ಬೆಂಗಳೂರು : ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಖ್ಯಾತ ನಟಿಗೆ ಶಾಕ್ ಎದುರಾಗಿದೆ. ನಟಿಯ ಸಹೋದರನ ವಿರುದ್ದ ಇದೀಗ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಯುವತಿಯೋರ್ವಳು ಕೀರ್ತಿಚಂದ್ರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೀರ್ತಿಚಂದ್ರ (Keerthi Chandra) ತನ್ನನ್ನು ಮದುವೆ ಆಗುವುದಾಗಿ ನಂಬಿಸಿ ನಂತರ ಮೋಸದಿಂದ ದೈಹಿಕ ಸಂಪರ್ಕ ಮಾಡಿ ಬಳಿಕ ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾಳೆ.
ಕೀರ್ತಿ ಚಂದ್ರ ಸ್ಯಾಂಡಲ್ ವುಡ್ ನ ಖ್ಯಾತ ನಟಿಯ ಸಹೋದರ ಅಂತ ಹೇಳಿಕೊಂಡು, Shaadi.com ಮೂಲಕ 2021 ರ ಮೇ ನಲ್ಲಿ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ. ಬಳಿಕ ನಂತ್ರ ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ನಂಬರ್ ವಿನಿಮಯ ಮಾಡಿಕೊಂಡಿದ್ದ ಯುವತಿ ಹಾಗೂ ಕೀರ್ತಿ ಚಂದ್ರ ಸ್ನೇಹಿತರಾಗಿದ್ದರು. ನಂತರ ಮದುವೆ ಆಗುವುದಾಗಿ ನಂಬಿಸಿದ್ದ ಕೀರ್ತಿಚಂದ್ರ, ಯುವತಿಯನ್ನು ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ.
ಇನ್ನು ಯುವತಿ ಕೀರ್ತಿಚಂದ್ರ ತನ್ನನ್ನು ಮದುವೆಯಾಗುವುದಾಗಿ ನಂಬಿದ್ದು, ಇದೇ ನಂಬಿಕೆಯಿಂದ ಕೀರ್ತಿ ಚಂದ್ರ ಹುಟ್ಟುಹಬ್ಬಕ್ಕೆ ಐ ಫೋನ್ ಸಹ ಗಿಫ್ಟ್ ನೀಡಿದ್ದಳು ಎನ್ನಲಾಗಿದೆ. ಅಲ್ಲದೇ ಲ್ಯಾಪ್ ಟ್ಯಾಪ್ ಹಾಗೂ ಆ್ಯಪಲ್ ವಾಚ್ ಸಹ ನೀಡಿದ್ದ ಯುವತಿ ಮನಸ್ಸಾರೆ ಪ್ರೀತಿಸಲಾರಂಭಿಸಿದ್ದಳು. ಇದಾದ ಬಳಿಕ ಜಯನಗರದ ಖಾಸಗಿ ಹೋಟೆಲ್ ನಲ್ಲಿ ಯುವತಿ ಮೇಲೆ ಕೀರ್ತಿಚಂದ್ರ ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಆದರೆ ಇದಾದ ಬಳಿಕ ಕೀರ್ತಿಚಂದ್ರ ಯುವತಿ ಸಂಪರ್ಕಕ್ಕೆ ಸಿಗದೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗ್ತಿದೆ. ಪೋನ್ ಸಂಪರ್ಕ ಕ್ಕೂ ಸಿಗದೇ, ಯುವತಿಯನ್ನು ಮದುವೆಯೂ ಆಗದೇ ಕೀರ್ತಿಚಂದ್ರ ಎಸ್ಕೇಪ್ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೀರ್ತಿಚಂದ್ರ ಸಂಪರ್ಕಕ್ಕೆ ಸಿಗದೇ ಇರೋದರಿಂದ ಕಂಗಲಾಗಿರೋ ನೊಂದ ಯುವತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅತ್ಯಾಚಾರದ ಆರೋಪ ಮಾಡಿದ್ದಾರೆ. ಯುವತಿ ದೂರು ಹಾಗೂ ಯುವತಿ ನೀಡಿದ ಸಾಕ್ಷ್ಯಗಳನ್ನು ಆಧರಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಕೀರ್ತಿ ಚಂದ್ರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಪಡೆಯೋಕೆ ಕೀರ್ತಿಚಂದ್ರ ಅವರನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾಗಿದ್ದು, ಯುವತಿ ಆರೋಪಕ್ಕೆ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಇದನ್ನೂ ಓದಿ : ಮತ್ತೆ ಟಾಲಿವುಡ್ ಅಂಗಳಕ್ಕೆ ರಶ್ಮಿಕಾ : ರಾಮ್ ಪೊತಿನೇನಿಗೆ ಜೊತೆಯಾದ ಪುಷ್ಪ ಬೆಡಗಿ
ಇದನ್ನೂ ಓದಿ : ಪ್ರಭಾಸ್, ರಾಜಮೌಳಿ ಕಾಂಬಿನೇಷನ್‌ನಲ್ಲಿ ತೆರೆಗೆ ಬರಲಿದೆ ಬಾಹುಬಲಿ – 3
( Sandalwood famous actress brother Keerthi Chandra Arrest )