Omicron Udupi : ಉಡುಪಿಗೂ ಕಾಲಿಟ್ಟ ಒಮಿಕ್ರಾನ್‌ ಸೋಂಕು : ಮತ್ತೆ 5 ಹೊಸ ಪ್ರಕರಣ ಪತ್ತೆ

ಉಡುಪಿ : ಕೊರೊನಾ ರೂಪಾಂತರಿ ಓಮಿಕ್ರಾನ್‌ ಸೋಂಕು ಇದೀಗ ಉಡುಪಿಗೂ ಕಾಲಿರಿಸಿದೆ. ಉಡುಪಿ ಜಿಲ್ಲೆಯಲ್ಲಿ (Omicron Udupi) ಇಬ್ಬರಿಗೆ ಸೋಂಕು ದೃಢಪಟ್ಟಿದ್ರೆ, ಮಂಗಳೂರು, ಭದ್ರಾವತಿ ಹಾಗೂ ಧಾರವಾಡದಲ್ಲಿ ತಲಾ ಒಬ್ಬೊಬ್ಬರಿಗೆ ಓಮಿಕ್ರಾನ್‌ ( Omicron Variant Cases ) ಇರುವುದನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಖಚಿತ ಪಡಿಸಿದ್ದಾರೆ.

ಮಂಗಳೂರಲ್ಲಿ ಓಮಿಕ್ರಾನ್‌ ಸ್ಪೋಟವಾದ ಬೆನ್ನಲ್ಲೇ ಇದೀಗ ಉಡುಪಿಯಲ್ಲಿಯೂ ಓಮಿಕ್ರಾನ್‌ ಪತ್ತೆಯಾಗಿದೆ. ೮೨ ವರ್ಷದ ವೃದ್ದ ಹಾಗೂ ೭೩ ವರ್ಷ ವೃದ್ದೆಗೆ ಓಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ೨೦ ವರ್ಷದ ಯುವತಿ, ಧಾರವಾಡದ ೫೪ ವರ್ಷ ಪುರುಷ, ಹಾಗೂ ಮಂಗಳೂರಿನ ೧೯ ವರ್ಷ ಯುವತಿಗೆ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲೀಗ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಎರಡು ಶಿಕ್ಷಣ ಸಂಸ್ಥೆಗಳಲ್ಲಿನ ಒಟ್ಟು ೫ ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ಸೋಂಕು ದೃಢಪಟ್ಟಿತ್ತು. ಇದೀಗ ಉಡುಪಿ ಜಿಲ್ಲೆಗೂ ಸೋಂಕು ವ್ಯಾಪಿಸಿರೋದು ಆತಂಕವನ್ನು ಮೂಡಿಸಿದೆ. ರಾಜ್ಯದಲ್ಲಿ ದಿನೇ ದಿನೇ ಓಮಿಕ್ರಾನ್‌ ಪ್ರಕರಣ ಹೆಚ್ಚುತ್ತಿದೆ. ಮಂಗಳೂರಲ್ಲಿ ಮತ್ತೋರ್ವ ಯುವತಿಯ ಓಮಿಕ್ರಾನ್‌ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ.

ರಾಜ್ಯದಲ್ಲಿ ಓಮಿಕ್ರಾನ್‌ ಸೋಂಕಿಗೆ ತುತ್ತಾಗಿರುವ ಹಲವರಿಗೆ ಯಾವುದೇ ವಿದೇಶಿ ಪ್ರಯಾಣದ ಸಂಪರ್ಕವಿಲ್ಲ. ಹೀಗಾಗಿ ಓಮಿಕ್ರಾನ್‌ ಸಮುದಾಯಕ್ಕೆ ಹರಡಿದ್ಯಾ ಅನ್ನೋ ಭೀತಿ ಶುರುವಾಗಿದೆ. ಇನ್ನೊಂದೆಡೆಯಲ್ಲಿ ಕೇಂದ್ರ ಸರಕಾರ ಓಮಿಕ್ರಾನ್‌ ವೇಗವಾಗಿ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಜ್ಯಗಳು ಮುನ್ನೆಚ್ಚರಿಕೆಯನ್ನು ವಹಿಸುವಂತೆ ಸೂಚನೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮವನ್ನು ಜಾರಿ ಮಾಡುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡದಲ್ಲಿ ಓಮಿಕ್ರಾನ್‌ ಸ್ಪೋಟ : ಒಂದೇ ದಿನ 5 ಕಾಲೇಜು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ದೃಢ

ಮಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರ ಹೊಸ ತಳಿ ಓಮಿಕ್ರಾನ್‌ ಅಟ್ಟಹಾಸ ಮುಂದುವರಿದಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಓಮಿಕ್ರಾನ್‌ ಸ್ಪೋಟ ಸಂಭವಿಸಿದ್ದು, ಎರಡು ಕಾಲೇಜುಗಳ ಬರೋಬ್ಬರಿ ಐದು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ಸೋಂಕು ದೃಢಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯ 2 ಕಾಲೇಜುಗಳಲ್ಲಿನ 5 ವಿದ್ಯಾರ್ಥಿಗಳಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಒಂದು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಹಾಗೂ ಮತ್ತೊಂದು ಕಾಲೇಜಿನ ಓರ್ವ ವಿದ್ಯಾರ್ಥಿಗೆ ಓಮಿಕ್ರಾನ್‌ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ವೈರಸ್‌ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಾಲೇಜುಗಳ ಪೈಕಿ ಒಟ್ಟು 23 ವಿದ್ಯಾರ್ಥಿಗಳ ಮಾದರಿಯನ್ನು ಓಮಿಕ್ರಾನ್‌ ಟೆಸ್ಟ್‌ಗೆ ಕಳುಹಿಸಲಾಗಿತ್ತು. ಈ ಪೈಕಿ ಬಂಟ್ವಾಳದ ಕುರ್ನಾಡು ನವೋದಯ ವಸತಿ ಶಾಲೆಯ 14 ವಿದ್ಯಾರ್ಥಿಗಳ ಪೈಕಿ ನಾಲ್ಕು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ದೃಢಪಟ್ಟಿದ್ರೆ, ಇನ್ನು ಮಂಗಳೂರಿನ ಶ್ರೀನಿವಾಸ ನರ್ಸಿಂಗ್‌ ಕಾಲೇಜಿನ 19 ವಿದ್ಯಾರ್ಥಿಗಳ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್‌ಗೆ ಕಳುಹಿಸಲಾಗಿದ್ದು, ಈ ಪೈಕಿ ಕೇರಳ ಮೂಲದ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ. ವಸತಿ ಶಾಲೆಯ ವಿದ್ಯಾರ್ಥಿಗಳಿಗೆ 18 ವರ್ಷ ತುಂಬದ ಹಿನ್ನೆಲೆಯಲ್ಲಿ ಲಸಿಕೆಯನ್ನು ಹಾಕಿಸಿರಲಿಲ್ಲ. ಎಲ್ಲಾ ಓಮಿಕ್ರಾನ್‌ ಸೋಂಕಿತರರು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ. ಅಲ್ಲದೇ ಆರೋಗ್ಯ ಇಲಾಖೆ ನಿಗಾ ಇರಿಸಿದೆ.

ಇದನ್ನೂ ಓದಿ : 15 ದಿನ 100 ಕಂಟೋನ್ಮೆಂಟ್ ಝೋನ್ : ಸದ್ದಿಲ್ಲದೇ ಹೆಚ್ಚುತ್ತಿದೆ ಕೊರೋನಾ

ಇದನ್ನೂ ಓದಿ : ‘ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ’ : ಕೋವಿಡ್​ ಸೂಪರ್​ಮಾಡೆಲ್​ ಸಮಿತಿ

ಇದನ್ನೂ ಓದಿ : ಭಾರತದಲ್ಲಿ ನಿತ್ಯವೂ 14 ಲಕ್ಷ ಓಮಿಕ್ರಾನ್ ಪ್ರಕರಣ : ಎಚ್ಚರಿಕೆ ಕೊಟ್ಟ ಕೇಂದ್ರ ಸರಕಾರ

(two Omicron Variant Cases Found in Udupi, five cases in Karnataka)

Comments are closed.