ಸೋಮವಾರ, ಜೂನ್ 16, 2025
HomeCrimeNCIB Headquarters: ಮಹಿಳೆಯನ್ನು 14 ಸೆಕೆಂಡ್ ಗಿಂತ ಹೆಚ್ಚು ಗುರಾಯಿಸುವಂತಿಲ್ಲ.. ಕವಿತೆ ಹೇಳುವಂತಿಲ್ಲ.. ಏನಿದು ಹೊಸ...

NCIB Headquarters: ಮಹಿಳೆಯನ್ನು 14 ಸೆಕೆಂಡ್ ಗಿಂತ ಹೆಚ್ಚು ಗುರಾಯಿಸುವಂತಿಲ್ಲ.. ಕವಿತೆ ಹೇಳುವಂತಿಲ್ಲ.. ಏನಿದು ಹೊಸ ರೂಲ್ಸ್

- Advertisement -

ನವದೆಹಲಿ: NCIB Headquarters: ರಸ್ತೆಯಲ್ಲಿ ಒಂಟಿ ಹುಡುಗಿಯರು ಒಂಟಿಯಾಗಿ ನಡೆದುಕೊಂಡು ಹೋಗ್ತಿದ್ರೆ ಕೆಲ ಪೋಲಿ ಹುಡುಗರು ಗುರಾಯಿಸಿ ನೋಡೋದು, ಹಾಡು ಹೇಳೋದು, ಶಿಳ್ಳೆ ಹೊಡೆಯೋದು, ಅಶ್ಲೀಲ ಸನ್ನೆ ಮಾಡೋದು.. ಈ ಮೂಲಕ ಆ ಹುಡುಗಿಯರಿಗೆ ಸಾರ್ವಜನಿಕ ಸ್ಥಳದಲ್ಲೇ ಮಾನಸಿಕ ಕಿರುಕುಳ ಕೊಡೋದು.. ಇವಕ್ಕೆಲ್ಲಾ ಇನ್ಮುಂದೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆ ಇದೆ. ಯಾಕಂದ್ರೆ ಇನ್ನು ಮುಂದೆ ಇಂಥವೆಲ್ಲಾ ದುಷ್ಟ ಬುದ್ಧಿ ತೋರಿದ್ರೆ ಜೈಲುಪಾಲಾಗೋದು ಗ್ಯಾರೆಂಟಿ.

ಯಾಕಂದ್ರೆ ಯಾವುದೇ ಹುಡುಗಿಯನ್ನು ಅಥವಾ ಮಹಿಳೆಯನ್ನು 14 ಸೆಕೆಂಡ್ ಗಿಂತ ಹೆಚ್ಚು ಕಾಲ ಗುರಾಯಿಸಿದರೆ, ಅಶ್ಲೀಲ ಸನ್ನೆ ಮಾಡಿದರೆ, ಹಾಡು, ಕವಿತೆ ಹೇಳಿದ್ರೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಬಂಧಿಸುವ ಅವಕಾಶವಿದೆ ಎಂದು ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಷನ್ ಬ್ಯೂರೋ (NCIB) ಹೆಸರಿನ ಸರ್ಕಾರೇತರ ಸಂಸ್ಥೆಯೊಂದು ಹೇಳಿದೆ.

ಇದನ್ನೂ ಓದಿ: Bengal Warriors : ವಾರಿಯರ್ಸ್ ವಿರುದ್ಧ ಯೋಧಾಗೆ ರೋಚಕ ಜಯ, ಪ್ಲೇ ಆಫ್‌ನತ್ತ ಪಿಂಕ್ ಪ್ಯಾಂಥರ್ಸ್

ನ.27ರಂದು ರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ ಹೆಸರಿನ NGO ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದೆ. ಅದರಲ್ಲಿ ಯಾವುದೇ ಹುಡುಗಿ ಅಥವಾ ಮಹಿಳೆಯನ್ನು 14 ಸೆಕೆಂಡ್ ಗಿಂತಲೂ ಹೆಚ್ಚು ಕಾಲ ಗುರಾಯಿಸಿ ನೋಡುವುದು, ಅಶ್ಲೀಲ ಸನ್ನೆ ಮಾಡುವುದು, ಹಾಡು ಅಥವಾ ಕವಿತೆ ಹೇಳುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (A) ಮತ್ತು (B) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಪಠ್ಯ ಸಂದೇಶ ಕಳುಹಿಸುವ ಅಪರಾಧಕ್ಕೆ ಗರಿಷ್ಠ 3 ತಿಂಗಳ ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ ಈ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದು ಹೇಳಿದೆ.

ಹಿಂದಿಯಲ್ಲಿ ಈ ಟ್ವೀಟ್ ಮಾಡಲಾಗಿದ್ದು, NCIB Headquarters ಹೆಸರಿನಡಿ ಈ ಖಾತೆ ವೆರಿಫೈ ಆಗಿದ್ದು, ಅಮೂಲ್ಯವಾದ ಮಾಹಿತಿ, ಯುವತಿ ಅಥವಾ ಮಹಿಳೆಯನ್ನು 14 ಸೆಕೆಂಡ್ ಗಳಿಗಿಂತ ಹೆಚ್ಚು ಕಾಲ ನೋಡಿದ್ದಲ್ಲಿ ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ. ತಿಳಿದೋ ತಿಳಿಯದೆಯೋ, ತಮಾಷೆಗೋ ಪರಿಚಿತ ಅಥವಾ ಅಪರಿಚಿತ ಮಹಿಳೆಯನ್ನು ಗುರಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂಥ ಪ್ರಕರಣಗಳು ಲೈಂಗಿಕ ದೌರ್ಜನ್ಯದಡಿ ಬರುತ್ತದೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ODI World Cup final 2023: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್

ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಟ್ವೀಟ್ ಜನರನ್ನು ದಾರಿ ತಪ್ಪಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. NCIB ಹಸೆರು ಹಾಗೂ ಟ್ವಿಟರ್ ಹ್ಯಾಂಡಲ್ ಆಗಿರುವ ಎನ್ ಸಿಐಬಿ ಹೆಡ್ ಕ್ವಾಟ್ರಸ್ ಹಾಗೂ ಅದರ ಕೆಂಪು ಹಾಗೂ ನೀಲಿ ಬಣ್ಣದ ಲೋಗೋ ಪೊಲೀಸ್ ಇಲಾಖೆಗೆ ಸೇರಿದ ಖಾತೆ ಎಂಬಂತಿದೆ. ಆದರೆ ಟ್ವಿಟರ್ ಯುಆರ್ ಎಲ್ ಕ್ಲಿಕ್ ಮಾಡಿದರೆ ಅದು ಸರ್ಕಾರಿ ಸಂಸ್ಥೆಯಲ್ಲ ಎಂದು ತಿಳಿಯುತ್ತದೆ. ಟ್ವಿಟರ್ ಖಾತೆಯ ವಿವರದಲ್ಲಿ ಅದು ಎನ್ ಜಿಒ ಎಂಬ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣ ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದಾರೆ.

NCIB Headquarters: you can get jailed for staring woman for 14 seconds or more what are the new rules

RELATED ARTICLES

Most Popular