School Bus caught fire: ಶಾಲಾ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರೀ ಅನಾಹುತ

ಬಳ್ಳಾರಿ : (School Bus caught fire) ಮೂವತ್ತು ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ಬಸ್‌ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನಡೆಯಬೇಕಿದ್ದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಬಸ್‌ ಚಲಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಬಸ್‌ ಚಾಲಕ ಕೂಡಲೇ ಬಸ್‌ ನಿಲ್ಲಿಸಿ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಬೆಂಕಿ ಕ್ಷಣಮಾತ್ರದಲ್ಲೇ ಸಂಪೂರ್ಣ ಬಸ್‌ ಅನ್ನು ಆವರಿಸಿದ್ದು, ಬಸ್‌ ಸುಟ್ಟು ಕರಕಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಮೂವತ್ತು ಮಕ್ಕಳ ಜೀವ ಉಳಿದಿದೆ. ಸಿರಗುಪ್ಪ ಪಟ್ಟಣದ ವಿಶ್ವ ಜ್ಯೋತಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್‌ ಇದಾಗಿದ್ದು, ಮಕ್ಕಳು ಪರೀಕ್ಷೆ ಮುಗಿಸಿ ಬಸ್‌ ನಲ್ಲಿ ಮನೆಗೆ ತೆರಳುತ್ತಿದ್ದರು. ಸಿರಗುಪ್ಪದಿಂದ ತೆಕ್ಕಲಕೊಟೆ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಬಸ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್‌ ಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಹೊತ್ತಿ ಉರಿದ ಮನೆ ಮತ್ತು ಬಟ್ಟೆ ಅಂಗಡಿ : ದಂಪತಿ ಸಜೀವ ದಹನ

ಯಾದಗಿರಿ : ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಮನೆ ಹಾಗೂ ಬಟ್ಟೆ ಅಂಗಡಿ ಹೊತ್ತಿ ಉರಿದಿದ್ದು ದಂಪತಿಗಳು ಸಜೀವ ದಹನವಾಗಿದ್ದಾರೆ. ರಾಗಯ್ಯ (೩೯ ವರ್ಷ) ಹಾಗೂ ಪತ್ನಿ ಶಿಲ್ಪ ( ೩೫ ವರ್ಷ) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟ ದಂಪತಿಗಳು.

ಅಶೋಕಯ್ಯ ಕಾಳಬೆಳಗುಂದಿ ಎನ್ನುವವರಿಗೆ ಸೇರಿದ ಮನೆ ಹಾಗೂ ಅದೇ ಮನೆಯಲ್ಲಿದ್ದ ಬಟ್ಟೆ ಅಂಗಡಿಗೆ ಏಕಾಏಕಿ ಬೆಂಕಿ ಆವರಿಸಿಕೊಂಡಿದ್ದು, ಇಡೀ ಮನೆಗೆ ಬೆಂಕಿಯ ಹೊಗೆ ಆವರಿಸಿಕೊಂಡಿದೆ. ಇದರಿಂದಾಗಿ ದಂಪತಿಗಳಿಗೆ ಮನೆಯಿಂದ ಹೊರಬರಲು ಸಾಧ್ಯವಾಗದೇ ಪರದಾಡಿದ್ದು, ಬೆಂಕಿಯಲ್ಲಿ ದಂಪತಿಗಳು ಸುಟ್ಟು ಕರಕಲಾಗಿದ್ದಾರೆ. ನಿನ್ನೆ ರಾತ್ರಿ ಈ ಬೆಂಕಿ ಅವಘಡ ಸಂಭವಿಸಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸದ್ಯ ಘಟನೆಯ ಕುರಿತು ಸೈದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Boy dies by witchcraft : ಬಾಲಕನನ್ನು ನರಬಲಿ ಕೊಟ್ಟ ಪಾಪಿಗಳು : ಕುಟುಂಬದಿಂದಲೇ ಕೃತ್ಯ

School Bus caught fire: A fire in a school bus: A huge disaster was missed

Comments are closed.