ಮೈಸೂರು : ಇಡೀ ವಿಶ್ವ ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿದೆ. ಒಂದ್ಸಲ ಈ ಮಹಾಮಾರಿ ತೊಲಗಿದ್ರೆ ಸಾಕು ಎಂದು ದೇಶ ಪ್ರಾರ್ಥಿಸುತ್ತಿದೆ. ಆದರೆ ಹಲವು ಕಡೆಗಳಲ್ಲಿ ಕೊರೋನಾ ಸೋಂಕಿನ ಅಪಾಯ ಗೊತ್ತಿದ್ದರೂ ಮಾಡಬಾರದ ಚಟುವಟಿಕೆಯನ್ನು ಜನ ಮಾಡುತ್ತಿದ್ದಾರೆ.
ಕರ್ನಾಟಕದಲ್ಲೂ ಅಬ್ಬರಿಸುತ್ತಿರುವ ಕೊರೋನಾ ಸೋಂಕು ನಿಯಂತ್ರಿ ಸುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಗಬರಬೇಡಿ ಎಂದು ಮನವಿ ಮಾಡಿದರೂ ಜನ ಮಾತ್ರ ಬೀದಿಯಲ್ಲಿದ್ದಾರೆ. ಈ ನಡುವೆ ಮೈ ತಿಕ್ಕುವ ವ್ಯವಹಾರದ ನೆಪದ ಮಾಂಸ ದಂಧೆಯ ಜಾಲವೊಂದನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ. ಲಾಕ್ ಡೌನ್ ಸಂದರರ್ಭದಲ್ಲೂ ಭರ್ಜರಿ ವ್ಯವಹಾರ ಮಾಡುತ್ತಿರುವವರು ಇದೀಗ ಅಂದರ್ ಆಗಿದ್ದಾರೆ.
ಮೈಸೂರು ನಗರದ ಹೊರವಲಯದಲ್ಲಿರುವ ವಿಜಯನಗರ ಏರಿಯಾ ದಲ್ಲಿ ಲಾಕ್ ಡೌನ್ ಇದ್ದರೂ ಸಿಕ್ಕಾಪಟ್ಟೆ ವಾಹನಗಳ ಓಡಾಟವಿತ್ತು. ಈ ವೇಳೆ ವಾಹನ ಓಡಾಟ ಕಂಡ ಸ್ಥಳೀಯರಿಗೆ ಅನುಮಾನ ಬಂದಿದೆ. ಹೀಗಾಗಿ ಕೆಲ ವಾಹನಗಳನ್ನು ಸದ್ದಿಲ್ಲದೆ ಬೆನ್ನು ಹತ್ತಿದ್ರೆ ಬೆಳಕಿಗೆ ಬಂದಿದ್ದು, ಮಾಂಸ ದಂಧೆ. ಮಸಾಜ್ ಸೆಂಟರ್ ಹೆಸರಿನಲ್ಲಿ ಅಂಗಡಿ ತೆರೆದಿದ್ದ ಇವರು ಒಳಗಡೆ ನಡೆಸುತ್ತಿದ್ದು ಖತರ್ನಾಕ್ ಕೆಲಸ. ಹೀಗಾಗಿ ಸ್ಥಳೀಯರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ದ್ದಾರೆ. ದಾಳಿ ನಡೆಸಿದ ಪೊಲೀಸರು ಈ ಸಂಬಂಧ ಒಬ್ಬಳು ಯುವತಿ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ವಿಜಯ ನಗರದ ವಾಟರ್ ಟ್ಯಾಂಕ್ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಮಸಾಜ್ ಸೆಂಟರ್ ಹೆಸರಿನ ಅಡ್ಡೆಯ ಮೇಲೆ ಮೇಲೆ ಡಿಸಿಪಿ ಪ್ರಕಾಶ್‌ಗೌಡ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ಕೊರೋನಾ ಸೋಂಕಿತರು ಪತ್ತೆ ಯಾಗುತ್ತಿರುವ ಜಿಲ್ಲೆಗಳ ಪೈಕಿ ಮೈಸೂರು ಕೂಡಾ ಒಂದು. ಜಿಲ್ಲಾಡಳಿತ ಕೊರೋನಾ ಸೋಂಕು ನಿಯಂತ್ರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಆದರೆ ಇಂತಹ ದಂಧೆಗಳನ್ನು ಮಾಡ್ತಾ ಹೋದ್ರೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವುದಾದರೂ ಹೇಗೆ.

,