ಮಡಿಕೇರಿ: (Scooter collision) ರಸ್ತೆಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಸ್ಕೂಟರ್ ಢಿಕ್ಕಿ ಹೊಡೆದಿದ್ದು, ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿಯ ಮೇಕೇರಿ ಗ್ರಾಮದಲ್ಲಿ ನಡೆದಿದೆ. ಅಪಘಾತಕ್ಕೊಳಗಾದ ಮಗುವನ್ನು ಅಸ್ಸಾಂ ಮೂಲದ ಇಳಿಜಾ ಎಂದು ಗುರುತಿಸಲಾಗಿದೆ.
ಮೇಕೇರಿಯಲ್ಲಿ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಸ್ಕೂಟರ್ ಢಿಕ್ಕಿ (Scooter collision) ಹೊಡೆದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬೈಕ್ ಸವಾರ ಕೂಡ ಕೆಳಗಡೆ ಬಿದ್ದಿದ್ದು, ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ವಿಡಿಯೋ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಆಘಾತಕಾರಿಯಾಗಿದೆ.
ಈ ರೀತಿಯ ದುರ್ಘಟನೆಗಳಿಗೆ ಮಕ್ಕಳ ಪೋಷಕರು ಹೊಣೆಯೋ ಅಥವಾ ವಾಹನ ಚಾಲಕರು ಹೊಣೆಯೋ ತಿಳಿಯುತ್ತಿಲ್ಲ. ಒಂದೆಡೆ ಪೋಷಕರು ಮಕ್ಕಳ ಮೇಲೆ ನಿರ್ಲಕ್ಷ್ಯ ತೋರಿ ಮಕ್ಕಳನ್ನು ಎಲ್ಲೆಂದರಲ್ಲಿ ಆಟವಾಡಲು ಬಿಡುತ್ತಾರೆ. ಏನು ತಿಳಿಯದ ಮಕ್ಕಳ ಮೇಲೆ ನಿಗಾ ಇಡದೇ ಪೋಷಕರು ಹೇಗೆಂದರಲ್ಲಿ ಎಲ್ಲೆಂದರಲ್ಲಿ ಬಿಡುತ್ತಾರೆ.
ಇನ್ನೊಂದೆಡೆಯಲ್ಲಿ ರಸ್ತೆಯಲ್ಲಿ ವಾಹನ ಚಲಾಯಿಸುವವರು ಕೂಡ ನಿರ್ಲಕ್ಷ್ಯ ತೋರಿ ವಾಹನ ಚಲಾಯಿಸುತ್ತಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರು ಕೂಡ ಪೋಷಕರಾಗಲೀ ಅಥವಾ ವಾಹನ ಚಾಲಕರಾಗಲೀ ಯಾವುದೇ ರೀತಿಯಲ್ಲಿ ನಿಗಾ ತೋರುತ್ತಿಲ್ಲ.
ಇದನ್ನೂ ಓದಿ : Ice collapse-3 died: ವಾಷಿಂಗ್ಟನ್ ಸರೋವರದಲ್ಲಿ ಮಂಜುಗಡ್ಡೆ ಕುಸಿತ : ಮೂವರು ಭಾರತೀಯರು ಸಾವು
ಇದನ್ನೂ ಓದಿ : Former CEO and MD of ICICI Bank : ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ದಂಪತಿ ಬಂಧನ : ಹೈಕೋರ್ಟ್ ಮೊರೆ ಹೋದ ದಂಪತಿಗಳು
ಇದನ್ನೂ ಓದಿ : Tourist bus collision: ಪ್ರವಾಸಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಗೆ ಮಿನಿ ಬಸ್ ಮುಖಾಮುಖಿ ಢಿಕ್ಕಿ : 12 ವಿದ್ಯಾರ್ಥಿಗಳಿಗೆ ಗಾಯ
(Scooter collision) A five-year-old child who was playing on the road was hit by a scooter and the child died on the spot in Makeri village of Madikeri. The accident victim has been identified as Ilija from Assam