Pineapple Jam : ಪೈನಾಪಲ್‌ ಜಾಮ್‌ ಸವಿದಿದ್ದೀರಾ? ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ!!

ಮನೆಯಲ್ಲಿಯೇ ತಯಾರಿಸಿದ ಜಾಮ್‌ (Pineapple Jam) ಗಳಲ್ಲಿ ರುಚಿಯ ಹೊರತು ಬೇರೆ ಯಾವ ಸಂರಕ್ಷಕಗಳು ಇರುವುದಿಲ್ಲ. ಅವುಗಳನ್ನು ಸವಿಯಲು ಚಿಂತಿಯಸವ ಅಗತ್ಯವೂ ಇಲ್ಲ. ಎಂದಾದರೂ ಒಂದು ದಿನ ಬೆಳಗ್ಗಿನ ಉಪಹಾರದಲ್ಲಿ ಜಾಮ್‌(Jam) ಸಾಕು ಎಂದೆನಿಸಿದರೆ ಅದಕ್ಕೆ ಈ ರುಚಿಯಾದ ಪರಿಮಳಯುಕ್ತ ಪೈನಾಪಲ್‌ ಜಾಮ್‌ ಬೆಸ್ಟ್‌. ಫ್ರೆಶ್‌ ಜಾಮ್‌, ಸುವಾಸನೆ ಮತ್ತು ಅದ್ಭುತ ಬಣ್ಣಗಳೊಂದಿಗೆ ನಿಮ್ಮ ಹೊಟ್ಟೆಯೊಳಗೆ ಸಾಗುತ್ತಲೇ ಇರುತ್ತದೆ. ಶೆಫ್‌ ಸಂಜೀವ್‌ ಕಪೂರ್‌ ಅವರು ರುಚಿಯಾದ ಪೈನಾಪಲ್‌ ಜಾಮ್‌ ತಯಾರಿಸುವ ವಿಧಾನವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ನೀವು ಈ ಜಾಮ್‌ ಅನ್ನು ಬ್ರೆಡ್‌ ಮೇಲೆ ಹಚ್ಚಿ ಸವಿಯಬಹುದು.

ಇದನ್ನೂ ಓದಿ : JACKFRUIT SEEDS HALWA : ಎಂದಾದ್ರೂ ತಿಂದಿದ್ರಾ ಹಲಸಿನ ಬೀಜದ ಹಲ್ವಾ

ಪೈನಾಪಲ್‌ ಜಾಮ್‌ (Pineapple Jam) ಮನೆಯಲ್ಲಿಯೇ ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು:

  • ಪೈನಾಪಲ್‌
  • ಸಕ್ಕರೆ
  • ಉಪ್ಪು ರುಚಿಗೆ ತಕ್ಕಷ್ಟು
  • ಲಿಂಬು ರಸ

ತಯಾರಿಸುವುದು ಹೇಗೆ?

  • ಮೊದಲು ಪೈನಾಪಲ್‌ ಅನ್ನು ಜಾಮ್‌ ಮಾಡುವ ಸಲುವಾಗಿ ತೆಗೆದುಕೊಳ್ಳಿ. ಚಿಕ್ಕದಾಗಿ ಕತ್ತರಿಸಿ. ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್‌ ತಯಾರಿಸಿ ಕೊಳ್ಳಿ.
  • ಒಂದು ಪಾನ್‌ ತೆಗೆದುಕೊಂಡು ಅದಕ್ಕೆ ಆ ಪೇಸ್ಟ್‌ ಸೇರಿಸಿ. ತಿರುವುತ್ತಾ ಇರಿ ಮತ್ತು ಚೆನ್ನಾಗಿ ಬೇಯಿಸಿ. ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ, ತಿರುವುತ್ತಾ ಇರಿ. ಮೇಲುಗಡೆ ಒಂದು ತೆಳುವಾದ ಪದರ ಕಾಣಿಸುತ್ತದೆ. ಆಗ ಅದನ್ನು ಜಾಗರೂಕರಾಗಿ ಚಮಚದ ಸಹಾಯದಿಂದ ಆ ಪದರವನ್ನು ತೆಗೆಯಬಹುದು ಇಲ್ಲವೇ ಹಾಗೆಯೇ ತಿರುವುತ್ತಿರಿ.
  • ಉಪ್ಪು ಮತ್ತು ಲಿಂಬು ರಸ ಸೇರಿಸಿ ಮತ್ತೆ ತಿರುವಿ. ಹಾಗೆ ಜಾಮ್‌ನ ತರಹ ಗಟ್ಟಿಯಾಗುವವರೆ ಹಾಗೇ ತಿರುವುತ್ತಿರಿ.

ಹಣ್ಣಿನಿಂದ ತಯಾರಿಸಿದ ಜಾಮ್‌ಗಳು ಆಯಾ ಕಾಲದ ಹಣ್ಣುಗಳನ್ನು ಸವಿಯಲು ನಮಗೆ ಅವಕಾಶ ಮಾಡಿಕೊಡುತ್ತದೆ. ಅದಲ್ಲದೆ ತಯಾರಿಸಿದ ಜಾಮ್‌ಗಳನ್ನು ನಾವು ಶೇಖರಿಸಿಯೂ ಇಟ್ಟುಕೊಳ್ಳಬಹುದು.

ಇದನ್ನೂ ಓದಿ : Papaya Benefits : ಪಪ್ಪಾಯಿ ಎಂಬ ಮಾಜಿಕ್ ಹಣ್ಣು! ಏನೆಲ್ಲಾ ಅದ್ಭುತ ಪ್ರಯೋಜನಗಳನ್ನು ಅಡಗಿಸಿಕೊಂಡಿದೆ ಎಂಬುದು ನಿಮಗೆ ಗೊತ್ತೇ?

(Pineapple Jam How to make Pineapple jam at Home?)

Comments are closed.