ಇಸ್ಲಾಮಾಬಾದ್: Pakistan Murder: ಸದಾ ಭಯೋತ್ಪಾದನೆ, ಭಾರತದ ಮೇಲಿನ ವೈರತ್ವದಿಂದಲೇ ಸುದ್ದಿಯಾಗುವ ಶತ್ರುರಾಷ್ಟ್ರ ಪಾಕಿಸ್ತಾನದ ನೆಲದಲ್ಲಿ ಇದೀಗ ಸಮಾಜವೇ ತಲೆತಗ್ಗಿಸುವ ಕ್ರೂರ ಕೃತ್ಯವೊಂದು ನಡೆದಿದೆ. ಹಿಂದೂ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಟುಕರು ಬಳಿಕ ಆಕೆಯ ತಲೆ ಮತ್ತು ಸ್ತನಗಳನ್ನು ಕತ್ತರಿಸಿ, ದೇಹದ ಚರ್ಮ ಸುಲಿದು ಕ್ರೂರತನ ಮೆರೆದಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಿಂಜೋರೋ ಪಟ್ಟಣದ ನಿವಾಸಿ 40 ವರ್ಷದ ಮಹಿಳೆಯೊಬ್ಬರ ಮೃತದೇಹ ತಲೆ ಮತ್ತು ಸ್ತನಗಳನ್ನು ಕತ್ತರಿಸಿದ ಹಾಗೂ ಚರ್ಮವನ್ನು ಸುಲಿದ ರೀತಿಯಲ್ಲಿ ಪತ್ತೆಯಾಗಿದೆ. ಈ ಮಹಿಳೆಯು ಭೀಲ್ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಆಕೆಯ ಹೆಸರು ದಯಾ ಭೇಲ್ ಎಂದು ಗುರುತಿಸಲಾಗಿದೆ. ಅತ್ಯಂತ ಕ್ರೂರ ರೀತಿಯಲ್ಲಿ ಈ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿದೆ. ಈ ಬಗ್ಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಲೀಡರ್ ಹಾಗೂ ಹಿಂದೂ ಸಮುದಾಯದ ಪ್ರಥಮ ಸೆನೆಟರ್ ಕೃಷ್ಣಕುಮಾರಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
Daya Bhel 40 years widow brutally murdered and body was found in very bad condition. Her head was separated from the body and the savages had removed flesh of the whole head. Visited her village Police teams from Sinjhoro and Shahpurchakar also reached. pic.twitter.com/15bIb1NXhl
— Krishna Kumari (@KeshooBai) December 29, 2022
ಇದನ್ನೂ ಓದಿ: Ramiz Raja: ಟೀಮ್ ಇಂಡಿಯಾ ನಾಯಕತ್ವ ಬದಲಾವಣೆಗೆ ಪಾಕಿಸ್ತಾನ ಕಾರಣವಂತೆ!
ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ದುರುಳರು ಬಳಿಕ ಆಕೆಯ ತಲೆ ಮತ್ತು ಸ್ತನಗಳನ್ನು ಕತ್ತರಿಸಿ, ತಲೆಯ ಮಾಂಸವನ್ನು ತೆಗೆದುಹಾಕಿ, ದೇಹದ ಚರ್ಮವನ್ನು ಸುಲಿದು ಬಳಿಕ ಗೋಧಿ ಹೊಲದಲ್ಲಿ ಎಸೆದು ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಹಿಳೆಯು ವಿಧವೆಯಾಗಿದ್ದು, 4 ಮಕ್ಕಳ ತಾಯಿ ಎಂದು ತಿಳಿದುಬಂದಿದೆ.
ಸದ್ಯ ಸ್ಥಳೀಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಮೃತದೇಹದ ಪೋಸ್ಟ್ ಮಾರ್ಟಮ್ ನಡೆಸಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Pakistan Murder: A 40 year old Hindu woman brutally gang raped and murdered in Pakistan her head and breasts chopped off