ಜಮೀನಿಗೆ ನೀರು ಹರಿಸಲು ಗಲಾಟೆ : ಓರ್ವ ಸಾವು, ಐವರು ಗಂಭೀರ

0

ಶಿವಮೊಗ್ಗ : ಜಮೀನಿಗೆ ನೀಯರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೋರ್ವ ಹತ್ಯೆ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾಪುರ ಗ್ರಾಮದಲ್ಲಿ ನಡೆದಿದೆ.
ಕರಿಯಪ್ಪ (50 ವರ್ಷ) ಕೊಲೆಯಾದ ದುರ್ದೈವಿ. ಗ್ರಾಮದಲ್ಲಿ ಜಮೀನಿಗೆ ನೀರು ಹರಿಸುವ ವಿಚಾರಕ್ಕೆ ಆಗಾಗಾ ಗಲಾಟೆಯಾಗುತ್ತಿತ್ತು. ಅಂತೆಯೇ ನಿನ್ನೆ ರಾತ್ರಿ ಕೂಡ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು, ಈ ವೇಳೆಯಲ್ಲಿ ಜಗದೀಶ್, ಮಂಜಪ್ಪ, ರಮೇಶಪ್ಪ ಹಾಗೂ 10 ಜನರ ತಂಡ ಕರಿಯಪ್ಪನ ಕುಟುಂಬದ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದೆ. ಘಟನೆಯಲ್ಲಿ ಕರಿಯಪ್ಪ ಸಾವನ್ನಪ್ಪಿದ್ರೆ, ಐವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.