Rape College Student : ಎನರ್ಜಿ ಮಾತ್ರೆ ನೀಡಿ ಅತ್ಯಾಚಾರ : ಕಾಲೇಜು ವಿದ್ಯಾರ್ಥಿನಿ ಸಾವು, ಆರೋಪಿ ಅರೆಸ್ಟ್

ಉತ್ತರ ಪ್ರದೇಶ : ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ (Rape College Student) ಎನರ್ಜಿ ಮಾತ್ರೆ ನೀಡಿ ಯುವಕನೋರ್ವ ಅತ್ಯಾಚಾರ ಎಸಗಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದಾಗಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆಯನ್ನು ಕೈಗೊಂಡಿದ್ದಾರೆ.

ಉತ್ತರ ಪ್ರದೇಶದ ಉನ್ನಾವೊದಲ್ಲಿ ಈ ಘಟನೆ ನಡೆದಿದೆ. ರಾಜ್‌ಗೌತಮ್‌ ಎಂಬಾತನೇ ಅತ್ಯಾಚಾರವೆಸಗಿದ ಆರೋಪಿ. ಮನೆಯಲ್ಲಿ ಕಾಲೇಜು ವಿದ್ಯಾರ್ಥಿಯೋರ್ವಳು ಇರುವುದನ್ನು ತಿಳಿದು ಮನೆಗೆ ಬಂದಿದ್ದ ರಾಜ್‌ಗೌತಮ್‌ ವಿದ್ಯಾರ್ಥಿನಿಗೆ ಕಾಮೋತ್ತೇಜಕ ಮಾತ್ರೆಯನ್ನು ನೀಡಿದ್ದಾನೆ. ಈ ವೇಳೆಯಲ್ಲಿ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದರೂ ಕೂಡ ಆಕೆ ಮೂರ್ಚೆ ಹೋಗುವವರೆಗೂ ಅತ್ಯಾಚಾರ ಎಸಗಿದ್ದಾನೆ. ಆದರೆ ಆಕೆಗೆ ತೀವ್ರ ರಕ್ತಶ್ರಾವ ಉಂಟಾಗುತ್ತಿದ್ದಂತೆಯೇ ಭಯಗೊಂಡ ರಾಜ್‌ಗೌತಮ್‌ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ನಂತರ ಆಕೆಯ ಕಿರಿಯ ಸಹೋದರಿ ಮನೆಗೆ ಹಿಂದಿರುಗಿದಾಗ ಸಂತ್ರಸ್ತೆ ಹಾಸಿಗೆಯ ಮೇಲೆ ಪ್ರಜ್ಞಾಹೀನತೆಯಲ್ಲಿ ಬಿದ್ದಿರುವುದನ್ನು ನೋಡಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ವಿದ್ಯಾರ್ಥಿನಿಯ ಗುಪ್ತಾಂಗಕ್ಕೆ ಗಂಭೀರ ಗಾಯವಾಗಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ನೆರೆಹೊರೆಯವರು ಮತ್ತು 65 ವರ್ಷದ ಮಹಿಳೆ ಸಾಥ್ ಕೊಟ್ಟಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ನಂತರ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ ಆರೋಪಿ ಗೌತಮ್ ಮಾಹಿತಿ ಲಭ್ಯವಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ತಾನು ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ : Human Sacrifice: ಸತ್ತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸನ್ನೇ ಬಲಿ ಕೊಡಲು ಮುಂದಾದ ಮಹಿಳೆ.. ಆಮೇಲೆ ನಡೆದಿದ್ದೇ ಬೇರೆ..

ಇದನ್ನೂ ಓದಿ : Crime News: ಎರಡನೇ ಪತ್ನಿಯನ್ನು ಜೈಲಿಗಟ್ಟಲು ತನ್ನ ಮಗಳನ್ನೇ ಬಲಿ ಕೊಟ್ಟ ಪಾಪಿ ತಂದೆ

ಇದನ್ನೂ ಓದಿ : Mandya News : ಈಜಲು ತೆರಳಿದ್ದ ರಾಷ್ಟೀಯ ಮಟ್ಟದ ಸೈಕ್ಲಿಂಗ್‌ ಕ್ರೀಡಾಪಟು ಸಾವು

ಇದನ್ನೂ ಓದಿ : Crime News: ಪತಿಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಂದ ಪತ್ನಿ ಮತ್ತು ಪ್ರಿಯಕರ

ಸಂತ್ರಸ್ತೆ ಮನೆಯಲ್ಲಿ ಒಂಟಿಯಾಗಿದ್ದಾಳೆ ಎಂದು ತಿಳಿದ ಗೌತಮ್ ಆಕೆಯ ಮನೆಗೆ ತೆರಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗುವ ಮೊದಲೇ ಆಕೆಗೆ ಕಾಮೋತ್ತೇಜಕ ಮಾತ್ರೆಯನ್ನು ನೀಡಿದ್ದ ಅನ್ನೋದನ್ನು ಒಪ್ಪಿಕೊಂಡಿದ್ದಾನೆ. ಅತ್ಯಾಚಾರದ ವೇಳೆಯಲ್ಲಿ ಖಾಸಗಿ ಅಂಗದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿರುವುದನ್ನೂ ಕೂಡ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಶಂಕರ್ ತಿಳಿಸಿದ್ದಾರೆ.

rape college student rape by giving energy pill college student dies accused arrested

Comments are closed.