ಸಿಖ್ ಜನಾಂಗದ ಪವಿತ್ರ ಕ್ಷೇತ್ರವಾದ ಅಮೃತಸರದ ಹರ್ಮಂದಿರ್ ಸಾಹಿಬ್ ಗುರುದ್ವಾರದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ನ ಕಾಂಗ್ರೆಸ್ ಸರ್ಕಾರವು ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಗುರುದ್ವಾರವನ್ನು ಅಪವಿತ್ರಗೊಳಿಸಿದ್ದಾನೆ ಎಂಬ ಕಾರಣಕ್ಕೆ ಗುರುದ್ವಾರದಲ್ಲಿ (Golden Temple) ಆವರಣದಲ್ಲಿ ಯುವಕನನ್ನು ಭಕ್ತರು ಬರ್ಬರವಾಗಿ ಕೊಲೆಗೈದಿದ್ದರು.
ಪಂಜಾಬ್ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಸುಖಜೀಂದರ್ ಸಿಂಗ್ ರಾಂಧವಾ ಡಿಸೆಂಬರ್ 19ರಂದು ಕೊಲೆಯಾದ ಯುವಕನ ಬಗ್ಗೆ ಯಾವುದೇ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತನಿಖೆಯ ಮೂಲಕ ತಿಳಿಯಬೇಕಿದೆ ಎಂದು ಹೇಳಿದರು.
ಅಮೃತಸರದಲ್ಲಿ ಭಾನುವಾರ ಈ ವಿಚಾರವಾಗಿ ಮಾತನಾಡಿದ ಅವರು ಉಪಕಮಿಷನರ್, ಪೊಲೀಸ್ ಕಮಿಷನರ್ ಹಾಗೂ ಎಸ್ಎಸ್ಪಿ ಸೇರಿದಂತೆ ಐಜಿಪಿ ಜೊತೆಯಲ್ಲಿ ಅಮೃತಸರದ ಗ್ರಾಮಾಂತರ ಹಾಗೂ ಭದ್ರತಾ ಸಿಬ್ಬಂದಿಯ ಜೊತೆ ಈ ವಿಚಾರವಾಗಿ ಸಭೆ ನಡೆಸಿದ್ದೇನೆ. ಜೊತೆಯಲ್ಲಿ ಶ್ರೀ ಗುರುದ್ವಾರ ಪ್ರಬಂಧಕ್ ಸಮಿತಿಯ ಬಳಿಯೂ ಮಾತನಾಡಿದ್ದೇನೆ. ಈ ಪ್ರಕರಣದ ಸಂಬಂಧ ತನಿಖೆಗೆ ಎಸ್ಐಟಿ ರಚನೆಯಾಗಿದೆ. ವಿಶೇಷ ತನಿಖಾ ತಂಡ ಸಿದ್ಧಪಡಿಸಿದ ತನಿಖೆಯ ವರದಿಯನ್ನು ಎರಡು ದಿನಗಳ ಒಳಗಾಗಿ ಸಲ್ಲಿಸುವಂತೆ ಪೊಲೀಸ್ ಉಪಕಮಿಷನರ್ ಪರ್ಮಿಂದರ್ ಸಿಂಗ್ ಭಂಡಾಲ್ಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಈ ವಿಚಾರವಾಗಿ ಮಾಧ್ಯಮಗಳ ಜೊತೆಯೂ ಮಾತನಾಡಿದ ಸುಖಜೀಂಧರ್ ಸಿಂಗ್ ರಾಂಧವಾ, ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಮೃತ ಯುವಕ ಬೆಳಗ್ಗೆ 11:30 ಸುಮಾರಿಗೆ ಗುರುದ್ವಾರ ಪ್ರವೇಶಿಸಿದ್ದಾನೆ. ಹಾಗೂ ಅಕಲ್ ತಖ್ತ್ನಲ್ಲಿ ಕೆಲ ಕಾಲ ಇದ್ದನು. ಈತನ ಅಖಲ್ ತಖ್ತ್ ಎದುರು ಕೆಲ ಕಾಲ ಮಲಗಿದ್ದ ಎಂದು ಹೇಳಿದರು.
ಇದನ್ನು ಓದಿ: Omicron Udupi : ಉಡುಪಿಗೂ ಕಾಲಿಟ್ಟ ಒಮಿಕ್ರಾನ್ ಸೋಂಕು : ಮತ್ತೆ 5 ಹೊಸ ಪ್ರಕರಣ ಪತ್ತೆ
ಇದನ್ನೂ ಓದಿ : Shocking Video :ಮೊಬೈಲ್ ಆಸೆಗಾಗಿ ಮಹಿಳೆ ಮೇಲೆ ದೌರ್ಜನ್ಯ..! ನಡುರಸ್ತೆಯಲ್ಲಿ ಮಹಿಳೆಯನ್ನು ಎಳೆದಾಡಿದ ಪಾಪಿಗಳು..!
ಇದನ್ನೂ ಓದಿ : Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ
ಇದನ್ನೂ ಓದಿ : SSC CGL exam : ಉದ್ಯೋಗಾಕಾಂಕ್ಷಿಗಳ ಗಮನಕ್ಕೆ : ಎಸ್ಎಸ್ಸಿ ಸಿಜಿಎಲ್ ಪರೀಕ್ಷೆಗೆ ದಿನಾಂಕ ನಿಗದಿ
Punjab: State govt forms SIT to investigate alleged sacrilege at Golden Temple