Mangalore : ಸಾರ್ವಕರ್​ ಫೋಟೋ ಪ್ರದರ್ಶಿಸಿದ್ದಕ್ಕೆ ಶಾಲಾ ಶಿಕ್ಷಕರ ವಿರುದ್ಧ ಎಸ್​ಡಿಪಿಐ,ಕಾಂಗ್ರೆಸ್​ ಸದಸ್ಯರ ಆಕ್ರೋಶ

ಮಂಗಳೂರು : Mangalore : ಶಿವಮೊಗ್ಗದಲ್ಲಿ ವೀರ ಸಾವರ್ಕರ್​​​ ಫೋಟೋ ಪ್ರದರ್ಶನ ವಿಚಾರವಾಗಿ ಪರಿಸ್ಥಿತಿಯು ಉದ್ವಿಘ್ನತೆಗೆ ಸಾಕ್ಷಿಯಾಗಿದೆ. ಮುಸ್ಲಿಂ ಸಂಘಟನೆಯ ಯುವಕರು ಹಾಗೂ ಹಿಂದೂ ಕಾರ್ಯಕರ್ತರ ನಡುವಲ್ಲಿ ವೀರ ಸಾರ್ವಕರ್​ ಫೋಟೋ ವಿಚಾರವಾಗಿ ಮಾತಿನ ಚಕಮಕಿ ಏರ್ಪಟ್ಟಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಲ್ಲದೇ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್​ 144 ಜಾರಿಗೊಳಿಸಿದ್ದಾರೆ. ಅಲ್ಲದೇ ಶಿವಮೊಗ್ಗದಲ್ಲಿ ಒಂದೇ ದಿನ ಇಬ್ಬರು ಯುವಕರ ಮೇಲೆ ಚಾಕು ಇರಿತವಾಗಿದ್ದು ಪರಿಸ್ಥಿತಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಈ ಎಲ್ಲದರ ನಡುವೆ ಇತ್ತ ಕಡಲ ನಗರಿ ಮಂಗಳೂರಿನಲ್ಲಿಯೂ ಸ್ವಾತಂತ್ರ್ಯೋತ್ಸವದ ನಿಮಿತ್ತ ದೇಶ ಭಕ್ತಿಗೀತೆಯ ನೃತ್ಯ ಪ್ರದರ್ಶನದ ಸಂದರ್ಭದಲ್ಲಿ ವೀರ ಸಾವರ್ಕರ್​ ಫೋಟೋ ಪ್ರದರ್ಶಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಗುರುಪುರ ಪಂಚಾಯತ್​​ನ ಎಸ್​​ಡಿಪಿಐ ಹಾಗೂ ಕಾಂಗ್ರೆಸ್​ ಸದಸ್ಯರು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ವೀರ ಸಾವರ್ಕರ್​ ಫೋಟೋವನ್ನು ಪ್ರದರ್ಶಸಿದ್ದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳು ನೃತ್ಯ ಪ್ರದರ್ಶನದ ಸಂದರ್ಭದಲ್ಲಿ ವೀರ ಸಾವರ್ಕರ್​ ಫೋಟೋವನ್ನು ಪ್ರದರ್ಶಿಸಿದ್ದರು. ಈ ವೇಳೆ ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಗುರುಪುರ ಪಂಚಾಯತ್​ ವ್ಯಾಪ್ತಿಯ ಎಸ್​ಡಿಪಿಐ ಹಾಗೂ ಕಾಂಗ್ರೆಸ್​ ಪಕ್ಷದ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರನ್ನು ಕರೆಯಿಸಿ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಮಾಡಿದ್ದಾರೆ. ಮಂಗಳೂರು ಹೊರವಲಯದ ಗುರುಪುರ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಗುರುಪುರ ಪಂಚಾಯತ್​​ನ ಆಡಳಿತಾರೂಢ ಎಸ್​ಡಿಪಿಐ ಹಾಗೂ ಕಾಂಗ್ರೆಸ್​ ಸದಸ್ಯರು ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Two youths stabbed in Shimoga : ಸಾವರ್ಕರ್​​​ ಫೋಟೋ ವಿವಾದ : ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ

ಇದನ್ನೂ ಓದಿ : Rishabh Pant brand ambassador : ದೆಹಲಿಯ ರಿಷಭ್ ಪಂತ್ ಉತ್ತರಾಖಂಡ್ ಸರ್ಕಾರದ ಬ್ರಾಂಡ್ ಅಂಬಾಸಿಡರ್

Controversy over Sarvakar’s photo in Mangalore school

Comments are closed.