ಭಾನುವಾರ, ಏಪ್ರಿಲ್ 27, 2025
HomeCrimeNavasari Accident: ಬಸ್‌ ಚಾಲಕನಿಗೆ ಹೃದಯಾಘಾತ : ಎಸ್‌ಯುವಿ ಕಾರು -ಬಸ್ ಢಿಕ್ಕಿ, 9 ಮಂದಿ...

Navasari Accident: ಬಸ್‌ ಚಾಲಕನಿಗೆ ಹೃದಯಾಘಾತ : ಎಸ್‌ಯುವಿ ಕಾರು -ಬಸ್ ಢಿಕ್ಕಿ, 9 ಮಂದಿ ಸಾವು

- Advertisement -

ನವಸಾರಿ: (Navasari Accident) ಗುಜರಾತ್‌ ನ ನವಸಾರಿಯ ಅಹಮದಾಬಾದ್‌-ಮುಂಬೈ ಹೆದ್ದಾರಿಯಲ್ಲಿ ಬಸ್‌ ಮತ್ತು ಎಸ್‌ಯುವಿ ಕಾರಿನ ನಡುವೆ ಶನಿವಾರ ಮುಂಜಾನೆಯ ವೇಳೆ ಅಪಘಾತ ಸಂಭವಿಸಿದ್ದು, ನಡೆದ ಅಪಘಾತದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಮಂದಿಯಲ್ಲಿ ಎಂಟು ಮಂದಿ ಹಾಗೂ ಬಸ್‌ ಚಾಲಕ ಸೇರಿದಂತೆ ಒಂಬತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬಸ್‌ ಚಾಲಕನಿಗೆ ಹೃದಯಾಘಾತ ಸಂಭವಿಸಿದ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಎಸ್‌ಯುವಿ ಯಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿ ಅಂಕಲೇಶ್ವರ ನಿವಾಸಿಗಳಾಗಿದ್ದು, ವಲ್ಸಾದ್‌ ನಿಂದ ತಮ್ಮ ಊರಿಗೆ ಹಿಂತಿರುಗುತ್ತಿದ್ದ ವೇಳೆ ಅಪಘಾತ (Navasari Accident) ಸಂಭವಿಸಿದೆ. ಪ್ರಯಾಣದ ವೇಳೆ ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಎಸ್‌ ಯುವಿಗೆ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಓರ್ವರನ್ನು ಸೂರತ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನುಳಿದ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗುಜರಾತ್‌ ನವಸಾರಿಯ ಡಿವೈಎಸ್‌ಪಿ ವಿ.ಎನ್.‌ ಪಟೇಲ್‌ ತಿಳಿಸಿದ್ದಾರೆ.

ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಜನರಲ್ಲಿ ಎಂಟು ಮಂದಿ ಮತ್ತು ಐಷಾರಾಮಿ ಬಸ್‌ನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ನವಸಾರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರುಶಿಕೇಶ್ ಉಪಾಧ್ಯಾಯ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಾಂತ್ವನ ಹೇಳಿದ್ದು, ” ಗುಜರಾತ್‌ ನ ನವಸಾರಿಯಲ್ಲಿ ನಡೆದ ರಸ್ತೆ ಅಪಘಾತ ಹೃದಯವಿದ್ರಾವಕವಾಗಿದೆ. ಈ ದುರಂತದಲ್ಲಿ ಕುಟುಂಬವನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ದೇವರು ಅವರಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ಸ್ಥಳೀಯ ಆಡಳಿತವು ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಯನ್ನು ನೀಡುತ್ತಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್‌ ಮಾಡುವುದರ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ಮಾಜಿ ಶಾಸಕನ ಮನೆಯ ಹಿಂದೆ ಮಹಿಳೆಯ ಕೊಳೆತ ಶವ ಪತ್ತೆ

In the incident, eight of the nine people who were traveling in the SUV and nine people including the bus driver died on the spot. It is said that the bus driver suffered a heart attack in the accident.

RELATED ARTICLES

Most Popular