Peru bus accident: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತ: 25 ಮಂದಿ ಸಾವು

ಲಿಮಾ: (Peru bus accident) Peru bus accidentಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪೆರುವಿನಲ್ಲಿ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Q’orianka Tours ಗೆ ಸೇರಿದ ಬಸ್ ಲಿಮಾದ ರಾಜಧಾನಿಯಿಂದ ಪೆರುವಿನ ಕರಾವಳಿ ಮರುಭೂಮಿಯ ಈಕ್ವೆಡಾರ್ ಗಡಿಯ ಸಮೀಪವಿರುವ ತುಂಬೆಸ್ ಪ್ರದೇಶಕ್ಕೆ ಹೊರಟಿದ್ದು, ಉತ್ತರ ಪೆರುವಿನಲ್ಲಿ ಬಸ್ಸು ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾನೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಲು ನಿಖರವಾದ ಕಾರಣಗಳು ಏನೆಂದು ತಿಳಿದುಬಂದಿಲ್ಲ. ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಡೆವಿಲ್‌ ಕರ್ವ್‌ ಎಂದು ಕರೆಯಲ್ಪಡುವ ಸ್ಥಳದಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ನಿಖರವಾದ ಸಂಖ್ಯೆಗಳು ತಿಳಿದುಬಂದಿಲ್ಲ. ಇದೀಗ ಘಟನೆಯ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇರಾನ್‌ ನಲ್ಲಿ ಭೂಕಂಪ: 7 ಜನ ಸಾವು

ಟೆಹ್ರಾನ್:‌ ಇರಾನ್‌ ನಲ್ಲಿ ಶನಿವಾರ ಸಂಭವಿಸಿದ ಭೂಕಂಪನದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸುದ್ದಿ ಮೂಲಗಳ ಪ್ರಕಾರ 5.9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಇರಾನ್‌ ಮತ್ತು ಡರ್ಕಿ ಗಡಿ ಅಂಚಿನಲ್ಲಿರುವ ಖೋಯ ನಗರದಲ್ಲಿ ಸಮೀಪಿಸಿದೆ.

ಕಂಪನಗಳು ಸಾಕಷ್ಟು ಪ್ರಬಲವಾಗಿವೆ ಎಂದು ವರದಿಯಾಗಿದೆ. ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದ ಹಲವು ಪ್ರದೇಶಗಳಲ್ಲೂ ಭೂಕಂಪದ ಅನುಭವವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : Insult National Anthem: ರಾಷ್ಟ್ರಗೀತೆಗೆ ಅವಮಾನ: ಮೂವರು ಯುವಕರ ಬಂಧನ

ಇದನ್ನೂ ಓದಿ : Hemmadi Student death: ಹೆಮ್ಮಾಡಿ: ಬಸ್‌ ಹರಿದು ವಿದ್ಯಾರ್ಥಿ ದಾರುಣ ಸಾವು

ಇದನ್ನೂ ಓದಿ : private photo viral threat: ಇನ್ಸ್ಟಾಗ್ರಾಮ್‌ ನಲ್ಲಿ ಹುಡುಗಿಯರೊಂದಿಗೆ ಸ್ನೇಹ: ಖಾಸಗಿ ಫೋಟೋ ವೈರಲ್‌ ಬೆದರಿಕೆ, 17 ವರ್ಷದ ಹುಡುಗನ ಬಂಧನ

Peru bus accident: Bus carrying passengers accident: 25 killed

Comments are closed.