David Warner double century: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಾರ್ನರ್ ದ್ವಿಶತಕ, ಸಚಿನ್ ದಾಖಲೆ ಸರಿಗಟ್ಟಿದ ಕ್ರಿಕೆಟ್ ಬಾಕ್ಸರ್

ಮೆಲ್ಬೋರ್ನ್: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್ (David Warner) ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ (David Warner double century) ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ (Melbourne cricket ground) ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ (Boxing day test macth) ಡೇವಿಡ್ ವಾರ್ನರ್ ಪಾಲಿಗೆ 100ನೇ ಟೆಸ್ಟ್ ಪಂದ್ಯವೂ ಹೌದು. ತಮ್ಮ ಶತಕದ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ದ್ವಿಶತಕದೊಂದಿಗೆ ಅಬ್ಬರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್’ನಲ್ಲಿ ವಾರ್ನರ್ ಬಾರಿಸಿದ 3ನೇ ಡಬಲ್ ಸೆಂಚುರಿ.

100ನೇ ಟೆಸ್ಟ್ ಪಂದ್ಯವನ್ನು ದ್ವಿಶತಕದೊಂದಿಗೆ ಸ್ಮರಣೀಯವಾಗಿಸಿಕೊಂಡಿರುವ ಡೇವಿಡ್ ವಾರ್ನರ್ ತಮ್ಮ 100ನೇ ಏಕದಿನ ಪಂದ್ಯದಲ್ಲೂ ಶತಕ ಬಾರಿಸಿದ್ದರು. 2017ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ವಾರ್ನರ್ ಅಮೋಘ ಶತಕ ಬಾರಿಸಿದ್ದರು. ಇದೀಗ 100ನೇ ಟೆಸ್ಟ್ ಪಂದ್ಯದಲ್ಲೂ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದಾರೆ. 100ನೇ ಏಕದಿನ ಹಾಗೂ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದವರ ಪೈಕಿ ವೆಸ್ಟ್ ಇಂಡೀಸ್’ನ ದಿಗ್ಗಜ ಆರಂಭಿಕ ಬ್ಯಾಟ್ಸ್’ಮನ್ ಗಾರ್ಡನ್ ಗ್ರೀನಿಡ್ಜ್ ಮೊದಲಿಗರು. ವಿಂಡೀಸ್ ದೈತ್ಯನ ನಂತರ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶತಕ (ದ್ವಿಶತಕ) ಬಾರಿಸುವುದರೊಂದಿಗೆ ಡೇವಿಡ್ ವಾರ್ನರ್, ಆರಂಭಿಕ ಆಟಗಾರನಾಗಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್’ನಲ್ಲಿ ಆರಂಭಿಕನಾಗಿ 45 ಶತಕಗಳನ್ನು ಬಾರಿಸಿದ್ರೆ, ಡೇವಿಡ್ ವಾರ್ನರ್ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಓಪನರ್ ಆಗಿ 45 ಸೆಂಚುರಿಗಳನ್ನು ಸಿಡಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಅತೀ ಹೆಚ್ಚು ಶತಕ:
ಸಚಿನ್ ತೆಂಡೂಲ್ಕರ್: 45 ಶತಕ (ಏಕದಿನ ಕ್ರಿಕೆಟ್)
ಡೇವಿಡ್ ವಾರ್ನರ್: 45 ಶತಕ (ಟೆಸ್ಟ್+ಏಕದಿನ+ಟಿ20)

ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ವಾರ್ನರ್ 3 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರವನ್ನು ನೀಗಿಸಿಕೊಂಡರು. 2020ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ ನಂತರ ವಾರ್ನರ್ ಅವರ ಬ್ಯಾಟ್’ನಿಂದ ಸೆಂಚುರಿ ಸಿಡಿದಿರಲಿಲ್ಲ. ತಮ್ಮ 100ನೇ ಟೆಸ್ಟ್ ಪಂದ್ಯದಲ್ಲೇ ಶತಕದ ಬರವನ್ನು ನೀಗಿಸಿಕೊಳ್ಳುವಲ್ಲಿ ವಾರ್ನರ್ ಯಶಸ್ವಿಯಾಗಿದ್ದಾರೆ. ಶತಕದ ಜೊತೆ ವಾರ್ನರ್ ಟೆಸ್ಟ್ ವೃತ್ತಿಜೀವನದಲ್ಲಿ 8000 ರನ್’ಗಳ ಗಡಿ ದಾಟಿದ್ದಾರೆ. ತಮ್ಮ ದ್ವಿಶತಕದ ಇನ್ನಿಂಗ್ಸ್ ವೇಳೆ ಬಿಸಿಲಿನ ಝಳಕ್ಕೆ ತೀವ್ರ ಬಳಲಿದ ಡೇವಿಡ್ ವಾರ್ನರ್, ಡಬಲ್ ಸೆಂಚುರಿ ಪೂರ್ತಿಯಾದ ಬೆನ್ನಲ್ಲೇ ಕ್ರೀಸ್ ತೊರೆದರು.

ಇದನ್ನೂ ಓದಿ : Avinash Singh: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಶ್ಮೀರದ ಆಟೋ ಚಾಲಕನ ಮಗ

ಇದನ್ನೂ ಓದಿ : David Warner : ಏಕದಿನ, ಟೆಸ್ಟ್ 100ರಲ್ಲಿ 100 : ಅಪರೂಪದ ದಾಖಲೆ ಬರೆದ ಆಸೀಸ್ ಓಪನರ್ ವಾರ್ನರ್

ಇದನ್ನೂ ಓದಿ : Ranji Trophy: ನಾಳೆ ಕರ್ನಾಟಕಕ್ಕೆ ಗೋವಾ ಎದುರಾಳಿ, ಸಚಿನ್ ಪುತ್ರ ಅರ್ಜುನ್ ಮೇಲೆ ಎಲ್ಲರ ಕಣ್ಣು

David Warner double century: Warner double century in Boxing Day Test, Sachin is the cricket boxer who equaled the record

Comments are closed.