Praveen’s family thanked the police : ಪ್ರವೀಣ್​ ನೆಟ್ಟಾರು ಹಂತಕರಿಂದ ಸ್ಥಳ ಮಹಜರು : ಪೊಲೀಸ್​ ಇಲಾಖೆಗೆ ಧನ್ಯವಾದ ಅರ್ಪಿಸಿದ ಪ್ರವೀಣ್​ ತಾಯಿ

ಮಂಗಳೂರು : Praveen’s family thanked the police : ಪ್ರವೀಣ್​ ನೆಟ್ಟಾರು ಕೊಲೆ ನಡೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ದಕ್ಷಿಣ ಕನ್ನಡ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಹಂತಕರಾದ ಬಶೀರ್​, ರಿಯಾಜ್​ ಹಾಗೂ ಶಿಯಾಬ್​​ರನ್ನು ಕೇರಳದಲ್ಲಿ ಇಂದು ಬೆಳಗ್ಗೆ ಬಂಧಿಸಿರುವ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ಎಡಿಜಿಪಿ ಅಲೋಕ್​ ಕುಮಾರ್​ ಕೊಲೆ ಕೃತ್ಯದ ಬಗ್ಗೆ ಪಿನ್​ ಟು ಪಿನ್​ ಮಾಹಿತಿ ನೀಡಿದ್ದಾರೆ.


ಬಂಧಿತ ಮೂವರೂ ಸುಳ್ಯ ತಾಲೂಕಿನ ನಿವಾಸಿಗಳೇ ಆಗಿದ್ದು ಪ್ರವೀಣ್​ ನೆಟ್ಟಾರುವನ್ನು ಕೊಲೆ ಮಾಡುವಂತಹ ದ್ವೇಷ ಏನಿತ್ತು ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ಮೇಲ್ನೋಟಕ್ಕೆ ಮೂವರು ಪಿಎಫ್​ಐ ಹಾಗೂ ಎಸ್​ಡಿಪಿಐ ಜೊತೆಯಲ್ಲಿ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎನ್ನಲಾಗಿದ್ದು ಕೆಲವು ದಿನಗಳ ಹಿಂದೆ ಬೆಳ್ಳಾರೆಯಲ್ಲಿ ಮೃತನಾದ ಮಸೂದ್​ ಎಂಬಾತನ ಹತ್ಯೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ.


ಹಂತಕರಾದ ರಿಯಾಜ್​, ಬಶೀರ್​ ಹಾಗೂ ಶಿಯಾಬ್​ನನ್ನು ಇಂದು ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ಯಲಾಗಿದ್ದು ಸ್ಥಳ ಮಹಜರು ಕಾರ್ಯ ನಡೆಸಲಾಗಿದೆ. ಹತ್ಯೆ ನಡೆದಂತಹ ಬೆಳ್ಳಾರೆ ಪರಿಸರದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಂಡಿದ್ದಾರೆ. ಬಿಗಿ ಭದ್ರತೆಯೊಂದಿಗೆ ಡಿವೈಎಸ್ಪಿ ಗಾನ ಪಿ ಕುಮಾರಿ ನೇತೃತ್ವದಲ್ಲಿ ಸ್ಥಳ ಮಹಜರು ಕಾರ್ಯ ನಡೆಸಲಾಗಿದೆ. ಪ್ರವೀಣ್​​ ಕೋಳಿ ಅಂಗಡಿ ಎದುರು ಆರೋಪಿಗಳನ್ನು ಕರೆತಂದ ಪೊಲೀಸರು ಆರೋಪಿಗಳು ಪ್ರವೀಣ್​ಗಾಗಿ ಕಾದು ಕುಳಿತ ಜಾಗ ಹಾಗೂ ಹತ್ಯೆ ಮಾಡಿದ ಜಾಗಗಳ ಮಹಜರು ಕಾರ್ಯ ನಡೆಸಿದ್ದಾರೆ.


ಇತ್ತ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆಗೆ ಕಾರಣರಾದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸ್​ ಇಲಾಖೆಗೆ ಪ್ರವೀಣ್​ ಕುಟುಂಬ ಧನ್ಯವಾದ ಸಲ್ಲಿಸಿದೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬೇಡಿ. ಯಾವ ವಕೀಲನೂ ಆರೋಪಿಗಳ ಪರವಾಗಿ ವಕಾಲಾತು ವಹಿಸಬಾರದು ಎಂದು ಮೃತ ಪ್ರವೀಣ್​ ತಾಯಿ ಮನವಿ ಮಾಡಿದ್ದಾರೆ.

ಇದನ್ನು ಓದಿ : 2nd PUC Supplementary Examination : ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : masks have been made mandatory : ಕೊರೊನಾ ಆತಂಕ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಮಾಸ್ಕ್​ ಕಡ್ಡಾಯ

Praveen’s family thanked the police department for arresting the accused of Praveen Nettaru’s murder

Comments are closed.