PM’s program in Mangalore :ನಾಳೆ ಕಡಲನಗರಿಯಲ್ಲಿ ‘ನಮೋ’ ಕಮಾಲ್​ : ಟೈಟ್​ ಸೆಕ್ಯೂರಿಟಿ

ಮಂಗಳೂರು : PM’s program in Mangalore : ನಾಳೆ ಪ್ರಧಾನಿ ನರೇಂದ್ರ ಮೋದಿ ಕಡಲನಗರಿ ಮಂಗಳೂರಿಗೆ ಆಗಮಿಸಲಿದ್ದಾರೆ. ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಪ್ರಧಾನಿ ಭಾಗವಹಿಸಲಿರುವ ಬೃಹತ್ ಸಮಾವೇಶಕ್ಕೆ ಅಂತಿಮ ಹಂತದ ಸಿದ್ದತೆ ನಡೆದಿದೆ. ಇಂದು ಗೃಹ ಸಚಿವರು ಸೇರಿದಂತೆ ಎಡಿಜಿಪಿ ಆಗಮಿಸಿ ಪ್ರಧಾನಿ ಕಾರ್ಯಕ್ರಮದ ಭದ್ರತೆ ಪರಿಶೀಲನೆ ನಡೆಸಿದ್ರು.


ಹೌದು..ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಪ್ರಧಾನಿ ಕಾರ್ಯಕ್ರಮದ ಅಂತಿಮ ಹಂತದ ಸಿದ್ದತೆ ನಡೆದಿದೆ. ನಗರ ಹೊರವಲಯದ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಇಂದು ಕಾರ್ಯಕ್ರಮ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಶಾಸಕರು ಗೃಹ ಸಚಿವರಿಗೆ ಸಾಥ್ ನೀಡಿದ್ರು. ಡಿ.ಜಿ.ಪಿ ಹಾಗೂ ಎ.ಡಿ.ಜಿ.ಪಿ ಭದ್ರತೆಯ ನೇತ್ರತ್ವ ವಹಿಸಿದ್ದು ಮಂಗಳೂರು ‌ಕಮಿಷನರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿದ್ರು.

ಸುಮಾರು 25 ಎಕರೆ ಜಾಗದಲ್ಲಿ ನಡೆಯಲಿರುವ ಸಮಾವೇಶಕ್ಕೆ ಬೃಹದಾದ ವೇದಿಕೆಯು ರೆಡಿ ಆಗಿದೆ. ಪ್ರಧಾನಿ ಕಾರ್ಯಕ್ರಮದ ಭದ್ರತೆಯ ಬಗ್ಗೆ ಎಸ್.ಪಿ.ಜಿ ಅಧಿಕಾರಿಗಳು ಸಂಪೂರ್ಣ ನಿಗಾ ಇರಿಸಿದ್ದಾರೆ. 100 ಜನ ಉನ್ನತ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸುಮಾರು 2000 ಸಾವಿರ ಸಿವಿಲ್ ಪೊಲೀಸರು ಭದ್ರತೆಗೆ ನೇಮಿಸಲಾಗಿದೆ. ಕೆ.ಎಸ್.ಆರ್,ಪಿ, ಸಿ.ಎ.ಆರ್, ಎ.ಎನ್.ಎಫ್, ಆರ್.ಎ.ಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್ ಡಿ ಹಾಗೂ ಗರುಡ ಪಡೆ ಸೇರಿದಂತೆ ಒಟ್ಟು ಮೂರು ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ರು. ಮೈದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲದಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಕಾರ್ಯಕ್ರಮ ನಿರ್ವಹಣೆ ಮಾಡುತ್ತಿರುವ ಕಂಪೆನಿ ಮೇಲೆ ಗರಂ ಆದರು. ಭಧ್ರತೆಗೆ ನಿಯೋಜಿಸಿದ ಪೊಲೀಸರಿಗೂ ಭದ್ರತೆ ಕುರಿತಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಖಡಕ್ ಎಚ್ಚರಿಕೆ ನೀಡಿದರು.

3700 ಕೋಟಿ ಯೋಜನೆಗೆ ಪ್ರಧಾನಿ ಮೋದಿ ನಾಳೆ ಚಾಲನೆ ನೀಡಲಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನರ ಸಾರ್ವಜನಿಕ ಸಭೆ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡಿಕೊಂಡಿದೆ.

ಇದನ್ನು ಓದಿ : wife commits suicide : ಪತಿಯಿಂದಲೇ ಪತ್ನಿಗೆ ಜಾತಿ ನಿಂದನೆ :ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣು

ಇದನ್ನೂ ಓದಿ : MP Sumalatha Ambarish : ಮಳೆ ಹಾನಿ ಕುರಿತಂತೆ ಸುಮಲತಾ ಅಂಬರೀಶ್​ ನಿರ್ಲಕ್ಷ್ಯ : ಜನತೆಯ ಆಕ್ರೋಶದ ಬಳಿಕ ಎಚ್ಚೆತ್ತ ಸಂಸದೆ

PM’s program in Mangalore tomorrow: High security

Comments are closed.