Murugha Seer in Jail : ಜೈಲು ಸೇರಿದ ಮುರುಘಾ ಶ್ರೀ

ಚಿತ್ರದುರ್ಗ : Murugha Seer in Jail ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಜಾತಿನಿಂದನೆ ಪ್ರಕರಣದ ಎದುರಿಸ್ತಿದ್ದ ಚಿತ್ರದುರ್ಗದ ಮುರುಘಾ ಮಠದ (Chitradurga mutt) ಶಿವಮೂರ್ತಿ ಶ್ರೀಗಳು ಕೊನೆಗೂ ಜೈಲು ಪಾಲಾಗಿದ್ದಾರೆ. ಗುರುವಾರ ವಾರ ರಾತ್ರಿ 9.30ಕ್ಕೆ ಮಠಕ್ಕೆ ಆಗಮಿಸಿದ ಪೊಲೀಸರು ಶ್ರೀಗಳನ್ನ ಬಂಧಿಸಿದ್ರು.

ಆಗಸ್ಟ್ 26 ರಂದು ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಅಪ್ರಾಪ್ತ ಬಾಲಕಿಯರಿಬ್ಬರು (Chitradurga) ಮುರುಘಾ ಮಠದ ಶ್ರೀಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂಥಾ ಮೈಸೂರಿನ ಒಡನಾಡಿ ಸಂಸ್ಥೆ ಸದಸ್ಯರ ಮುಂದೆ ಹೇಳಿಕೊಂಡಿದ್ರು. ಬಾಲಕಿಯರ ಹೇಳಿಕೆಯನ್ನ ಆಧರಿಸಿ ಒಡನಾಡಿ ಸಂಸ್ಥೆಯ ಬೆಂಬಲದೊಂದಿಗೆ ಅಪ್ರಾಪ್ತ ಬಾಲಕಿಯರು ಶ್ರೀಗಳ ವಿರುದ್ಧ ದೂರು ನೀಡಿದ್ರು. ಬಾಲಕಿಯರು ನೀಡಿದ ದೂರಿನ್ವಯ FIR ದಾಖಲಿಸಿದ್ದ ಪೊಲೀಸರು ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನ A-1, ಹಾಸ್ಟೆಲ್ ಲೇಡಿ ವಾರ್ಡನ್ A-2 ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ರು.

ಸದ್ಯ ಪ್ರಕರಣದ ಆರೋಪಿ ನಂಬರ್ 3 , A-4 ಮಠದ ಕಾರ್ಯದರ್ಶಿ ಪರಮಶಿವಯ್ಯ, A-5 ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ, ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದ A-1 ಮುರುಘಾ ಶ್ರೀ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಬಳಿಕ ಜಡ್ಜ್ ಮುಂದೆ ಹಾಜರುಪಡಿಸಲಾಗಿತ್ತು. ಮುರುಘಾ ಶ್ರೀಗಳ ಪರ ವಕೀಲರು ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದ್ರು. ಆದ್ರೆ ನ್ಯಾಯಾಧೀಶೆ ಕೋಮಲಾ ಅವರು ಜಾಮೀನು ಅರ್ಜಿ ತಿರಸ್ಕರಿಸಿದ್ರು. ಶ್ರುಕವಾರ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿ ಅಂತಾ ಸೂಚಿಸಿ, 14 ದಿನಗಳ ಕಾಲ ಶ್ರೀಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರು. ಹೀಗಾಗಿ ನಸುಕಿನ ಜಾವ 3 ಗಂಟೆಗೆ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಮುರುಘಾ ಶ್ರೀಗಳನ್ನ ಕಳುಹಿಸಲಾಗಿದೆ. ಮತ್ತೊಂದೆಡೆ ಪ್ರಕರಣದ  A- 2 ಲೇಡಿ ವಾರ್ಡನ್ ಪೊಲೀಸರ ವಶದಲ್ಲಿದ್ದು,  ಪ್ರಸ್ತುತ ಸಾಂತ್ವನ ಕೇಂದ್ರದಲ್ಲಿದ್ದಾರೆ.

ಗುರುವಾರ ರಾತ್ರಿ ನಡೆದಿದ್ದೇನು..?

*ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮಠದೊಳಗೆ ಎಂಟ್ರಿ ಕೊಟ್ಟ ಪೊಲೀಸರು

*ಚಿತ್ರದುರ್ಗ ಸಿಪಿಐ ಬಾಲಚಂದ್ರ ನಾಯ್ಕೆ, ಮೊಳಕಾಲ್ಮೂರು ಸಿಪಿಐ ಸತೀಶ್ ರಿಂದ ಬಂಧನ

* ರಾತ್ರಿ 10.30ಕ್ಕೆ ಮುರುಘಾ ಶ್ರೀಗಳನ್ನ ವಶಕ್ಕೆ ಪಡೆದ ಪೊಲೀಸರು

* ರಾತ್ರಿ 11 ಗಂಟೆಗೆ ಚಳ್ಳಕೆರೆಯ ಡಿವೈಎಸ್ ಪಿ ಕಚೇರಿಗೆ ಹಾಜರು

* ರಾತ್ರಿ 11 ಗಂಟೆಯಿಂದ 12.30ರವರೆಗೂ ಮುರುಘಾ ಶ್ರೀಗಳ ಪ್ರಾಥಮಿಕ ವಿಚಾರಣೆ

* ರಾತ್ರಿ 12.40ಕ್ಕೆ ಮುರುಘಾ ಶ್ರೀಗಳ ವೈದ್ಯಕೀಯ ತಪಾಸಣೆ

* ಬೆಳಗಿನ ಜಾವ 2.30ರ ಸುಮಾರಿಗೆ ಜಡ್ಜ್ ಎದುರು ಶ್ರೀಗಳನ್ನ ಹಾಜರು

* ಬೆಳಗಿನ ಜಾವ 3 ಗಂಟೆ ಸುಮಾರಿಗೆ ಜೈಲು ಸೇರಿದ ಮುರುಘಾ ಶ್ರೀಗಳು

6 ದಿನದ ಬಳಿಕ ಅರೆಸ್ಟ್ : ಸಾಮಾನ್ಯವಾಗಿ ಪೋಕ್ಸೋ ಕೇಸ್ ದಾಖಲಾದ ಸಂದರ್ಭದಲ್ಲಿ ಪೊಲೀಸರು ಸಂತ್ರಸ್ತೆಯರ ಹೇಳಿಕೆ ಪಡೆದು ಆರೋಪಿಗಳನ್ನ 24 ಗಂಟೆಯಲ್ಲಿ ಅರೆಸ್ಟ್ ಮಾಡ್ತಾರೆ. ಆದ್ರೆ ಮುರುಘಾ ಶ್ರೀಗಳ ಪ್ರಕರಣದಲ್ಲಿ ಹಾಗೆ ಆಗಿರಲಿಲ್ಲ. ಮುರುಘಾ ಶ್ರೀಗಳ ವಿರುದ್ಧ ಕೇಸ್ ದಾಖಲಾಗಿ ಒಂದು ವಾರ ಕಳೆದಿದ್ದರೂ ಬಂಧನ ಹೋಗಲಿ, ಕನಿಷ್ಠ ಶ್ರೀಗಳ ವಿಚಾರಣೆಯನ್ನೂ ನಡೆಸಲಿರಲಿಲ್ಲ. ಶ್ರೀಗಳ ವಿರುದ್ಧ ದೂರು ನೀಡಿದ ಸಂತ್ರಸ್ತ ಬಾಲಕಿಯರಿಂದ ನ್ಯಾಯಾಲಯದಲ್ಲಿ 164 ಸ್ಟೇಟ್ ಮೆಂಟ್ ಪಡೆದುಕೊಳ್ಳಲಾಗಿತ್ತು. ಶ್ರೀಗಳ ವಿರುದ್ಧ ಅಟ್ರಾಸಿಟಿ ಕೇಸ್ ಸಹ ದಾಖಲಾಗಿತ್ತು. ಈ ಕೇಸ್ ಸಂಬಂಧವೂ ಸಹ ಬಾಲಕಿಯಿಂದ ಕೋರ್ಟ್ ನಲ್ಲಿ ಹೇಳಿಕೆ ದಾಖಲು ಮಾಡಿಸಲಾಗಿತ್ತು. ಇಷ್ಟೆಲ್ಲ ಆದರೂ ಪೊಲೀಸರು ಶ್ರೀಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿರಲಿಲ್ಲ. ಕೇವಲ ಶ್ರೀಗಳಿಗೆ ಲುಕ್ ಔಟ್ ನೋಟಿಸ್ ನೀಡಿ ಪೊಲೀಸರು ಸುಮ್ಮನಾಗಿದ್ದರು. ಇದ್ರ ಬೆನ್ನಲ್ಲೇ ಮುರುಘಾ ಶ್ರೀಗಳ ಪರ ವಿರೋಧ ಪ್ರತಿಭಟನೆಗಳು ನಡೆದಿದ್ವು.

ಸ್ವಾಮೀಜಿಗೆ ಸಿಗುತ್ತಾ ಜಾಮೀನು..? : ಇನ್ನು ಪ್ರಕರಣ ಸಂಬಂಧ ಬಂಧನಕ್ಕೂ ಮೊದಲೇ ಚಿತ್ರ ದುರ್ಗ ಜಿಲ್ಲಾ ಸೆಷನ್ಸ್ ಕೋರ್ಟ್ ನಲ್ಲಿ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ಗುರುವಾಗ ವಿಚಾರಣೆ ನಡೆಸಿದ ಕೋರ್ಟ್, ಸರ್ಕಾರಿ ಅಭಿಯೋಜಕರಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನ ಶುಕ್ರವಾರಕ್ಕೆ ಮುಂದೂಡಿತ್ತು. ಹೀಗಾಗಿ ಇಂದು ಶ್ರೀಗಳಿಗೆ ಜಾಮೀನು ಸಿಗುತ್ತಾ, ಅರೆಸ್ಟ್ ಆಗ್ತಾರಾ ಅನ್ನೋ ಕುತೂಹಲ ಎದ್ದಿತ್ತು. ಆದ್ರೆ ನಿನ್ನೆ ರಾತ್ರಿಯೇ ಪೊಲೀಸರು ಶ್ರೀಗಳನ್ನ ಬಂಧನ ಮಾಡಿರೋದ್ರಿಂದ, ನಿರೀಕ್ಷಣಾ ಜಾಮೀನು ಅರ್ಜಿ ಅನೂರ್ಜಿತಗೊಳ್ಳಲಿದೆ. ಸ್ವಾಮೀಜಿ ಈಗ ಹೊಸದಾಗಿ ಜಾಮೀನಿಗೆ ಅರ್ಜಿ ಸಲ್ಲಿಸಬೇಕಿದೆ. ಆದ್ರೆ ಪೋಕ್ಸೋ ಕೇಸ್ ಮತ್ತು ಅಟ್ರಾಸಿಟಿ ಕೇಸ್ ಅತ್ಯಂತ ಗಂಭೀರ ಪ್ರಕರಣವಾಗಿರೋದ್ರಿಂದ ಶ್ರೀಗಳಿಗೆ ಜಾಮೀನು ಸಿಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ : ಹೇಗಿದೆ ಇಂದಿನ ಜಾತಕಫಲ, ನಿತ್ಯ ಭವಿಷ್ಯ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : wife commits suicide : ಪತಿಯಿಂದಲೇ ಪತ್ನಿಗೆ ಜಾತಿ ನಿಂದನೆ :ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣು

Murugha Seer in Jail-case under Protection of Children from Sexual Offences-Chitradurga mutt-Lingayat mutt

Comments are closed.