ನವದೆಹಲಿ:(Parking Dispute) ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆರೋಪಿಗಳು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಭೀಕರ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
(Parking Dispute)ವರುಣ್ (35ವರ್ಷ) ಎಂಬಾತನೇ ಹತ್ಯೆಗೆ ಒಳಗಾಗದ ಯುವಕ. ಉಪಹಾರ ಗೃಹದ ಹೊರಗಡೆ ವಾಹನ ನಿಲುಗಡೆ ವಿಚಾರಕ್ಕೆ ಸಂಬಂದಿಸಿದಂತೆ ತಡರಾತ್ರಿಯಲ್ಲಿ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು. ಇಬ್ಬರ ನಡುವಿನ ಗಲಾಟೆ ಅತಿರೇಕಕ್ಕೆ ತಿರುಗಿದ ಆರೋಪಿ ಇಟ್ಟಿಗೆತಿಂದ ವರುಣ್ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ:Head Bush Controversy: ಸಂಕಷ್ಟದ ಸುಳಿಯಲ್ಲಿ ‘ಹೆಡ್‍ಬುಶ್’: ಅಷ್ಟಕ್ಕೂ ಡಾಲಿ ವಿರುದ್ಧ ತಿರುಗಿಬಿದ್ದಿದ್ಯಾರು
ಕೂಡಲೇ ಸ್ಥಳೀಯರು ವರುಣ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರುಣ್ ಸಾವನ್ನಪ್ಪಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸಲು ತಡ ಮಾಡುತ್ತಿರುವುದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆನ್ಲೈನ್ನಲ್ಲಿ ಸಿಹಿ ತಿನಿಸು ಆರ್ಡರ್ ಮಾಡಲು ಹೋದ ಮಹಿಳೆಗೆ 2.4 ಲಕ್ಷ ರೂ. ಪಂಗನಾಮ
ಮುಂಬೈ : ಹಬ್ಬಗಳು ಅಂದಮೇಲೆ ಅಲ್ಲಿ ಸಿಹಿ ತಿನಿಸುಗಳು ಇಲ್ಲ ಅಂದರೆ ಹಬ್ಬಗಳು ಪೂರ್ಣ ಅನಿಸೋದಿಲ್ಲ. ಹೀಗಾಗಿ ಪ್ರತಿಯೊಂದು ಮನೆಯಲ್ಲಿಯೂ ಸಿಹಿ ತಿಂಡಿಗಳು ಹಬ್ಬಗಳಲ್ಲಿ ಇದ್ದೇ ಇರುತ್ತದೆ. ಈಗ ದೀಪಾವಳಿ ಹಬ್ಬ ಬೇರೆ ಇರೋದ್ರಿಂದ ಕೆಲವರು ಮನೆಯಲ್ಲಿ ಸಿಹಿ ತಿಂಡಿಗಳನ್ನು ತಯಾರಿ ಮಾಡಿದರೆ ಇನ್ನೂ ಕೆಲವರು ಆನ್ಲೈನ್ನಲ್ಲಿ ಆರ್ಡರ್ ಮಾಡುತ್ತಾರೆ. ಇದೇ ರೀತಿ ಮುಂಬೈನಲ್ಲಿ ಹಬ್ಬಕ್ಕೆಂದು ಆನ್ಲೈನ್ನಲ್ಲಿ ಸಿಹಿ ತಿನಿಸುಗಳನ್ನು ಆರ್ಡರ್ ಮಾಡಲು ಹೋದ 49 ವರ್ಷದ ಮಹಿಳೆಯು ಬರೋಬ್ಬರಿ 2.4 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಆದರೆ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಮಹಿಳೆಯು ವಂಚನೆಯಾದ ತನ್ನ ಹಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಅಂಧೇರಿ ಉಪನಗರ ನಿವಾಸಿ ಪೂಜಾ ಶಾ ಭಾನುವಾರದಂದು ಫುಡ್ ಡೆಲಿವರಿ ಅಪ್ಲಿಕೇಶನ್ನಲ್ಲಿ ಸಿಹಿ ತಿಂಡಿಗಳನ್ನು ಆರ್ಡರ್ ಮಾಡಿದ್ದರು. ಆನ್ಲೈನ್ನಲ್ಲಿ ಒಂದು ಸಾವಿರ ರೂಪಾಯಿ ಪಾವತಿ ಮಾಡಲು ಮುಂದಾದ ಸಮಯದಲ್ಲಿ ವಹಿವಾಟು ವಿಫಲವಾಗಿತ್ತು. ಇದಾದ ಬಳಿಕ ಗೂಗಲ್ನಲ್ಲಿ ಸ್ವೀಟ್ ಅಂಗಡಿಯ ನಂಬರ್ನ್ನು ತೆಗೆದುಕೊಂಡ ಪೂಜಾ ಶಾ ಆ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ಪೂಜಾ ಶಾರ ಕ್ರೆಡಿಟ್ ಕಾರ್ಡ್ ಸಂಖ್ಯೆ ಹಾಗೂ ಆಕೆಯು ಫೋನ್ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನೀಡುವಂತೆ ಕೇಳಿದ್ದಾರೆ.
ಪೂಜಾ ಶಾ ಕ್ರೆಡಿಟ್ ಕಾರ್ಡ್ನ ವಿವರ ಹಾಗೂ ಒಟಿಪಿಯನ್ನು ಶೇರ್ ಮಾಡುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ 2,40,310 ರೂಪಾಯಿಗಳು ಡೆಬಿಟ್ ಆಗಿದೆ. ತಾನು ಆನ್ಲೈನ್ ವಂಚನೆಗೆ ಒಳಗಾಗಿದ್ದೇನೆ ಎಂಬ ವಿಚಾರ ಅರಿವಿಗೆ ಬರುತ್ತಿದ್ದಂತೆಯೇ ಪೂಜಾ ಶಾ ಕೂಡಲೇ ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಪೂಜಾ ಶಾ ಖಾತೆಯಿಂದ 2,27,205 ರೂಪಾಯಿಗಳು ಡೆಬಿಟ್ ಆಗುವುದನ್ನು ತಪ್ಪಿಸಿದ್ದಾರೆ. ಅಲ್ಲದೇ ಈ ಸಂಬಂಧ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
Parking dispute: Killing of a person with a brick