Ice collapse-3 died: ವಾಷಿಂಗ್ಟನ್‌ ಸರೋವರದಲ್ಲಿ ಮಂಜುಗಡ್ಡೆ ಕುಸಿತ : ಮೂವರು ಭಾರತೀಯರು ಸಾವು

ವಾಷಿಂಗ್ಟನ್:‌ (Ice collapse-3 died) ಅಮೇರಿಕಾದ ಅರಿಝೋನಾ ರಾಜ್ಯದಲ್ಲಿ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಂಜುಗಡ್ಡೆ ಕುಸಿದಿದ್ದು, ಓರ್ವ ಮಹಿಳೆ ಸೇರಿದಂತೆ ಮೂವರು ಸರೋವರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಅರಿಝೋನಾದ ಕೊಕೊನಿನೊ ಕೌಂಟಿಯ ವುಡ್ಸ್ಟ್‌ ಕ್ಯಾನ್ಯನ್‌ ಲೇಕ್‌ ನಲ್ಲಿ ಸಂಭವಿಸಿದೆ.

ಮೃತರನ್ನು ನಾರಾಯಣ ಮುದ್ದಣ (49 ವರ್ಷ), ಗೋಕುಲ್‌ ಮೆಡಿಸೇಟಿ (47 ವರ್ಷ) ಹಾಗೂ ಹರಿತಾ ಮುದ್ದಣ ಎಂದು ಗುರುತಿಸಲಾಗಿದ್ದು, ಮೂವರ ಮೃತದೇಹಗಳನ್ನು ಸರೋವರದಿಂದ ಹೊರತೆಗೆಯಲಾಗಿದೆ. ಮಹಿಳೆಯನ್ನು ನೀರಿನಿಂದ ಹೊರತೆಗೆಯುವ ವೇಳೆ ಆಕೆ ಉಸಿರಾಟ ನಡೆಸುತ್ತಿದ್ದು, ಆಕೆಯನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನ ಯಶಸ್ವಿಯಾಗದೇ ಅವರು ಅಲ್ಲಿಯೇ ಮೃತ (Ice collapse-3 died) ಪಟ್ಟಿದ್ದಾರೆ.

ಇವರು ಮೂಲತಃ ಭಾರತದವರು ಎಂದು ಕೊಕೊನಿನೊ ಕೌಂಟಿ ಶೆರಿಫ್‌ ಕಚೇರಿ ತಿಳಿಸಿದ್ದು, ಅರಿಝೋನಾದ ಚಾಂಡ್ಲರ್‌ ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. CCSO ಯ ಅಧಿಕಾರಿಗಳು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಇಬ್ಬರು ಪುರುಷರು ಮತ್ತು ಮಹಿಳೆ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದಿದ್ದಾರೆ. ಈ ವೇಳೆ ಮಂಜುಗಡ್ಡೆ ಕುಸಿದಿದ್ದು, ಮೂವರು ಸರೋವರಕ್ಕೆ ಬಿದ್ದು, ಮೃತಪಟ್ಟಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಆ ಪ್ರದೇಶದಲ್ಲಿದ್ದ ಸಬ್‌ ಸ್ಟೇಷನ್‌ ನಲ್ಲಿದ್ದ ರಕ್ಷಣಾ ತಂಡವನ್ನು ಕರೆತರಲಾಯಿತು.

ವುಡ್ಸ್ ಕ್ಯಾನ್ಯನ್ ಸರೋವರವು ಅಪಾಚೆ-ಸಿಟ್‌ಗ್ರೀವ್ಸ್ ರಾಷ್ಟ್ರೀಯ ಅರಣ್ಯಗಳಲ್ಲಿ ಪೇಸನ್‌ನ ಪೂರ್ವದಲ್ಲಿದೆ. ಇದು ಪಾದಯಾತ್ರಿಕರು, ಗಾಳಹಾಕಿ ಮೀನು ಹಿಡಿಯುವವರು ಮತ್ತು ಇತರ ಹೊರಾಂಗಣ ಉತ್ಸಾಹಿಗಳಲ್ಲಿ ಜನಪ್ರಿಯವಾಗಿರುವ ಪ್ರದೇಶವಾಗಿದೆ. ಒಂದು ಮಿಲಿಯನ್‌ ಗಿಂತಲೂ ಹೆಚ್ಚು ಅಮೇರಿಕನ್ನರು ಹಾಗೂ ಕೆನಡಿಯನ್ನರು ಇಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಚಳಿಗಾಲದ ಚಂಡಮಾರುತದ ಪ್ರಭಾವದಿಂದ ಸುಮಾರು 250 ಮಿಲಿಯನ್ ಜನರು ಪ್ರಭಾವಿತರಾಗಿದ್ದಾರೆ ಮತ್ತು ಕ್ವಿಬೆಕ್‌ನಿಂದ ಟೆಕ್ಸಾಸ್‌ವರೆಗೆ 3,200 ಕಿಮೀಗಿಂತ ಹೆಚ್ಚು ವಿಸ್ತರಿಸಿರುವ ಚಂಡಮಾರುತಕ್ಕೆ ಕನಿಷ್ಠ 19 ಸಾವುಗಳು ಸಂಬಂಧಿಸಿವೆ.

ಇದನ್ನೂ ಓದಿ : Former CEO and MD of ICICI Bank : ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ದಂಪತಿ ಬಂಧನ : ಹೈಕೋರ್ಟ್‌ ಮೊರೆ ಹೋದ ದಂಪತಿಗಳು

While walking on a frozen lake in the US state of Arizona, the ice collapsed and three people, including a woman, fell into the lake and drowned. The incident occurred at Woods Canyon Lake in Coconino County, Arizona.

Comments are closed.