ಶಿವಮೊಗ್ಗ : Shivamogga Sarvakar Photo Controversy : ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವು ಉದ್ವಿಘ್ನತೆಗೆ ತಿರುಗಿದೆ. ವೀರ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ವಿಚಾರದಲ್ಲಿ ಎರಡು ಕೋಮಿನ ಯುವಕರ ನಡುವೆ ಭಾರೀ ಗಲಾಟೆ ಏರ್ಪಟ್ಟಿದ್ದು ಪರಿಸ್ಥಿತಿ ಕಾವೇರುತ್ತಿದೆ. ಈ ನಡುವೆ ನಗರದ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದ್ದು ಇಡೀ ಶಿವಮೊಗ್ಗದಲ್ಲಿ ಪರಿಸ್ಥಿತಿ ಬಹಳಷ್ಟು ಸೂಕ್ಷ್ಮವಾಗಿದೆ.
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ನಡುವೆ ಗಲಾಟೆ ಏರ್ಪಟ್ಟಿದ್ದು ಸಾರ್ವಕರ್ ಫೋಟೋವನ್ನು ತೆಗೆದು ಟಿಪ್ಪು ಸುಲ್ತಾನ್ರ ಫೋಟೋವನ್ನು ಇಡಲು ಒಂದು ಗುಂಪು ಮುಂದಾಗಿತ್ತು. ಸಾರ್ವಕರ್ ಫೋಟೋವನ್ನು ತೆಗೆಯಲು ಒಪ್ಪಿದ ಪೊಲೀಸರು ಟಿಪ್ಪು ಫೋಟೋವನ್ನು ಇಡಲು ನಿರಾಕರಿಸಿದ್ದರು. ಈ ವೇಳೆಯಲ್ಲಿ ಎರಡು ಕೋಮಿನ ಜೊತೆಯಲ್ಲಿ ಜಟಾಪಟಿ ಉಂಟಾಗಿದೆ. ವೀರ ಸಾರ್ವಕರ್ ಫೋಟೋವನ್ನು ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡಿರುವ ಹಿಂದೂಪರ ಸಂಘಟನೆ ಕಾರ್ಯ
ಕರ್ತರು ಶಿವಪ್ಪ ನಾಯಕ ವೃತ್ತದಲ್ಲಿ ಗುಂಪು ಸೇರಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಟಿಯರ್ ಗ್ಯಾಸ್ ಸಿಡಿಸಲು ಮುಂದಾಗಿದ್ದಾರೆ. ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚೆನ್ನಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಶಿವಮೊಗ್ಗದಲ್ಲಿ ವೀರ ಸಾರ್ವಕರ್ ಫೋಟೋ ವಿಚಾರವಾಗಿ ಗಲಾಟೆ ನಡೆಯುತ್ತಿರುವ ಬೆನ್ನಲ್ಲೇ ಇಬ್ಬರು ಯುವಕರ ಮೇಲೆ ಚಾಕು ಇರಿತವಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಎಂಬವನ ಮೇಲೆ ಚಾಕು ಇರಿತವಾದ ಬೆನ್ನಲ್ಲೇ ಇದೀಗ ಅಶೋಕನಗರ ಬಡಾವಣೆಯಲ್ಲಿ ಮತ್ತೊಬ್ಬ ಯುವಕನಿಗೆ ಚಾಕು ಇರಿಯಲಾಗಿದೆ. ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು 27 ವರ್ಷದ ಪ್ರವೀಣ್ ಕುಮಾರ್ ಎಂಬವರ ಮೇಲೆ ಚಾಕು ಇರಿತ ಮಾಡಿದ್ದಾರೆ. ದುಷ್ಕರ್ಮಿಗಳು ಪ್ರವೀಣ್ ಕುಮಾರ್ಗೆ ಚಾಕು ಚುಚ್ಚಿ ಪರಾರಿಯಾಗಿದ್ದಾರೆ. ಪ್ರವೀಣ್ ಕುಮಾರ್ ಹಾಗೂ ಪ್ರೇಮ್ ಸಿಂಗ್ರಿಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಇದನ್ನು ಓದಿ : Riot over Sarvakar photo : ವೀರ ಸಾರ್ವಕರ್ ಭಾವಚಿತ್ರ ಇಡುವ ವಿಚಾರಕ್ಕೆ ಮತ್ತೆ ಕಿರಿಕ್ , ಯುವಕನಿಗೆ ಚಾಕು ಇರಿತ
ಇದನ್ನೂ ಓದಿ : Cricketers celebrates Independence Day: 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಕ್ರಿಕೆಟಿಗರು
Sarvakar Photo Controversy : Two youths stabbed in Shivamogga