ಪುರಿ : ಶಾಲೆ ವತಿಯಿಂದ ಹಮ್ಮಿಕೊಂಡ ಪ್ರವಾಸದ ಸಲುವಾಗಿ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ (Puri Jagannath Temple) ಹೋದ ವಿದ್ಯಾರ್ಥಿಗಳು ಕಾಲ್ತುಳಿತದಂತಹ ಪರಿಸ್ಥಿತಿಯಿಂದ ಕನಿಷ್ಠ ಆರು ವಿದ್ಯಾರ್ಥಿನಿಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಬಾಲಕಿಯರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಮಯೂರ್‌ಭಂಜ್ ಜಿಲ್ಲೆಯ ಹೃದಾನಂದ ಹೈಸ್ಕೂಲ್‌ನ 70 ಬಾಲಕ ಮತ್ತು ಬಾಲಕಿಯರ ಗುಂಪುನ್ನು ಒಳಗೊಂಡಿರುವ ಮಕ್ಕಳು ಕ್ರಿಸ್‌ಮಸ್ ರಜೆಯ ನಿಮಿತ್ತ ಪ್ರವಾಸಕ್ಕೆಂದು ಸೋಮವಾರ ಪುರಿಗೆ ಪುರಿಯ ಜಗನ್ನಾಥ ದೇವಾಲಯಕ್ಕೆ ಬಂದಿದ್ದರು. ದಿನವಿಡೀ ಬೀಚ್‌ನಲ್ಲಿ ಸುತ್ತಾಡಿದ ವಿದ್ಯಾರ್ಥಿಗಳು ಗುಂಪು ಸಂಜೆ ಮನೆಗೆ ಹಿಂದಿರುಗುವ ಮೊದಲು 12 ನೇ ಶತಮಾನದ ದೇಗುಲಕ್ಕೆ ದೇವರ ದರ್ಶನಕ್ಕೆಂದು ಭೇಟಿ ನೀಡಿದರು.
ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ 22 ಮೆಟ್ಟಿಲುಗಳನ್ನು (‘ಬೈಸಿ ಪಹಾಚಾ’) ಹತ್ತುತ್ತಿದ್ದಾಗ, ಹುಡುಗಿಯರು ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಸಿಲುಕಿ ಮೂರ್ಛೆ ಹೋಗಿದ್ದು, ಕೂಡಲೇ ಗಾಯಗೊಂಡ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿನಿಯರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿನಿಯರು ಚೇತರಿಸಿಕೊಂಡಿದ್ದಾರೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಗಲಿನಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು.
ಇದನ್ನೂ ಓದಿ : Korba crime news: ರಾತ್ರಿ ಊಟ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ
ಇದನ್ನೂ ಓದಿ : ಫಾರ್ಮಾ ಲ್ಯಾಬ್ ಕಂಪನಿಯಲ್ಲಿ ಬೆಂಕಿ ಅವಘಡ: ನಾಲ್ವರು ಸಾವು
ಇದನ್ನೂ ಓದಿ : Dehli Fire incident: ಬಹುಮಹಡಿ ಪಾರ್ಕಿಂಗ್ ನಲ್ಲಿ ಅಗ್ನಿ ಅವಘಡ: 21 ಕಾರುಗಳು ಬೆಂಕಿಗೆ ಆಹುತಿ
ಅದ್ಭುತ ಹಿನ್ನಲೆಯನ್ನು ಪಡೆದುಕೊಂಡಿರುವ ಪುರಿ ಜಗನ್ನಾಥ ದೇವಾಲಗಳು ವಿಭಿನ್ನ ವಾಸ್ತು ಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಪ್ರವಾಸಿಗರನ್ನು ತನ್ನೆಡೆಗೆ ಸುಲಭವಾಗಿ ಆಕರ್ಷಿಸುವ ಶಕ್ತಿಯನ್ನು ಪಡೆದುಕೊಂಡಿದೆ. ವಿಶಿಷ್ಟವಾದ ಹಿನ್ನಲೆ ಹಾಗೂ ದೈವ ಶಕ್ತಿಯನ್ನು ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಅಷ್ಟೇ ಅಲ್ಲದೇ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ.
Puri Jagannath temple stampede: 6 female students injured