Murder mystery: ಪ್ರೇಯಸಿ ಕರೆದಳೆಂದು ಆಕೆಯ ಮನೆಗೆ ಹೋದವ ಹೆಣವಾದ.. ಖತರ್ನಾಕ್ ಮರ್ಡರ್ ಸ್ಟೋರಿಯನ್ನು ಪೊಲೀಸರು ಭೇದಿಸಿದ್ದು ಹೇಗೆ ಗೊತ್ತಾ..

ಬೆಳಗಾವಿ: Murder mystery: 20 ದಿನಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದು ಕುಂದಾನಗರಿ ಬೆಳಗಾವಿ ಜನರನ್ನೇ ಬೆಚ್ಚಿಬೀಳಿಸಿದೆ. ಪ್ರೇಯಸಿ ಕರೆದಳೆಂದು ಆಕೆಯ ಮನೆಗೆ ಹೋಗಿದ್ದ ಯುವಕ ಬರ್ಬರವಾಗಿ ಕೊಲೆಯಾಗಿದ್ದ. ಇದೀಗ ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಘಟನೆಯ ಹಿನ್ನೆಲೆ:
ನ.12ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಹೊರವಲಯದ ಶಿಂಗಾಳಪುರ ಬ್ರಿಡ್ಜ್ ನಲ್ಲಿ ಯುವಕನ ಶವವೊಂದು ಪತ್ತೆಯಾಗಿತ್ತು. ಗೋಕಾಕ್ ಶಹರಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ತನಿಖೆ ವೇಳೆ ನಿಶ್ಚಿತಾರ್ಥವಾಗಿದ್ದ ಯುವತಿ ಜೊತೆಗೆ ಸಂಬಂಧ ಹೊಂದಿದ್ದಕ್ಕೆ ಯುವಕನ ಕೊಲೆಯಾಗಿರುವುದು ತಿಳಿದುಬಂದಿದೆ. ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಹಾಗೂ ಯುವತಿಯ ಕುಟುಂಬಸ್ಥರು ಈ ಕೊಲೆ ನಡೆಸಿದ್ದಾರೆ ಎಂಬುದು ಸಾಬೀತಾಗಿದೆ.

ಇದನ್ನೂ ಓದಿ: Whatsapp Data leak: ವಾಟ್ಸಪ್ ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್: 500 ಮಿಲಿಯನ್ ಬಳಕೆದಾರರ ಮಾಹಿತಿ ಹ್ಯಾಕ್ ಮಾಡಿ ಮಾರಾಟಕ್ಕಿಟ್ಟಿದ್ದಾರಂತೆ ಕ್ರಿಮಿನಲ್ಸ್

ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ 22 ವರ್ಷದ ಸೋಮಲಿಂಗ್ ಕಂಬಾರ್ ಕೊಲೆಯಾದ ಯುವಕ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ನಡೆದಿದೆ. ಆದರೂ ಇಬ್ಬರ ನಡುವೆ ಪ್ರೀತಿ ಮುಂದುವರೆದಿತ್ತು. ಈ ವಿಚಾರ ಯುವತಿಯ ಕುಟುಂಬಸ್ಥರಿಗೆ ತಿಳಿದಿದೆ. ಹೀಗಾಗಿ ಯುವಕನಿಗೆ ಗತಿ ಕಾಣಿಸಬೇಕೆಂದು ನಿರ್ಧರಿಸಿದ್ದ ಯುವತಿಯ ಪೋಷಕರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಮಗಳನ್ನು ಹೆದರಿಸಿ, ಬೆದರಿಸಿ ಆಕೆಯ ಕೈಯಾರೆ ಸೋಮಲಿಂಗನಿಗೆ ಫೋನ್ ಮಾಡಿಸಿ ಮನೆಗೆ ಬರುವಂತೆ ಹೇಳಿಸಿದ್ದಾರೆ. ಆಕೆ ಮನೆಯಲ್ಲಿ ಯಾರೂ ಇಲ್ಲ. ಬಾ ಎಂದು ಆತನನ್ನು ಕರೆದಿದ್ದಾಳೆ. ಆಕೆಯ ಮಾತನ್ನು ನಂಬಿ ಬಂದಿದ್ದ ಸೋಮಲಿಂಗನಿಗೆ ಯುವತಿಯ ಪೋಷಕರು ಎದುರಾಗಿದ್ದರು. ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಕೂಡಾ ಯುವತಿಯ ಪೋಷಕರ ಕೃತ್ಯಕ್ಕೆ ಸಾಥ್ ನೀಡಿದ್ದಾನೆ. ಎಲ್ಲರೂ ಸೇರಿ ಸೋಮಲಿಂಗನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಸಿಮೆಂಟ್ ಕಂಬಕ್ಕೆ ಮೃತದೇಹವನ್ನು ಕಟ್ಟಿ ಘಟಪ್ರಭಾ ನದಿಗೆ ಎಸೆದಿದ್ದಾರೆ. ಸ್ವಲ್ಪ ದಿನಗಳು ಕಳೆದ ಬಳಿಕ ಸೋಮಲಿಂಗನ ಮೃತದೇಹ ತೇಲಿ ದಡ ಬಂದು ತಲುಪಿದೆ. ಅದನ್ನು ಪೊಲೀಸರು ಪರಿಶೀಲಿಸಿದಾಗ ಆತನ ಕೈ ಮೇಲೆ Mom-Dad ಎಂದು ಬರೆದ ಟ್ಯಾಟೋ, ಕೈಯಲ್ಲಿದ್ದ ಖಡಗ ಪತ್ತೆಯಾಗಿದೆ. ಇದರಿಂದ ಯುವಕನ ಗುರುತು ಪತ್ತೆಹಚ್ಚಲು ಸಾಧ್ಯವಾಗಿದೆ.

ಇದನ್ನೂ ಓದಿ: Threaten letter to PM: ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿ

ಪ್ರಕರಣದ ದಿಕ್ಕನ್ನು ತಪ್ಪಿಸಲು ಆರೋಪಿಗಳು ನಾನಾ ಕಸರತ್ತುಗಳನ್ನು ಮಾಡಿದ್ದಾರೆ. ಕೊಲೆಗೈದ ಬಳಿಕ ಸೋಮಲಿಂಗನ ಮೊಬೈಲ್ ಇಟ್ಟುಕೊಂಡಿದ್ದಾರೆ. ಬೇರೆ ಯುವತಿ ಜೊತೆಗೆ ಸೋಮಲಿಂಗ ಕಳೆದ ಖಾಸಗಿ ಕ್ಷಣದ ಫೋಟೋವನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿದ್ದಾರೆ. ಬಳಿಕ ಆತನ ಮೊಬೈಲ್ ನನ್ನು ಬೆಂಗಳೂರು- ಮೀರಜ್ ರೈಲಿನಲ್ಲಿ ಎಸೆದು ಹೋಗಿದ್ದಾರೆ. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾಲ್ ಡೀಟೈಲ್ಸ್ ತೆಗೆದು ಪರಿಶೀಲನೆ ನಡೆಸಿದ್ದಾರೆ. ಆಗ ಕೊನೆಯ ದೂರವಾಣಿ ಕರೆ ಯುವತಿಯಿಂದ ಬಂದಿರುವುದು ಎಂದು ತಿಳಿದುಬಂದಿದೆ. ಹೀಗಾಗಿ ಯುವತಿಯನ್ನು ಮೊದಲು ವಿಚಾರಣೆಗೆ ಹಾಜರುಪಡಿಸಿದ್ದಾರೆ. ಈ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಿವಲಿಂಗ ತಳವಾರ್ ಮತ್ತು ಚಿಕ್ಕಪ್ಪ ಸಂತೋಷ್ ತಳವಾರ್ ಹೆಸರನ್ನು ಯುವತಿ ಬಾಯಿಬಿಟ್ಟಿದ್ದಾಳೆ. ಆಕೆಯ ಹೇಳಿಕೆ ಆಧರಿಸಿ ಇಬ್ಬರನ್ನೂ ವಿಚಾರಣೆಗೆ ಹಾಜರುಪಡಿಸಿದಾಗ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

Murder mystery: Belgaum murder case of a boy solved after 20 days police arrested 2 accused

Comments are closed.