Restriction for surya rashmi: ಕೊರೊನಾ ಆತಂಕದ ಹಿನ್ನಲೆ: ಸೂರ್ಯರಶ್ಮಿ ಗೋಚರಕ್ಕೆ ಭಕ್ತರಿಗೆ ನಿರ್ಬಂಧ

ಬೆಂಗಳೂರು: (Restriction for surya rashmi) ಹೊಸ ವರ್ಷದ ಸಂಭ್ರಮಾಚರಣೆಯ ಜೊತೆಗೆ ಹಬ್ಬ ಹರಿದಿನಗಳು, ಜಾತ್ರೆಗಳು ಕೂಡ ಶುರುವಾಗಲಿದೆ. ಮಕರ ಸಂಕ್ರಾಂತಿ ಸಂಭ್ರಮ ಕೂಡ ಇರತ್ತೆ. ಕೊರೊನಾ ಭೀತಿ ಅರಂಭವಾದ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲೂ ಕೂಡ ಆಡಳಿತ ಮಂಡಳಿ ಕ್ರಮಗಳನ್ನ ಕೈಗೊಳ್ಳುತ್ತಿದ್ದು, ಬೆಂಗಳೂರಿನ ಗವಿಗಂಗಾದರೇಶ್ವರ ದೇವಾಲಯದಲ್ಲಿ ಹೊಸ ವರ್ಷದ ಆಚರಣೆ, ಮಕರ ಸಂಕ್ರಾಂತಿ ಸಂಭ್ರಮಕ್ಕೆ ಬ್ರೇಕ್‌ ಬಿದ್ದಿದೆ.

ಕರ್ನಾಟಕದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ಆರಂಭವಾಗಿದ್ದು, ಇದೀಗ ದೇವಸ್ಥಾನದಲ್ಲಿನ ಹೊಸ ವರ್ಷಾಚರಣೆಗೆ ಬ್ರೇಕ್‌(Restriction for surya rashmi) ಬಿದ್ದಿದೆ. ಸೂರ್ಯರಶ್ಮಿ ಪ್ರವೇಶಿಸುವ ಒಂದು ಪ್ರಸಿದ್ದ ದೇವಾಲಯವಾದ ಬೆಂಗಳೂರಿನ ಗವಿಗಂಗಾದರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಮಣದಂದು ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತನ್ನ ಪಥವನ್ನು ಬದಲಿಸುತ್ತಾನೆ. ಈ ಸಂದರ್ಭದಲ್ಲಿ ದೇವಾಲಯದ ಬಲಭಾಗದ ಕಿಂಡಿಯಿಂದ ಸೂರ್ಯ ರಶ್ಮಿ ಪ್ರವೇಶಿಸಿ ನಂದಿಯ ಕೊಂಬಿನ ಸುತ್ತ ಹರಿದು ಶಿವಲಿಂಗದ ಪಾದವನ್ನು ಸ್ಪರ್ಶಿಸುತ್ತದೆ. ಈ ವಿಸ್ಮಯಕಾರಿ ಘಳಿಗೆಯನ್ನು ನೋಡಲು ಅನೇಕ ಭಕ್ತರು ಮಕರ ಸಂಕ್ರಮಣದಂದು ದೇವಾಲಯದತ್ತ ಹರಿದು ಬರುತ್ತಾರೆ.

ಆದರೆ ಈ ಭಾರಿ ಕೊರೊನಾ ಆತಂಕ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾಸ್ಕ್‌ ಕಡ್ಡಾಯವಾಗಿ ಧರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಅಲ್ಲದೇ ಮಕರ ಸಂಕ್ರಾಂತಿಯಂದು ಶಿವಲಿಂಗದ ಮೇಲೆ ಸೂರ್ಯರಶ್ಮಿ ಗೋಚರವಾಗುವುದನ್ನು ನೋಡಲು ಸಾಕಷ್ಟು ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಿರ್ಬಂಧಗಳನ್ನು ಹೇರಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಆಡಳಿತ ಮಂಡಳಿ ಮಹತ್ವದ ನಿರ್ದಾರ ತೆಗೆದುಕೊಂಡಿದ್ದು, ದೇವಸ್ಥಾನದ ಎಲ್ಲಾ ಭಕ್ತರು ಕೊರೊನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ : Udupi mask compulsory: ಉಡುಪಿಯ ಚಿತ್ರಮಂದಿರ, ಮಾಲ್‌ ಹೋಟೆಲ್‌ ಗಳಲ್ಲಿ ಮಾಸ್ಕ್‌ ಕಡ್ಡಾಯ

In the backdrop of the Corona scare, the management board is also taking measures in the temples, and the New Year celebrations and Makar Sankranti celebrations at the Gavigangadareshwar temple in Bangalore have come to a halt.

Comments are closed.