ಪಿವಿಸಿ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ

ನವದೆಹಲಿ : (PVC market caught fire) ಪ್ಲಾಸ್ಟಿಕ್‌ ಗೋಡೌನ್‌ನಲ್ಲಿ ಶನಿವಾರ ಬೆಳಗಿನ ಜಾವ ಭಾರಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ದೆಹಲಿಯ ಟಿಕ್ರಿ ಕಲಾನ್‌ ಪ್ರದೇಶದ ಪಿವಿಸಿ ಮಾರುಕಟ್ಟೆಯಲ್ಲಿ ನಡೆದಿದೆ. ಅಗ್ನಿಶಾಮಕ ಟೆಂಡರ್‌ ಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ಪಿವಿಸಿ ಮಾರುಕಟ್ಟೆಯಲ್ಲಿರುವ ಪ್ಲಾಸ್ಟಿಕ್‌ ಗೋಡೌನ್‌ ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಮಾಹಿತಿ ತಿಳಿದ ತಕ್ಷಣ 26 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ ಇದುವರೆಗೂ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರತರಾಗಿದ್ದು, ಬೆಂಕಿ ನಿಯಂತ್ರಣದಲ್ಲಿದೆ ಎಂಬ ಮಾಹಿತಿ ಲಭಿಸಿದೆ.

“ಮಾಹಿತಿ ಬಂದ ತಕ್ಷಣ 26 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಬಂದವು. ಗಾಳಿಯಿಂದಾಗಿ ಬೆಂಕಿ ವೇಗವಾಗಿ ಹರಡಿತು. ಈ ಬೆಂಕಿಯನ್ನು ಮಧ್ಯಮ ವರ್ಗವೆಂದು ಘೋಷಿಸಲಾಗಿದೆ. ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ” ಎಂದು ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಎಸ್‌ಕೆ ದುವಾ ಎಎನ್‌ಐಗೆ ತಿಳಿಸಿದ್ದಾರೆ.

ಬೆಂಕಿ ಅವಘಡದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬೆಂಕಿಯ ವೀಡಿಯೊವು ಕಿಲೋಮೀಟರ್‌ಗಳಿಂದ ಗೋಚರಿಸುವ ಪ್ರದೇಶವನ್ನು ಆವರಿಸಿರುವ ದೊಡ್ಡ ಹೊಗೆಯನ್ನು ತೋರಿಸುತ್ತದೆ. ಆದರೆ ಬೆಂಕಿ ಹೊತ್ತಿಕೊಂಡಿರುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಗಾಳಿ ಹೆಚ್ಚಾದ ಕಾರಣದಿಂದ ಬೆಂಕಿ ವೇಗದಿಂದ ಹರಡುತ್ತಿದೆ.

ಇದನ್ನೂ ಓದಿ : ಶಿಕ್ಷಕರ ನೇಮಕಾತಿ ಹಗರಣ: 2 ನಕಲಿ ವೆಬ್‌ಸೈಟ್‌ಗಳ ಬಗ್ಗೆ ಗೂಗಲ್‌ಗೆ ಪತ್ರ ಬರೆದ ಸಿಬಿಐ

ಇದನ್ನೂ ಓದಿ : Belthangady crime : ಬೆಳ್ತಂಗಡಿ : ಅಕ್ಕಪಕ್ಕದ ‌ಮನೆಯ ಇಬ್ಬರು ಯುವತಿಯರು ಅನುಮಾ‌ನಾಸ್ಪದವಾಗಿ ಸಾವು

ಇದನ್ನೂ ಓದಿ : ಕುಮಟಾ : ಮೀನು ಸಾಗಾಟದ ವಾಹನದಲ್ಲಿ ಗೋಮಾಂಸ

PVC market caught fire : Heavy fire accident in PVC market

Comments are closed.