ಮಂಗಳವಾರ, ಏಪ್ರಿಲ್ 29, 2025
HomeCrimePetroleum tanker blast: ಇಂಧನ ಟ್ಯಾಂಕರ್‌ ಸ್ಫೋಟ: 10 ಮಂದಿ ಸಾವು, 40 ಮಂದಿಗೆ ಗಾಯ

Petroleum tanker blast: ಇಂಧನ ಟ್ಯಾಂಕರ್‌ ಸ್ಫೋಟ: 10 ಮಂದಿ ಸಾವು, 40 ಮಂದಿಗೆ ಗಾಯ

- Advertisement -

ದಕ್ಷಿಣ ಅಫ್ರಿಕಾ: (Petroleum tanker blast) ಪೆಟ್ರೋಲಿಯಂ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನಲವತ್ತು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ನ ಟಾಂಬೋ ಸ್ಮಾರಕ ಆಸ್ಪತ್ರೆ ಬಳಿ ಶನಿವಾರ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಹಲವರ ಸ್ಥೀತಿ ಚಿಂತಾಜನಕವಾಗಿದೆ.

ಆಸ್ಪತ್ರೆಯಿಂದ ಸುಮಾರು 100 ಮೀ. ದೂರದಲ್ಲಿರುವ ತಗ್ಗು ಸೇತುವೆಯ ಕೆಳಗೆ ಇಂಧನ ಟ್ಯಾಂಕರ್ ಸಿಲುಕಿದ್ದು, ಸ್ಫೋಟದ (Petroleum tanker blast) ಬಳಿಕ ಆಸ್ಪತ್ರೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ ಎಂದು ವರದಿಯಾಗಿದೆ.

ಸುರಂಗ ಮಾರ್ಗವನ್ನು ಪ್ರವೇಶಿಸುವ ಸಲುವಾಗಿ ಟ್ಯಾಂಕರ್‌ ಸೇತುವೆಯ ಕೆಳಗಡೆಯಿಂದ ಹೋಗಿದೆ. ಈ ವೇಳೆ ಯಲ್ಲಿ ಅದು ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದು, ಘರ್ಷಣೆ ಉಂಟಾಗಿ ಸ್ಫೋಟ ಸಂಭವಿಸಿದೆ. ಕೂಡಲೆ ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದು, ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವಾಗಲೇ ಮತ್ತೊಂದು ಬಾರಿ ಸ್ಫೋಟ ಸಂಭವಿಸಿದೆ. ಎರಡನೇ ಬಾರಿ ಸ್ಫೋಟ ಸಂಭವಿಸಿದ ಪರಿಣಾಮ ಅಗ್ನಿಶಾಮಕದ ಇಂಜಿನ್‌ ಹಾಗೂ ಎರಡು ಮೋಟಾರ್‌ ವಾಹನಗಳು ಬೆಂಕಿಗಾಹುತಿಯಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ : Largest Mall In US : ಯುಎಸ್‌ನ ಅತಿದೊಡ್ಡ ಮಾಲ್‌ನಲ್ಲಿ ಯುವಕನ ಮೇಲೆ ಗುಂಡಿನ ಚಕಮಕಿ

ಇದನ್ನೂ ಓದಿ : Chanda Kochhar : ಸಾಲ ವಂಚನೆ ಪ್ರಕರಣ : ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಪತಿ ದೀಪಕ್ ಸಿಬಿಐನಿಂದ ಬಂಧನ

ಸ್ಫೋಟದ ಪರಿಣಾಮ ಟಾಂಬೋ ಸ್ಮಾರಕ ಆಸ್ಪತ್ರೆಯ ಮೇಲ್ಛಾವಣಿ ಕುಸಿದಿದ್ದು, ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಗಳು ಇವೆ. ಗಾಯಗೊಂಡ ನಲವತ್ತು ಮಂದಿಯಲ್ಲಿ 19 ಮಂದಿಯ ಆರೋಗ್ಯ ಸ್ಥೀತಿ ಚಿಂತಾಜನಕವಾಗಿದ್ದು, ಹದಿನೈದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

(Petroleum tanker blast) A tanker carrying petroleum gas exploded, killing ten people and injuring forty people near the Tambo Memorial Hospital in Johannesburg, South Africa on Saturday. The death toll is likely to rise and the condition of many is critical.

RELATED ARTICLES

Most Popular