Murder mystery: 11 ವರ್ಷದ ಬಾಲಕಿಯ ಕೊಲೆ ರಹಸ್ಯ ಭೇದಿಸಲು ಸಹಾಯವಾಯ್ತು ಆ ಒಂದು ಮಿಸ್ಡ್ ಕಾಲ್

ನವದೆಹಲಿ: (Murder mystery) ಫೆಬ್ರವರಿ 9 ರಂದು ಶಾಲೆಗೆ ಬಸ್‌ ನಲ್ಲಿ ತೆರಳಿದ್ದ ಬಾಲಕಿ ಮನೆಗೆ ವಾಪಾಸ್‌ ಬರದೇ ಕಾಣೆಯಾಗಿದ್ದಳು. ಆಕೆ ಕಾಣೆಯಾಗಿದ್ದ ದಿನ ಆಕೆಯ ತಾಯಿಗೆ ಒಂದು ಮಿಸ್ಡ್‌ ಕಾಲ್‌ ಬಂದಿದ್ದು, ಅದರಿಂದಾಗಿ ಪೊಲೀಸರು ಬಾಲಕಿಯ ಕೊಲೆ ರಹಸ್ಯವನ್ನು ಭೇದಿಸಿದರು. ಬಾಲಕಿಯನ್ನು ಅಪಹರಿಸಿ ಕೊಲೆಯಾದ ಹನ್ನೆರಡು ದಿನಗಳ ನಂತರ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದು ಮಾತ್ರ ನಿಜಕ್ಕೂ ಅಚ್ಚರಿ.

ಫೆಬ್ರವರಿ 9 ರಂದು ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದ್ದ 11 ವರ್ಷದ ಬಾಲಕಿ ಅಂದು ಬೆಳಗ್ಗೆ ಶಾಲೆಗೆಂದು ಮನೆಯಿಂದ ಹೊರಟು ನಂತರ ನಾಪತ್ತೆಯಾಗಿದ್ದಳು. ಅಂದು ಬೆಳಗ್ಗೆ 11.50ರ ಸುಮಾರಿಗೆ ಆಕೆಯ ತಾಯಿಗೆ ಮಿಸ್ಡ್ ಕಾಲ್ ಬಂದಿದ್ದು, ಮತ್ತೆ ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿತ್ತು. ಸಂತ್ರಸ್ತೆಯ ಪೋಷಕರು ಬಾಲಕಿ ನಾಪತ್ತೆಯಾದ ದಿನವೇ ಆಕೆ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ಮಗಳನ್ನು ಕಿಡ್ನಾಪ್ ಮಾಡಿರುವ ಶಂಕೆ ವ್ಯಕ್ತವಾಗಿ ಪೋಷಕರು ದೂರು ದಾಖಲಿಸಿದ್ದು, ಫೆ.10ರಂದು ಪ್ರಕರಣ ದಾಖಲಾಗಿದೆ.

ತನಿಖೆಯ ಸಮಯದಲ್ಲಿ, ಪೊಲೀಸರು ಬಾಲಕಿಯ ತಾಯಿಗೆ ಬಂದಿದ್ದ ಮಿಸ್ಡ್‌ ಕಾಲ್‌ ಮೂಲಕ ಮೊಬೈಲ್ ಸಂಖ್ಯೆಯ ಲೊಕೇಶನ್‌ ಪತ್ತೆಹಚ್ಚಿ ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ದಾಳಿ ನಡೆಸಿದರು. ಈ ವೇಳೆ ಆರೋಪಿ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಿದಾಗ ಆತನ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಫೆಬ್ರವರಿ 9 ರಂದು ಬಾಲಕಿಯನ್ನು ಕೊಂದು ಶವವನ್ನು ಘೇವ್ರಾ ಮೋರ್ ಬಳಿ ಎಸೆದಿರುವುದಾಗಿ ಬಹಿರಂಗಪಡಿಸಿದ್ದಾನೆ. ಮಾಹಿತಿ ಮೇರೆಗೆ 12 ದಿನಗಳ ನಂತರ ಆರೋಪಿಯು ಶವವನ್ನು ಎಸೆದ ಸ್ಥಳಕ್ಕೆ ಪೊಲೀಸ್ ತಂಡವನ್ನು ಕರೆದೊಯ್ದಿದ್ದು, ಘಟನಾ ಸ್ಥಳವನ್ನು ಪರೀಕ್ಷಿಸಲು ವಿಧಿವಿಜ್ಞಾನ ತಂಡವನ್ನು ಕರೆಸಲಾಯಿತು. ಅಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಆರೋಪಿಯನ್ನು ರೋಹಿತ್ ಅಲಿಯಾಸ್ ವಿನೋದ್ ( 21 ವರ್ಷ) ಎಂದು ಗುರುತಿಸಲಾಗಿದೆ.

ಅಂದು ಬೆಳಗ್ಗೆ 7:30ರ ಸುಮಾರಿಗೆ ತನ್ನ ಮಗಳು ಶಾಲೆಗೆ ಹೊರಟು ಬಸ್‌ನಲ್ಲಿ ಹೋಗಿದ್ದಳು ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಸಂಜೆಯಾದರೂ ಮನೆಗೆ ಬಾರದೆ ಇದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿ ದೂರು ದಾಖಲಿಸಿದ್ದಾರೆ. ನಾಲ್ವರು ಸಹೋದರರಲ್ಲಿ ಹುಡುಗಿ ಒಬ್ಬಳೇ ತಂಗಿಯಾಗಿದ್ದು, ಮನೆಯಲ್ಲಿ ಎಲ್ಲರೂ ಅವಳನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಆಕೆಯ ತಾಯಿ ಹೇಳಿದರು.

ಇದನ್ನೂ ಓದಿ : Lorry Car Major Accident: ಕಾರು, ಲಾರಿ ನಡುವೆ ಭೀಕರ ಅಪಘಾತ: 5 ಮಂದಿ ಸ್ಥಳದಲ್ಲೇ ಸಾವು, 3 ಮಂದಿಗೆ ಗಂಭೀರ ಗಾಯ

ಇದನ್ನೂ ಓದಿ : Truck-pickup accident: ಟ್ರಕ್‌ಗೆ ಪಿಕಪ್ ವಾಹನ ಢಿಕ್ಕಿ: 11 ಮಂದಿ ಸಾವು, ಹಲವರಿಗೆ ಗಾಯ

ಅಧಿಕಾರಿಗಳ ಪ್ರಕಾರ, ಹತ್ಯೆಯ ನಿಖರವಾದ ಉದ್ದೇಶವು ಇನ್ನೂ ಹೊರಹೊಮ್ಮಿಲ್ಲ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಲಿದೆ. ಪ್ರಕರಣದ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

Murder mystery: A missed call helped solve the murder mystery of an 11-year-old girl

Comments are closed.