Boosting your Immunity:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಕಷಾಯಪುಡಿ

(Boosting your Immunity)ಮಾರಕ ಕಾಯಿಲೆಯ ವಿರುದ್ದ ಹೋರಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಅತಿ ಮುಖ್ಯ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹಲವು ಔಷಧ ಗಿಡಮೂಲಿಕೆಗಳಿವೆ ಮತ್ತು ಕೆಲವೊಂದು ಆಹಾರ ಕ್ರಮಗಳು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಕಷಾಯಪುಡಿಯನ್ನು ಮಾಡಿಟ್ಟುಕೊಂಡು ಪ್ರತಿನಿತ್ಯ ಇದನ್ನು ಸೇವಿಸಿದರೆ ಉತ್ತಮ. ಕಷಾಯಪುಡಿಯನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿನ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಹಾಗಿದ್ದರೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಕಷಾಯಪುಡಿ ತಯಾರಿಸುವ ವಿಧಾನ ಹೇಗೆ ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

(Boosting your Immunity)ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕಷಾಯಪುಡಿಯನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು

  • ಕೊತ್ತಂಬರಿ ಬೀಜ
  • ಜೀರಿಗೆ
  • ಕಾಳು ಮೆಣಸು
  • ಸೊಂಪು
  • ಲವಂಗ
  • ಏಲಕ್ಕಿ
  • ಏಲಕ್ಕಿ ಸಿಪ್ಪೆ
  • ಹಿಪ್ಪಲಿ
  • ಅಶ್ವಗಂಧ ಬೇರು
  • ನೆಗ್ಗಿನ ಮುಳ್ಳು
  • ವಾಯು ವಿಳಂಗ
  • ಸುಗಂದಿ ಬೇರು
  • ಜೇಷ್ಠ ಮಧು
  • ಲಾವಂಚದ ಬೇರು
  • ಅರಿಶಿಣ ಕೊಂಬು
  • ಜಾಯಿಕಾಯಿ
  • ಶುಂಠಿ
  • ಬಜೆ

ಕಷಾಯಪುಡಿಯನ್ನು ಮಾಡುವ ವಿಧಾನ:
ಮೊದಲಿಗೆ ಅರಿಶಿಣ ಕೊಂಬು, ಲಾವಂಚದ ಬೇರು,ಸುಗಂದಿ ಬೇರು, ಜಾಯಿಕಾಯಿ,ವಾಯು ವಿಳಂಗ,ಜಾಯಿಕಾಯಿ,ಶುಂಠಿ, ಬಜೆ,ಅಶ್ವಗಂಧ ಬೇರುಗಳು ಗಟ್ಟಿ ಇರುವ ಕಾರಣ ಕುಟ್ಟಣಿಗೆಯಲ್ಲಿ ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಬೇಕು
ಅನಂತರ ಮಿಕ್ಸಿ ಜಾರಿಯಲ್ಲಿ ಕುಟ್ಟಿ ಪುಡಿಮಾಡಿಟ್ಟುಕೊಂಡ ಪದಾರ್ಥ ಮತ್ತು ಕೊತ್ತಂಬರಿ ಬೀಜ,ಜೀರಿಗೆ, ಕಾಳು ಮೆಣಸು, ಸೊಂಪು,ಲವಂಗ ಏಲಕ್ಕಿ,ಏಲಕ್ಕಿ ಸಿಪ್ಪೆ, ಹಿಪ್ಪಲಿ, ನೆಗ್ಗಿನ ಮುಳ್ಳನ್ನು ಹಾಕಿ ನುಣ್ಣಗೆ ಪುಡಿಮಾಡಿಕೊಂಡು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪ್ರತಿದಿನ ಈ ಪುಡಿಯಿಂದ ಕಷಾಯ ಮಾಡಿ ಕುಡಿದರೆ ದೇಹದಲ್ಲಿನ ರೋಗ ನೀರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Indigestion Problem Solution:ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ:Winter Hair Care :ಚಳಿಗಾಲದಲ್ಲಿ ಕೂದಲು ಆರೈಕೆಗೆ ಬಳಸಿ ಈ ಎಣ್ಣೆ

ಜೇಷ್ಠ ಮಧು
ಜೇಷ್ಠ ಮಧುವಿನಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಇರುವುದರಿಂದ ಇದರ ಚೂರನ್ನು ಚೀಪುವುದರಿಂದ ಬಾಯಿಯಲ್ಲಿ ಬರುವ ದುರ್ಗಂಧವನ್ನು ದೂರಮಾಡುತ್ತದೆ. ಇದರ ಬೇರಿನ ತುಂಡಿಗೆ ಜೇನುತುಪ್ಪ ಸವರಿ ಚೀಪುವುದರಿಂದ ಬಾಯಿ ಹುಣ್ಣು ಕಡಿಮೆಮಯಾಗುತ್ತದೆ. ಒಂದು ಲೋಟ ಹಾಲಿಗೆ ಜೇಷ್ಠ ಮಧು ಪುಡಿಯನ್ನು ಹಾಕಿ ಕುದಿಸಿಕೊಂಡು ರಾತ್ರಿ ಮಲಗುವ ಮುನ್ನ ಸೇವಿಸಿದರೆ ನಿದ್ರಾಹೀನತೆಯನ್ನು ದೂರ ಮಾಡುತ್ತದೆ. ಅಷ್ಟೇ ಅಲ್ಲದೆ ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ಕಡಿಮೆಮಾಡುತ್ತದೆ. ಜೇಷ್ಠ ಮಧು ಪುಡಿಗೆ ಕೊಬ್ಬರಿ ಎಣ್ಣೆ ಮತ್ತು ಬಾದಾಮಿ ಎಣ್ಣೆ ಹಾಕಿ ಪೇಸ್‌ ಪ್ಯಾಕ್‌ ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಅಸ್ತಮಾ ಇರುವವರು ಜೇಷ್ಠ ಮಧುವನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಅಸ್ತಮಾ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

Boosting your Immunity Here is kashaya powder to increase immunity

Comments are closed.