Mock drill: ಕೊರೋನಾ ಹಿನ್ನೆಲೆ ನಡೆಸಲಾಗುತ್ತಿರುವ ಮಾಕ್ ಡ್ರಿಲ್ ಎಂದರೇನು..? ಇದರ ಕಾರ್ಯಾಚರಣೆ ಹೇಗೆ ನಡೆಯುತ್ತೆ ಗೊತ್ತಾ..!

ಬೆಂಗಳೂರು: Mock drill: ಚೀನಾದಲ್ಲಿ ಪ್ರತಿನಿತ್ಯ ದಾಖಲೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿನಿತ್ಯ 10 ಲಕ್ಷಕ್ಕೂ ಅಧಿಕ ಕೋವಿಡ್ ಕೇಸ್ ಗಳು ಚೀನಾದಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆ ಭಾರತದಲ್ಲಿ ಹೈಅಲರ್ಟ್ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ನಿನ್ನೆ ಚೀನಾದಿಂದ ಬಂದಿದ್ದ ಇಬ್ಬರಲ್ಲಿ ಕೋವಿಡ್ ಸೋಂಕು ಕೇಸ್ ಗಳು ಬೆಂಗಳೂರು ಮತ್ತು ಆಗ್ರಾದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ಇಂದಿನಿಂದ ಬೆಂಗಳೂರಿನ ಬಹುತೇಕ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಕಾರ್ಯಾಚರಣೆ ಕೈಗೊಂಡಿದೆ.

ಹೊಸ ವರ್ಷಾಚರಣೆ, ಹಾಗೂ ಸಾಲು-ಸಾಲು ಹಬ್ಬಗಳ ಹಿನ್ನೆಲೆ ಬಿಗಿ ನಿಯಮಾವಳಿಗಳನ್ನು ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಇಂದಿನಿಂದ ಬೆಂಗಳೂರು ಮಾತ್ರವಲ್ಲದೇ ಎಲ್ಲಾ ರಾಜ್ಯಗಳಲ್ಲೂ ಮಾಕ್ ಡ್ರಿಲ್ ಅಥವಾ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರ ಆದೇಶದ ಮೇರೆಗೆ ಎಲ್ಲೆಡೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ.

ಇದನ್ನೂ ಓದಿ: Bangalore Corona: ಬೆಂಗಳೂರಿನಲ್ಲಿ ವಿದೇಶಿಗರಿಂದ ಹೆಚ್ಚಿದ ಕೊರೋನಾತಂಕ; ದೇವಾಲಯಗಳಿಗೆ ಟಫ್ ರೂಲ್ಸ್; ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್..!

ಏನಿದು ಮಾಕ್ ಡ್ರಿಲ್..?
ನಿಗದಿಪಡಿಸಲಾದ ಆಸ್ಪತ್ರೆಗೆ ಅಣಕು ರೋಗಿಯನ್ನು ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಆಕ್ಸಿಜನ್, ಐಸಿಯುವರೆಗೂ ಎಲ್ಲಾ ಪ್ರಕ್ರಿಯೆಗಳನ್ನು ನೆರವೇರಿಸುವ ಮೂಲಕ ಮಾಕ್ ಡ್ರಿಲ್ ಕಾರ್ಯಾಚರಣೆ ನಡೆಯುತ್ತದೆ.

ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಸೌಲಭ್ಯಗಳ ಪೂರೈಕೆ, ಪ್ರತ್ಯೇಕ ಬೆಡ್ ಗಳ ಲಭ್ಯತೆ, ಆಮ್ಲಜನಕ ಸೌಲಭ್ಯಗಳುಳ್ಳ ಹಾಸಿಗೆಗಳು ಮತ್ತು ಐಸಿಯು ಹಾಸಿಗೆಗಳು, ವೆಂಟಿಲೇಟರ್ ಬೆಂಬಲಿತ ಬೆಡ್ ಗಳು, ವೈದ್ಯರು, ನರ್ಸ್‍ಗಳು, ಅರೆವೈದ್ಯರು, ಆಯುಷ್ ವೈದ್ಯರ ಲಭ್ಯತೆ ಮೊದಲಾದ ಅಂಶಗಳನ್ನಾಧರಿಸಿ ಈ ಕಾರ್ಯಾಚರಣೆ ನಡೆಯುತ್ತೆ.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾಕ್ ಡ್ರಿಲ್ ನಲ್ಲಿ ಪಾಲ್ಗೊಳ್ಳುತ್ತಾರೆ. ಕೋವಿಡ್-19 ನಿರ್ವಹಣೆಯಲ್ಲಿ ತರಬೇತಿ ಪಡೆದ ಆರೋಗ್ಯ ವೃತ್ತಿಪರರು, ವೆಂಟಿಲೇಟರ್ ಮ್ಯಾನೇಜ್ ಮೆಂಟ್ ಪ್ರೋಟೋಕಾಲ್ ನಲ್ಲಿ ತರಬೇತಿ ಪಡೆದ ಆರೋಗ್ಯ ವೃತ್ತಿಪರರು, ಆಮ್ಲಜನಕ ತಯಾರಿ ಸ್ಥಾವರಗಳ ಕಾರ್ಯಾಚರಣೆಯಲ್ಲಿ ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತರು ಇತ್ಯಾದಿ ಸುಧಾರಿತ ಮತ್ತು ಮೂಲಭೂತ ಮಾನವ ಸಂಪನ್ಮೂಲ ಸಾಮಥ್ರ್ಯದ ಮೇಲೂ ಈ ಕಾರ್ಯಾಚರಣೆ ಕೇಂದ್ರಿಕರಿಸುತ್ತದೆ. ಅಲ್ಲದೇ ಆಂಬ್ಯುಲೆನ್ಸ್ ಗಳು, ಪರೀಕ್ಷಾ ಉಪಕರಣಗಳು, ಅಗತ್ಯ ಔಷಧಿಗಳನ್ನೂ ಪರಿಶೀಲಿಸುತ್ತದೆ.

ಇದನ್ನೂ ಓದಿ: Corona positive in udupi: ಶುರುವಾಯ್ತು ಕೊರೊನಾ ಆತಂಕ: ವಿದೇಶದಿಂದ ಬಂದಿದ್ದ ಉಡುಪಿಯ ವ್ಯಕ್ತಿಗೆ ಕೊರೊನಾ ಸೋಂಕು ದೃಢ

ಸಾಂಕ್ರಾಮಿಕ ರೋಗಗಳನ್ನು ಎದುರಿಸುವಲ್ಲಿ ನಮ್ಮ ಹಿಂದಿನ ಅನುಭವದ ಆಧಾರದಲ್ಲಿ ಕೆಲ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಪೈಕಿ ಮಾಕ್ ಡ್ರಿಲ್ ಕೂಡಾ ಒಂದು. ಇದು ನಮ್ಮ ಸಿದ್ಧತೆಗಳನ್ನು ಪರಿಶೀಲಿಸಲು ನೆರವಾಗುತ್ತದೆ. ಅಲ್ಲದೇ ನಮ್ಮ ಕೊರತೆಗಳನ್ನು ಕಂಡುಕೊಳ್ಳಲು ಹಾಗೂ ಅವುಗಳನ್ನು ಸರಿಪಡಿಸಲು ಸಹಕರಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.

Mock drill: What is the mock drill which is conducted by Central Government and Do you know how it works

Comments are closed.