ಮೈಸೂರು : ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ರೌಡಿಶೀಟರ್ ಇತ್ತೀಚಿಗಷ್ಠೆ ಜೈಲಿನಿಂದ ಬಿಡುಗಡೆಯಾಗಿದ್ದ. ತನ್ನ ಬರ್ತಡೇ ಸ್ನೇಹಿತರ ಜೊತೆಗೆ ಆಚರಿಸೋದಕ್ಕೆ ಕನಸು ಕಂಡಿದ್ದ. ಗ್ರ್ಯಾಂಡ್ ಆಗಿಯೇ ಬರ್ತಡೇ ಆಚರಣೆಯನ್ನೂ ಮಾಡಿದ್ದ, ಆದರೆ ಹುಟ್ಟುಹಬ್ಬದ ದಿನವೇ ತನ್ನ ಸ್ನೇಹಿತರಿಂದಲೇ ಹತ್ಯೆಯಾಗಿದ್ದಾರೆ.

ಈ ಘಟನೆ ನಡೆದಿರೊ ಮೈಸೂರಿನ ಕುವೆಂಪು ನಗರದಲ್ಲಿ. ರೌಡಿಶೀಟರ್ ಆನಂದ ಎಂಬಾತನೇ ಕೊಲೆಯಾದವನು. ಕುವೆಂಪು ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದ ಆನಂದ್ ನಿನ್ನೆ ತನ್ನ ಬರ್ತಡೇ ಪಾರ್ಟಿ ಆಯೋಜಿಸಿದ್ದ, ಸ್ನೇಹಿತರನ್ನೂ ಆಹ್ವಾನಿಸಿದ್ದ.

ಆದರೆ ಪಾರ್ಟಿ ನಡೆಯುವಾಗ, ಮಾತಿಗೆ ಮಾತು ಬೆಳೆದು ಸ್ನೇಹಿತನೋರ್ವ ಬಿಯರ್ ಬಾಟಲಿಯಿಂದ ಇರಿದು ರೌಡಿಶೀಟರ್ ಆನಂದ್ ನನ್ನು ಕೊಲೆ ಮಾಡಿದ್ದಾರೆ. ರೌಡಿಶೀಟರ್ ಆನಂದ ಕುಮಾರಸ್ವಾಮಿ ಎಂಬವರನ್ನು ಕೊಲೆ ಮಾಡಿ ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಕುವೆಂಪುನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.
