ಮಂಗಳವಾರ, ಜೂನ್ 17, 2025
HomeBreakingಡ್ರಗ್ಸ್ ದಂಧೆ ಪ್ರಕರಣ : ಇಂದು ಪೊಲೀಸ್ ಕಸ್ಟಡಿ ಅಂತ್ಯ : ಜೈಲು ಸೇರ್ತಾರಾ ನಟಿ...

ಡ್ರಗ್ಸ್ ದಂಧೆ ಪ್ರಕರಣ : ಇಂದು ಪೊಲೀಸ್ ಕಸ್ಟಡಿ ಅಂತ್ಯ : ಜೈಲು ಸೇರ್ತಾರಾ ನಟಿ ಸಂಜನಾ

- Advertisement -

ಬೆಂಗಳೂರು : ಸ್ಯಾಂಡಲ್​ವುಡ್ ಡ್ರಗ್ಸ್ ಆರೋಪ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದಾರೆ. ಇನ್ನು ಸಿಸಿಬಿ ವಶದಲ್ಲಿರುವ ಸಂಜನಾ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಜನಾ ಕೂಡ ರಾಗಿಣಿಯಂತೆ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆಯಿದೆ.

Sanjana New

ನಟಿ ಸಂಜನಾ ಮಾತ್ರವಲ್ಲದೇ ಡ್ರಗ್​ ಪ್ರಕರಣದ ಆರೋಪಿಗಳಾದ ವಿರೇನ್ ಖನ್ನಾ ಹಾಗೂ ರವಿಶಂಕರ್ ಪೊಲೀಸ್ ಕಸ್ಟಡಿ ಸಹ ಇಂದಿಗೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂದು ಮದ್ಯಾಹ್ನದ ಬಳಿಕ ಮೂವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಈಗಾಗಲೆ 11 ದಿನಗಳ ಕಾಲ ನಟಿ ಸಂಜನಾ ಅವರನ್ನು ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ತುಂಬಾ ಕಡಿಮೆ ಇದೆ.

Alvas1

ಯಾವುದೇ ಪ್ರಕರಣದಲ್ಲಿಯೂ ಆರೋಪಿಯನ್ನು ಕೇವಲ 14 ದಿನಗಳು ಮಾತ್ರ ಪೊಲೀಸ್ ಕಸ್ಟಡಿಯಲ್ಲಿ ಇಟ್ಟುಕೊಳ್ಳಲು ಮಾತ್ರವೇ ಆವಕಾಶವಿದೆ. ಸಂಜನಾ ಪೊಲೀಸ್ ಕಸ್ಟಡಿಗೆ ಈಗಾಗಲೇ 11 ದಿನಗಳು ಕಳೆದಿದೆ. ಹೀಗಾಗಿ ಮತ್ತೆ ಅವರನ್ನು ಕಸ್ಟಡಿಗೆ ಕೇಳೋದು ಅನುಮಾನ.

ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಯ ಬಳಿಕ ಇನ್ಸ್ಪೆಕ್ಟರ್ ಅಂಜುಮಾಲ ನೇತೃತ್ವದಲ್ಲಿ ಮತ್ತೊಮ್ಮೆ ಮಹಿಳಾ ಕೇಂದ್ರದಲ್ಲಿ ನಟಿ ಸಂಜನಾ ವಿಚಾರಣೆ ನಡೆಯಲಿದೆ. ವಿಚಾರಣೆ ಆದ ಬಳಿಕ ಮೆಡಿಕಲ್ ಚೆಕಪ್ ಮಾಡಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular