100 medical students fall sick : ವಿಷಾಹಾರ ಸೇವನೆ 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥ

News Next Kannada Desk : ನಾಸಿಕ್ : ವಿಷಾಹಾರ ಸೇವನೆ ಮಾಡಿ 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ (100 medical students fall sick) ಘಟನೆ ಮಹಾರಾಷ್ಟ್ರದ ನಾಸಿಕ್ ನ ಇಗತ್‌ಪುರಿ ತಾಲೂಕಿನ ಧರ್ಮಗಾಂವ್‌ನಲ್ಲಿರುವ ಎಸ್‌ಎಂಬಿಟಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದಿದೆ. ವಿದ್ಯಾರ್ಥಿಗಳು ವಾಕರಿಕೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಸ್‌ಎಂಬಿಟಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಕ್ಯಾಂಟೀನ್ ನಲ್ಲಿ ಊಟ ಸೇವನೆ ಮಾಡಿದ್ದಾರೆ. ಊಟದ ನಂತರದಲ್ಲಿ 100-125 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಎಸ್ಎಂಬಿಟಿ (SMBT) ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಪೈಕಿ ಹಲವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 50-55 ವಿದ್ಯಾರ್ಥಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ ಎಂದು ಎಸ್‌ಎಂಬಿಟಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಕಾಲೇಜು ಆವರಣದಲ್ಲಿರುವ ಕ್ಯಾಂಟೀನ್ ನಿರ್ವಹಣೆಯನ್ನು ಖಾಸಗಿ ಕಂಪೆನಿ ಗುತ್ತಿಗೆಗೆ ಪಡೆದಿತ್ತು. ಪ್ರಕರಣ ದಾಖಲು ಮಾಡಿಕೊಂಡಿರುವ ವಾಡಿವರ್ಹೆ ಪೊಲೀಸ್ ಠಾಣೆಯಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಅಲ್ಲದೇ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಗ್ರ್ಯಾಂಡ್ ಡೈಮಂಡ್ ಕ್ಯಾಸಿನೊದಲ್ಲಿ ಬೆಂಕಿ ಅವಘಡ: 10 ಮಂದಿ ಸಾವು

ಥಾಯ್ಲೆಂಡ್:‌ಥಾಯ್ಲೆಂಡದ ನ ಗಡಿಭಾಗದಲ್ಲಿರುವ ಕಾಂಬೋಡಿಯನ್‌ ಹೋಟೆಲ್‌ ಕ್ಯಾಸಿನೊದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು. ಈ ಅವಘಡದಲ್ಲಿ ಸರಿಸುಮಾರು ಹತ್ತು ಮಂದಿ ಸಾವನ್ನಪ್ಪಿದ್ದು, ಮೂವತ್ತು ಮಂದಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ.

ರಾತ್ರಿ 11:30 ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸರಿಸುಮಾರು 50 ಮಂದಿ ಬೆಂಕಿಯಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ವರದಿಗಳ ಪ್ರಕಾರ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್-ಕ್ಯಾಸಿನೊದ ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳಲು ಜನರು ಮಹಡಿಯ ಮೇಲಿನಿಂದ ನೆಲಕ್ಕೆ ದುಮುಕುತ್ತಿರುವ ಆಘಾತಕಾರಿ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು, ರಕ್ಷಣಾ ತಂಡಗಳು ಧಾವಿಸಿದ್ದು, ಬೆಂಕಿಯನ್ನು ನಂದಿಸಿ ಬೆಂಕಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಚಾರಣೆಯನ್ನು ನಡೆಸಿದ್ದಾರೆ. ಬೆಳಿಗ್ಗೆ ಸರಿಸುಮಾರು 8.30 ರ ಹೊತ್ತಿಗೆ ಕಾರ್ಯಚರಣೆ ಮುಗಿದಿದ್ದು, ಬೆಂಕಿಯಲ್ಲಿ ಸಿಲುಕಿದ್ದ 50 ಮಂದಿಯನ್ನು ರಕ್ಷಿಸಿ ಸುರಕ್ಷಿತವಾಗಿ ಹೊರತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Yash upcoming Film: ಜ.8ರಂದು ಸಿಹಿಸುದ್ದಿ ಕೊಡ್ತಾರಂತೆ ನಟ ಯಶ್; ಅಭಿಮಾನಿಗಳಿಗೆ ಸಿಗಲಿದ್ಯಾ ಮುಂದಿನ ಸಿನಿಮಾದ ಸುಳಿವು..?

ಇದನ್ನೂ ಓದಿ : ಬಿಜೆಪಿಯ ಮಾಜಿ ಶಾಸಕನ ಮನೆಯ ಹಿಂದೆ ಮಹಿಳೆಯ ಕೊಳೆತ ಶವ ಪತ್ತೆ

100 medical students fall sick due to food Poisoning in Nasik

Comments are closed.