“Pabbas” ice cream: ಹುಟ್ಟೂರಲ್ಲಿ ಬಾಲ್ಯದ ಫೇವರಿಟ್ “ಪಬ್ಬಾಸ್” ಐಸ್ ಕ್ರೀಮ್ ಸವಿದ ಕೆ.ಎಲ್ ರಾಹುಲ್

ಮಂಗಳೂರು: (“Pabbas” ice cream) ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ ಮೂಲತಃ ಕರಾವಳಿಯವರು. ರಾಹುಲ್ ಹುಟ್ಟೂರು ಮಂಗಳೂರಿನ ಸುರತ್ಕಲ್. ರಾಹುಲ್ ಹುಟ್ಟಿದ್ದು, ಬೆಳೆದದ್ದು, ಶಾಲೆ-ಕಾಲೇಜಿಗೆ ಹೋಗಿದ್ದು ಎಲ್ಲಾ ಮಂಗಳೂರಿನಲ್ಲೇ.

ಮಂಗಳೂರು ಹುಡುಗ ರಾಹುಲ್ ಅವರಿಗೆ ಅಲ್ಲಿನ ಪಬ್ಬಾಸ್ ಐಸ್ ಕ್ರೀಮ್ (“Pabbas” ice cream) ಅಂದ್ರೆ ಫೇವರಿಟ್. ಶಾಲೆ-ಕಾಲೇಜಿಗೆ ಹೋಗುತ್ತಿದ್ದಾಗ ರಾಹುಲ್ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್’ಗೆ ಹೋಗಿ ತಮ್ಮ ನೆಚ್ಚಿನ ಐಸ್ ಕ್ರೀಮ್ ಸವಿಯುತ್ತಿದ್ರು. ಕ್ರಿಕೆಟ್’ಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಆದ್ರೂ ರಾಹುಲ್ ತಮ್ಮ ಬಾಲ್ಯದ ಫೇವರಿಟ್ ಐಸ್ ಕ್ರೀಮನ್ನು ಮರೆತಿಲ್ಲ. ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ರಾಹುಲ್, ಮಂಗಳೂರಿನ ಲಾಲ್ ಬಾಗ್’ನಲ್ಲಿರುವ ಪಬ್ಬಾಸ್ ಐಸ್ ಕ್ಪೀಮ್ ಪಾರ್ಲರ್’ಗೆ ಭೇಟಿ ನೀಡಿ “ಗಡ್ ಬಡ್” ತಿಂದಿದ್ದಾರೆ. ಅಷ್ಟೇ ಅಲ್ಲ, ಗಡ್ ಬಡ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿ ಹಾಕಿದ್ದಾರೆ.

ಕಳೆದ ಬುಧವಾರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದ ರಾಹುಲ್, ಸುಬ್ರಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ನೇರವಾಗಿ ಮಂಗಳೂರಿಗೆ ಬಂದು ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್’ಗೆ ತೆರಳಿ ಐಸ್ ಗಡ್ ಬಡ್ (“Pabbas” ice cream) ತಿಂದಿದ್ದಾರೆ. ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿ, ಇದೀಗ ಮುಂಬೈಗೆ ತೆರಳಿರುವ ರಾಹುಲ್ ಅಲ್ಲಿಂದ ಬುಧವಾರ ಕೋಲ್ಕತಾಗೆ ಪ್ರಯಾಣಿಸಲಿದ್ದಾರೆ.

ಭಾರತ ಕ್ರಿಕೆಟ್ ತಂಡ ಬುಧವಾರ ಕೋಲ್ಕೊತಾದಿಂದ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ಭಾರತದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿ
ಡಿಸೆಂಬರ್ 04: ಮೊದಲ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 07: 2ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 10: 3ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 14-18: ಮೊದಲ ಟೆಸ್ಟ್ (ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಛಟ್ಟೊಗ್ರಾಮ್)
ಡಿಸೆಂಬರ್ 22-26: 2ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ((India Vs Bangladesh ODI series):
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ಪೀಪ್ ಸೇನ್.

ಇದನ್ನೂ ಓದಿ : Vijay Hazare Trophy Semifinal : ನಾಳೆ ಸೆಮಿಫೈನಲ್, ಕರ್ನಾಟಕಕ್ಕೆ ಸೌರಾಷ್ಟ್ರ ಎದುರಾಳಿ

ಇದನ್ನೂ ಓದಿ : ODI World Cup final 2023: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ (India Vs Bangladesh test series):
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

(“Pabbas” ice cream) Indian cricket team vice-captain KL Rahul is originally from the coast. Rahul’s hometown is Surathkal, Mangalore. Rahul was born, brought up, went to school and college all in Mangalore.

Comments are closed.