ಮಂಗಳವಾರ, ಜೂನ್ 17, 2025
HomeCrimeRajghat Car accident: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಗೆ ಕಾರು ಢಿಕ್ಕಿ: ಆರೋಪಿ ಅರೆಸ್ಟ್

Rajghat Car accident: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಗೆ ಕಾರು ಢಿಕ್ಕಿ: ಆರೋಪಿ ಅರೆಸ್ಟ್

- Advertisement -

ನವದೆಹಲಿ: (Rajghat Car accident) ನಿವೃತ್ತಿಯಾಗುವ ಕೆಲವೇ ದಿನಗಳ ಮೊದಲು ನಗರದ ಮಧ್ಯ ಭಾಗದಲ್ಲಿ ಕಾರು ಢಿಕ್ಕಿ ಹೊಡೆದು ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಕರ್ತವ್ಯದ ವೇಳೆಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಾಜ್‌ ಘಾಟ್‌ ಮತ್ತು ಶಾಂತಿವನ ಸಿಗ್ನಲ್‌ ಗಳ ನಡುವೆ ಅಪಘಾತ ಸಂಭವಿಸಿದೆ. ಲಾತೂರ್‌ ಸಿಂಗ್‌ ಎನ್ನುವವರೇ ಮೃತ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್.‌

ಕೇಂದ್ರ ಜಿಲ್ಲೆಯ ಚಾಂದಿನಿ ಮಹಲ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ ಲಾತೂರ್ ಸಿಂಗ್ ಅವರು ರಿಂಗ್ ರಸ್ತೆಯಲ್ಲಿ ರಾಜ್‌ಘಾಟ್ (Rajghat Car accident) ಮತ್ತು ಶಾಂತಿವನ ಸಿಗ್ನಲ್‌ಗಳ ನಡುವೆ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಘಟನೆ ನಡೆದಾಗ ಶ್ರೀ ಸಿಂಗ್ ಕರ್ತವ್ಯದಲ್ಲಿದ್ದರು.

ಶ್ರೀ ಸಿಂಗ್ ಅವರು ಜನವರಿ 31, 2023 ರಂದು ನಿವೃತ್ತಿಯಾಗಲಿದ್ದು, ನಿವೃತ್ತಿಗೂ ಮೊದಲು ಪ್ರಾಣತ್ಯಾಗ ಮಾಡಿದ್ದಾರೆ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪ್ರಕರಣದ ಸಂಬಂಧ ಹರ್ಯಾಣ ನೋಂದಣಿ ಸಂಖ್ಯೆಯ ಹ್ಯುಂಡೈ ಐ-10 ಕಾರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಅದರ ಚಾಲಕನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಆರೋಪಿ ಕಾರು ಚಾಲಕನನ್ನು ಸೋನಿಪತ್‌ ಜಿಲ್ಲೆಯ ನಿವಾಸಿ ಶೋಕೇಂದ್ರ ಎಂದು ಗುರುತಿಸಲಾಗಿದ್ದು, ಸದ್ಯ ಆರೋಪಿ ವಿರುದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 (ಅತಿ ವೇಗದ ಚಾಲನೆ) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ದರಿಯಾಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Twin brothers death: ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ರೀತಿಯಲ್ಲಿ ಅವಳಿ ಸಹೋದರರ ಸಾವು

ಇದನ್ನೂ ಓದಿ : ಸ್ಯಾಂಟ್ರೋ ರವಿ ಬಂಧನ : ತಲೆಮರೆಸಿಕೊಂಡಿದ್ದ ಆರೋಪಿ ಗುಜರಾತ್‌ನಲ್ಲಿ ಸೆರೆ

ಇದನ್ನೂ ಓದಿ : Opposition to conversion: ಮತಾಂತರಕ್ಕೆ ವಿರೋಧಿಸಿದಕ್ಕೆ ಹೆಂಡತಿಗೆ ಕಿರುಕುಳ: ಸಿಗರೇಟ್‌ ನಿಂದ ಸುಟ್ಟು, ಮಾಂಸ ತಿನ್ನಲು ಒತ್ತಾಯ

Rajghat Car accident: Police sub-inspector on duty hit by car: Accused arrested

RELATED ARTICLES

Most Popular