Date churna Benefits:ಖರ್ಜೂರದ ಚೂರ್ಣ ಹೆಚ್ಚಿಸುತ್ತೆ ನಿಮ್ಮ ರೋಗನಿರೋಧಕ ಶಕ್ತಿ

(Date churna Benefits)ಸಾಕಷ್ಟು ಪೋಷಕಾಂಶ ಹೊಂದಿರುವ ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ದೇಹದಲ್ಲಿ ಹಿಮೋಗ್ಲೋಬಿನ್‌ ಮಟ್ಟವೂ ಹೆಚ್ಚಾಗುವಂತೆ ಮಾಡುತ್ತದೆ. ಪ್ರತಿನಿತ್ಯ ಖರ್ಜೂರ ತಿನ್ನುವುದರಿಂದ ನಿದ್ರೆಯ ಸಮಸ್ಯೆ ನಿವಾರಣೆ ಆಗುತ್ತದೆ. ಖರ್ಜೂರದ ಚೂರ್ಣ ಮಾಡಿಟ್ಟುಕೊಂಡು ಪ್ರತಿದಿನ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಖರ್ಜೂರದ ಚೂರ್ಣ ಹೇಗೆ ಮಾಡಿಕೊಳ್ಳುವುದು ಎನ್ನುವುದರ ಕುರಿತು ಮಾಹಿತಿ ಈ ಕೆಳಗಿನಂತಿದೆ.

(Date churna Benefitsಬೇಕಾಗುವ ಸಾಮಾಗ್ರಿಗಳು:
ಕರ್ಜೂರ
ನೀರು

ಮಾಡುವ ವಿಧಾನ

ಮೊದಲಿಗೆ ಕರ್ಜೂರದಲ್ಲಿರುವ ಬೀಜವನ್ನು ಬೇರ್ಪಡಿಸಿಕೊಂಡು ಕರ್ಜೂರವನ್ನು ಬೌಲ್ ಗೆ ಹಾಕಬೇಕು ನಂತರ ಅದಕ್ಕೆ ಒಂದು ಕಪ್‌ ನೀರು ಹಾಕಿ ಒಂದು ಗಂಟೆಗಳ ಕಾಲ ನೆನಸಿಡಬೇಕು. ನೆನಸಿಟ್ಟುಕೊಂಡ ಕರ್ಜೂರವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅನಂತರ ರುಬ್ಬಿಕೊಂಡ ಕರ್ಜೂರವನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ ದಪ್ಪ ಹದಬರುವ ವರೆಗೆ ಕಾಯಿಸಿದರೆ ಕರ್ಜೂರದ ಚೂರ್ಣ ರೆಡಿಯಾಗುತ್ತದೆ. ಕರ್ಜೂರ ಚೂರ್ಣ ತಣ್ಣಗಾದ ನಂತರ ಅದನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಡಬೇಕು. ಈ ಚೂರ್ಣವನ್ನು ಪ್ರತಿನಿತ್ಯ ಹಾಲಲ್ಲಿ ಹಾಕಿ ಕುಡಿಯುವುದರಿಂದ ರೋಗನೀರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಸಾಮಾನ್ಯವಾಗಿ ಬರಿ ಹಾಲು ಕುಡಿಯುವುದಕ್ಕೆ ಮಕ್ಕಳಿಗೆ ಇಷ್ಟ ಆಗುವುದಿಲ್ಲ ಕರ್ಜೂರದ ಚೂರ್ಣ ಹಾಲಿಗೆ ಬೇರೆಸಿ ಮಕ್ಕಳಿಗೆ ಕೊಡುವುದರಿಂದ ಇಷ್ಟ ಪಡುತ್ತಾರೆ.

ಇದಾನ್ನೂ ಓದಿ:Toothache Home Remedies : ಹಲ್ಲು ನೋವು, ಹಲ್ಲು ಹುಳುಕು ಸಮಸ್ಯೆಗೆ ಪರಿಹಾರ ಈ 5 ಮನೆಮದ್ದು

ಇದನ್ನೂ ಓದಿ:PunarPuli Juice Health Tips:ಪುನರ್‌ ಪುಳಿ ಜ್ಯೂಸ್ ಕುಡಿದ್ರೆ ತಲೆನೋವು ಹತ್ತಿರಕ್ಕೂ ಸುಳಿಯುವುದಿಲ್ಲ

ಇದನ್ನೂ ಓದಿ:Watermelon Rind Halwa: ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ರುಚಿಕರ ಹಲ್ವ ತಯಾರಿಸಿ ನೋಡಿ

ಕಷಾಯಪುಡಿ

ಬೇಕಾಗುವ ಸಾಮಾಗ್ರಿಗಳು:

  • ಧನಿಯಾ
  • ಜೀರಿಗೆ
  • ಮೆಂತ್ಯೆ
  • ಒಮದ ಕಾಳು
  • ಗಸಗಸೆ
  • ಕಾಳು ಮೆಣಸು
  • ಲವಂಗ
  • ಜೇಷ್ಠ ಮಧು
  • ಚಕ್ಕೆ
  • ಜಾಯಿಕಾಯಿ
  • ಏಲಕ್ಕಿ
  • ಅರಿಶಿಣ

ಮಾಡುವ ವಿಧಾನ:

ಮೊದಲಿಗೆ ಬಾಣಲೆಯಲ್ಲಿ ಅರ್ಧ ಮೆಂತ್ಯೆ ಹಾಕಿ ಹುರಿದುಕೊಂಡು ಬಟ್ಟಲಿಗೆ ಹಾಕಬೇಕು ನಂತರ ಒಂದು ಬೌಲ್ ಧನಿಯಾ ,‌ ಮುಕ್ಕಾಲು ಜೀರಿಗೆ, ಕಾಲು ಒಮದ ಕಾಳು ಹುರಿದುಕೊಂಡು ಬಟ್ಟಲಿಗೆ ಹಾಕಬೇಕು .15ರಿಂದ20 ಕಾಳು ಮೆಣಸು, ಒಂದು ಜಾಯಿಕಾಯಿ, ಎರಡು ಚಕ್ಕೆ ,ಜೇಷ್ಠಮಧು, ಎರಡು ಲವಂಗ ,ಚಕ್ಕೆ ಹುರಿದುಕೊಂಡು ಅನಂತರ ಗಸಗಸೆ ಯನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಬೇಕು. ಗ್ಯಾಸ್‌ ಆರಿಸಿಕೊಂಡು ಅರಿಶಿಣ ಹುರಿದುಕೊಂಡು ಬಟ್ಟಲಿಗೆ ಹಾಕಬೇಕು. ಹುರಿದ ಪದಾರ್ಥ ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಕೊಂಡು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ಪ್ರತಿದಿನ ಕಷಾಯ ಮಾಡಿಕೊಂಡು ಕುಡಿದರೆ ರೋಗನೀರೋಧಕ ಶಕ್ತಿ ಹೆಚ್ಚಾಗುತ್ತದೆ.

Date churna Benefits Date churna increases your immunity

Comments are closed.