Twin brothers death: ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ರೀತಿಯಲ್ಲಿ ಅವಳಿ ಸಹೋದರರ ಸಾವು

ರಾಜಸ್ಥಾನ: (Twin brothers death) ಒಂದೇ ದಿನ ಒಂದೇ ರೀತಿಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ 26 ವರ್ಷದ ಅವಳಿ ಸಹೋದರರು ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಒಬ್ಬ ಮನೆಯ ಟೆರೆಸ್‌ ನಿಂದ ಬಿದ್ದು ಸಾವನ್ನಪ್ಪಿದರೆ ಇನ್ನೋರ್ವ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಸೋಹನ್‌ ಸಿಂಗ್‌ ಹಾಗೂ ಸುಮೇರ್‌ ಸಿಂಗ್‌ ಸಾವನ್ನಪ್ಪಿರುವ ಅವಳಿ ಸಹೋದರರು.

ರಾಜಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಅವಳಿ ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಬ್ಬರು ಸಹೋದರರಲ್ಲಿ ಒಬ್ಬರು ಬಾರ್ಮರ್‌ ನಲ್ಲಿ ವಾಸಿಸುತ್ತಿದ್ದರೆ, ಇನ್ನೊಬ್ಬರು ಸೂರತ್‌ ನಲ್ಲಿ ವಾಸಿಸುತ್ತಿದ್ದರು. ಇನ್ನೂ ಸುಮೇರ್‌ ಗುಜರಾತ್‌ ನ ಜವಳಿ ನಗರದಲ್ಲಿ ಕೆಲಸ ಮಾಡಿಕೊಂಡಿದ್ದು ಸೋಹನ್‌ ಜೈಪುರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳುತ್ತಿದ್ದನು ಎನ್ನಲಾಗಿದೆ.

ಫೋನ್‌ ನಲ್ಲಿ ಮಾತನಾಡುತ್ತಿರುವಾಗ ಸುಮೇರ್‌ ಆಕಸ್ಮಿಕವಾಗಿ ಮನೆಯ ಟೆರೆಸ್‌ ನಿಂದ ಬಿದ್ದು ಸಾವನ್ನಪ್ಪಿದ್ದು, ಕುಟುಂಬದವರು ಸೋಹನ್‌ ಗೆ ಕರೆ ಮಾಡಿ ತಿಳಿಸಿದ್ದಾರೆ. ತನ್ನ ಸಹೋದರನ ಸಾವಿನ ವಿಷಯ ತಿಳಿದ ಸೋಹನ್‌ ಮನೆಗೆ ಬಂದಿದ್ದಾನೆ. ಕಾರ್ಯಕ್ಕೆ ನೀರನ್ನು ತರಲು ಹೋದಾಗ ನೀರಿನ ಟ್ಯಾಂಕ್‌ ಗೆ ಬಿದ್ದು ಸೋಹನ್‌ ಸಾವನ್ನಪ್ಪಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ಸಾಗಿಸುವ ಮೊದಲೇ ಸೋಹನ್‌ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸದ್ಯ ಇಬ್ಬರು ಅವಳಿ ಸಹೋದರರು ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ತಮ್ಮ ಉಸಿರನ್ನು ಚೆಲ್ಲಿದ್ದಾರೆ. ಅವಳಿಗಳಾದ ಸೋಹನ್ ಸಿಂಗ್ ಮತ್ತು ಸುಮೇರ್ ಸಿಂಗ್ ಅವರನ್ನು ಅವರ ಸ್ಥಳೀಯ ಗ್ರಾಮವಾದ ಸಾರ್ನೋ ಕಾ ತಾಲಾದಲ್ಲಿ ಒಂದೇ ಚಿತಾಭಸ್ಮದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಒಂದೇ ದಿನ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ ತೀವ್ರ ದುಃಖಿತರಾಗಿದ್ದಾರೆ.

ಇದನ್ನೂ ಓದಿ : ಸ್ಯಾಂಟ್ರೋ ರವಿ ಬಂಧನ : ತಲೆಮರೆಸಿಕೊಂಡಿದ್ದ ಆರೋಪಿ ಗುಜರಾತ್‌ನಲ್ಲಿ ಸೆರೆ

ಇದನ್ನೂ ಓದಿ : Opposition to conversion: ಮತಾಂತರಕ್ಕೆ ವಿರೋಧಿಸಿದಕ್ಕೆ ಹೆಂಡತಿಗೆ ಕಿರುಕುಳ: ಸಿಗರೇಟ್‌ ನಿಂದ ಸುಟ್ಟು, ಮಾಂಸ ತಿನ್ನಲು ಒತ್ತಾಯ

ಇದನ್ನೂ ಓದಿ : Nashik Bus accident: ಯಾತ್ರಾರ್ಥಿಗಳಿದ್ದ ಬಸ್ಸು ಟ್ರಕ್‌ಗೆ ಢಿಕ್ಕಿ: 10 ಸಾವು, ಹಲವರಿಗೆ ಗಾಯ

Twin brothers death: The death of twin brothers in the same way within a few hours

Comments are closed.