UK PM Rishi Sunak : ಪ್ರಧಾನಿ ಮೋದಿ ಯುಕೆ ಪ್ರಧಾನಿ ರಿಷಿ ಸುನಕ್ ಭೇಟಿಗೆ ವೇದಿಕೆಯಾಗಲಿದೆ ಜಿ 20 ಶೃಂಗಸಭೆ

ನವದೆಹಲಿ : ಭಾರತೀಯ ಮೂಲದ (UK PM Rishi Sunak)ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗಿರುವ ಬಗ್ಗೆ ದೇಶದೆಲ್ಲಡೆ ಸಂಭ್ರಮಿಸುತ್ತಿದ್ದಾರೆ. ಇದಲ್ಲದೆ ಯುಕೆ ಪ್ರಧಾನಿ ರಿಷಿ ಸುನಕ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ತಿಂಗಳು ಬಾಲಿಯಲ್ಲಿ ನಡೆಯಲ್ಲಿರುವ ಜಿ20 ಶೃಂಗಸಭೆಯ ಮೂಲಕ ರಿಷಿ ಸುನಕ್‌ ಅವರು ತಮ್ಮ ಅಧಿಕಾರದ ಮೊದಲ ಸಭೆ ನಡೆಸುವ ನಿರೀಕ್ಷೆಗಳು ಹೆಚ್ಚಿವೆ ಎಂದು ಮಾಧ್ಯಮ ಮೂಲಗಳಿಂದ ವರದಿಯಾಗುತ್ತಿದೆ. ಈ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯುಕೆಯ ನೂತನ ಪ್ರಧಾನಿ ರಿಷಿ ಸುನಕ್‌ರನ್ನು ಭೇಟಿಯಾಗುವ ನಿರೀಕ್ಷೆ ಕೂಡ ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ಯುಕೆ ಪ್ರಧಾನಿ ರಿಷಿ ಸುನಕ್‌(UK PM Rishi Sunak) ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಬಾಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಭೇಟಿ ಮಾಡುವ ಮೂಲಕ ಒಟ್ಟಿಗೆ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಹಾಗೇ ಉಭಯ ನಾಯಕರ ನಡುವೆ ನಡೆಯುವ ಸಂಭವನೀಯ ಸಭೆಯು ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ವ್ಯಾಯಾಮಕ್ಕೆ ಹೊಸ ತಿರುವು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : Rishi Sunak Lifestyle : ಹೋಟೆಲ್ ಸಪ್ಲೈಯರ್, ವೈದ್ಯರ ಮಗ ಬ್ರಿಟನ್ ಪ್ರಧಾನಿ ಆಗಿದ್ದು ಹೇಗೆ ? ಇಲ್ಲಿದೆ ರಿಷಿ ಸುನಕ್ ಬದುಕಿನ ರೋಚಕ ಕಹಾನಿ

ಇದನ್ನೂ ಓದಿ : BJP secret team visit Karnataka : ಕರ್ನಾಟಕಕ್ಕೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ?

ಇದನ್ನೂ ಓದಿ : new britain pm rishi sunak :ಬ್ರಿಟನ್​ ಪ್ರಧಾನಿ ಪಟ್ಟಕ್ಕೇರಿದ ರಿಷಿ ಸುನಕ್​ರ ಮುಂದಿದೆ ಈ ಸವಾಲುಗಳು

42 ವರ್ಷದ ರಿಷಿ ಸುನಕ್‌ ಪೋಷಕರು ಭಾರತೀಯ ಮೂಲದವರಾಗಿದ್ದಾರೆ. ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್‌ ಇನ್ಫೋಸಿಸ್‌ ಸಂಸ್ಥೆಯ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಅವರ ಅಳಿಯ. 2020ರಲ್ಲಿ ರಿಷಿ ಸುನಕ್‌ ಬ್ರಿಟನ್‌ ಸರಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಹಣಕಾಸು ಹುದ್ದೆಗೆ ರಾಜೀನಾಮೆಯನ್ನು ನೀಡಿ ಹೊರಬರುತ್ತಾರೆ. ಆದರೆ ಈಗ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವುದರ ಮೂಲಕ ಯುಕೆಯ ಭಾರತೀಯ ಮೂಲದ ಮೊದಲ ಪ್ರಧಾನಿಯಾಗಿದ್ದಾರೆ. ಲಿಜ್ ಟ್ರಸ್ ತಮ್ಮ ಆರ್ಥಿಕ ನೀತಿಗಳಿಂದ ಹಿನ್ನಡೆಯನ್ನು ಎದುರಿಸುತ್ತಿರುವಾಗ ಅವರು ಹುದ್ದೆಗೆ ರಾಜೀನಾಮೆಯನ್ನು ನೀಡಿದ ನಂತರ ಸುನಕ್ ಮಂಗಳವಾರ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

The G20 summit will be the platform for Prime Minister Modi’s meeting with UK Prime Minister Rishi Sunak

Comments are closed.