woman kills 4-year-old girl : ಚಿಕ್ಕ ವಯಸ್ಸಲ್ಲಿ ಮಕ್ಕಳು ತಪ್ಪು ಮಾಡೋದು ಸರ್ವೇ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳಬೇಕಾದದ್ದು ಹಿರಿಯರ ಕರ್ತವ್ಯವಾಗಿರುತ್ತದೆ. ಕಳ್ಳತನದಂತಹ ಕೆಲಸಗಳನ್ನು ಮಾಡಿದಾಗ ಅವರಿಗೆ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಹೇಳಿದರೆ ತಿದ್ದುಕೊಳ್ತಾರೆ. ಆದರೆ ರಾಜಸ್ಥಾನದಲ್ಲೊಬ್ಬ ಮಹಿಳೆ ನಾಲ್ಕು ವರ್ಷದ ಬಾಲಕಿ ತನ್ನ ಕಾಲ್ಗೆಜ್ಜೆ ಕದ್ದಿದ್ದಾಳೆಂದು ತಿಳಿದ ಬಳಿಕ ಮಗುವಿನ ತಲೆಗೆ ಕಲ್ಲಿನಿಂದ ಹೊಡೆದು ಸಾಯಿಸಿದ ಶಾಕಿಂಗ್ ಘಟನೆಯೊಂದು ವರದಿಯಾಗಿದೆ.
ಮಧ್ಯಪ್ರದೇಶದ ಸುವಾಸ್ರಾ ಜಿಲ್ಲೆಯವಳಾಗಿದ್ದ ನಾಲ್ಕು ವರ್ಷದ ಬಾಲಕಿಯು ತನ್ನ ತಾಯಿಯ ಜೊತೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ತನ್ನ ತಾಯಿಯ ಜೊತೆಯಲ್ಲಿ ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿರುವ ಮೆಹರ್ಪುರ ಎಂಬ ಹಳ್ಳಿಯೊಂದರಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಿದ್ದಳು.
ಇದೇ ಮನೆಯ ನೆರೆಮನೆಯಲ್ಲಿ ವಾಸವಿದ್ದ 29 ವರ್ಷದ ತರುಣಾ ಎಂಬಾಕೆಯು ಮಗುವಿನ ಜೊತೆಯಲ್ಲಿ ಇದ್ದಳು. ಬಾಲಕಿಗೆ ಚಾಕಲೇಟ್ ಕೊಡಿಸಿದ್ದ ತರುಣಾ ಆಕೆಯೊಂದಿಗೆ ಬರುತ್ತಿದ್ದಾಗ ಮಗು ಕಾಲ್ಗೆಜ್ಜೆ ಕದ್ದಿದ್ದಕ್ಕೆ ಕೋಪಗೊಂಡು ಬಾಲಕಿಯ ತಲೆಗೆ ಕಲ್ಲಿನಿಂದ ಜಜ್ಜಿ ಬಳಿಕ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಯಾರಿಗೂ ಅನುಮಾನ ಬಾರದಂತೆ ಬಾಲಕಿಯನ್ನು ತನ್ನ ಮನೆಯ ಹಿಂಬಧಿಯಲ್ಲಿ ಗುಂಡಿ ತೋಡಿ ಹೂತು ಹಾಕಿ ಸುಮ್ಮನಾಗಿದ್ದಳು.
ಬಾಲಕಿ ಎಷ್ಟೊತ್ತಾದ್ದರೂ ಮನೆಗೆ ಬಾರದ್ದನ್ನು ಕಂಡು ಆತಂಕಕ್ಕೊಳಗಾದ ಪೊಲೀಸರು ಬಾಲಕಿ ನಾಪತ್ತೆ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಬಾಲಕಿ ಕೊನೆಯ ಬಾರಿಗೆ ತರುಣಾ ಜೊತೆಯಲ್ಲಿ ಇದ್ದಳು ಎಂಬ ವಿಚಾರ ತಿಳಿದಿದೆ. ಬಳಿಕ ತರುಣಾಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ವೇಳೆಯಲ್ಲಿ ತರುಣಾ ಕಾಲ್ಗೆಜ್ಜೆ ಕದ್ದಿದ್ದಕ್ಕೆ ಕೋಪಗೊಂಡು ಬಾಲಕಿಯನ್ನು ಕೊಂದಿದ್ದಾಗಿ ಹೇಳಿದ್ದಾಳೆ. ಈ ಸಂಬಂಧ ಭವಾನಿಮುಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಹೆಬ್ರಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗಳ ಮೃತದೇಹ ಪತ್ತೆ : ಕೊಲೆ ಶಂಕೆ
Rajasthan woman kills 4-year-old girl to steal her silver anklets, buries body in sand