟ : ಆರೋಪಿ ಬಂಧನ

Don’t throw Garbage Beware FIR may be filed against you

Comments are closed.